ಹೈದರಾಬಾದ್: ಭಾರತ ತಂಡವು ಮುಂದಿನ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ಸರಣಿಗೆ ಮುಂಚಿತವಾಗಿ ಒಂದು ವಾರ ಕ್ಯಾರಂಟೈನ್‌ನಲ್ಲಿ ಕಳೆಯಲಿದ್ದು, ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ತಂಡದ ವಿರುದ್ಧ ತಮ್ಮ ಮಾರ್ಗವನ್ನು ಯೋಜಿಸಲಿದ್ದಾರೆ ಎಂದು ತಂಡದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
"ನಾವು ಆಸ್ಟ್ರೇಲಿಯಾದಲ್ಲಿ ಅಸಾಧಾರಣವಾದ ಕೆಲಸವನ್ನು ಮಾಡಿದ್ದೇವೆ. ನಮ್ಮ ಯಶಸ್ಸಿನ ಪ್ರತಿಯೊಂದು ಭಾಗವನ್ನು ಆನಂದಿಸಿದ್ದೇವೆ, ಆದರೆ ನಾವು ಇದನ್ನು ಮರೆತು ಇಂಗ್ಲೆಂಡ್ ವಿರುದ್ಧದ ಪ್ರವಾಸವನ್ನು ಎದುರು ನೋಡಬೇಕಿದ್ದು, ಅದಕ್ಕಾಗಿ ನಮ್ಮ ಯೋಜನೆಗಳನ್ನು ನಾವು ಹೊಂದಿದ್ದೇವೆ. ಸರಣಿಯ ಒಂದು ವಾರದ ಮೊದಲು ನಾವು ಕ್ವಾರಂಟೈನ್ನಲ್ಲಿ ಇರಬೇಕಿದೆ ಈ ಸಮಯದಲ್ಲಿ ಎಲ್ಲಾ ಯೋಜನೆಗಳನ್ನು ಮಾಡಲಾಗುವುದು" ಎಂದು ಭಾರತದ ಬೌಲಿಂಗ್ ತರಬೇತುದಾರ ಭರತ್ ಅರುಣ್ ಹೇಳಿದ್ದಾರೆ.
ಫೆಬ್ರವರಿ 5 ರಿಂದ ಚೆನ್ನೈನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, 13 ರಿಂದ 17 ರ ವರೆಗೆ 2ನೇ ಪಂದ್ಯ ನಡೆಯಲಿದೆ. ಫೆಬ್ರವರಿ 24 ರಿಂದ 28 ವರೆಗೆ ಅಹಮದಾವಾದ್ನಲ್ಲಿ 3ನೇ ಟೆಸ್ಟ್ ಮತ್ತು ಮಾರ್ಚ್ 4 ರಿಂದ 8 ವರೆಗೆ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ನಂತರ ಅಹಮದಾಬಾದ್‌ನಲ್ಲಿ ಐದು ಪಂದ್ಯಗಳ ಟಿ-20 ಸರಣಿ ಮತ್ತು ಪುಣೆಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
"ಇಂಗ್ಲೆಂಡ್ ಬಹಳ ಕಠಿಣ ತಂಡ ಎಂದು ನಮಗೆ ಸಾಕಷ್ಟು ತಿಳಿದಿದೆ. ಅವರನ್ನು ಸೋಲಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಬೇಕಾಗಿದೆ" ಎಂದು ಅರುಣ್ ಹೇಳಿದ್ದಾರೆ.