ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ಆಶ್ಚರ್ಯಕರ ಸೋಲಿಗೆ ತುತ್ತಾಗಿ ಟೂರ್ನಿಯಲ್ಲಿ ಮೊದಲ ಸೋಲುಕಂಡಿದ್ದ ಭಾರತ ತಂಡ ಇಂದು ಬಾಂಗ್ಲಾದೇಶ ತಂಡವನ್ನು ಎದರಿಸುತ್ತಿದೆ.
ಇಂಗ್ಲೆಂಡ್ ವಿರುದ್ಧ 31 ರನ್ಗಳಿಂದ ಸೋಲನಭವಿಸಿರುವ ಕೊಹ್ಲಿ ಪಡೆ ಇಂದಿನ ಪಂದ್ಯವನ್ನು ಗೆದ್ದರೆ ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರಿದ ಎರಡನೇ ತಂಡ ಎನಿಸಿಕೊಳ್ಳಲಿದೆ. ಇತ್ತ ಬಾಂಗ್ಲಾದೇಶ ತಂಡ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿತ್ತಿದ್ದು ಚೊಚ್ಚಲ ಸೆಮಿಫೈನಲ್ ಮೇಲೆ ಕಣ್ಣಿಟ್ಟಿದೆ.
2007ರ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಸೋಲಿಸಿದ್ದ ಬಾಂಗ್ಲಾದೇಶ ಇದೇ ನಂತರದ ಎರಡು ವಿಶ್ವಕಪ್ ಪಂದ್ಯಗಳಲ್ಲಿ ಭಾರತದೆದುರು ಮುಖಭಂಗ ಅನುಭವಿಸಿತ್ತು. ಆದರೆ ಈ ಬಾರಿ ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಕ್ಕೆ ಸೋಲುಣಿಸಿರುವ ಬಾಂಗ್ಲಾ ಕೊಹ್ಲಿಪಡೆಗೆ ಸುಲಭ ತುತ್ತಾಗುವುದಿಲ್ಲ ಎನ್ನಲಾಗುತ್ತಿದೆ.
ಶಕಿಬ್,ರಹೀಮ್, ಲಿಟ್ಟನ್ ದಾಸ್, ಸೌಮ್ಯ ಸರ್ಕಾರ್ 2019ರ ವಿಶ್ವಕಪ್ನಲ್ಲಿ ಉತ್ತಮ ಲಯದಲ್ಲಿದ್ದಾರೆ. ಶಕಿಬ್ 2 ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಇನ್ನು ಬೌಲಿಂಗ್ನಲ್ಲಿ ನಾಯಕ ಮುಷ್ಟಫೆ ಮೋರ್ತಜಾ, ಮುಸ್ತಫಿಜುರ್ ರಹಮಾನ್, ಮೆಹದಿ ಹಸನ್ರಂತಹ ಚಾಣಾಕ್ಷರಿದ್ದು ಟೀಮ್ ಇಂಡಿಯಾಕ್ಕೆ ಸವಾಲೊಡ್ಡಲು ತಯಾರಾಗಿದ್ದಾರೆ.
ಆದರೆ ಅಭ್ಯಾಸ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದ ಬಾಂಗ್ಲಾಕ್ಕೆ ಧೋನಿ, ಕೊಹ್ಲಿ,ರಾಹುಲ್ ಹಾಗೂ ರೋಹಿತ್ರಂತಹ ದಾಂಡಿಗರ ಭಯ ಇದ್ದೇ ಇದೆ. ಇನ್ನು ಬೌಲಿಂಗ್ನಲ್ಲಿ ಯಾರ್ಕರ್ಕಿಂಗ್ ಬುಮ್ರಾ, ವಿಕೆಟ್ ಟೇಕರ್ ಶಮಿ ಹಾಗೂ ಕುಲ್ಚಾ ಸ್ಪಿನ್ ದಾಳಿಯನ್ನು ಎದುರಿಸುವುದು ಕೂಡ ಬಾಂಗ್ಲಾ ತಂಡಕ್ಕೆ ಸವಾಲಾಗಲಿದೆ.
2019 ರ ವಿಶ್ವಕಪ್ನಲ್ಲಿ ಸಾಧನೆ:
ಪ್ರಸ್ತುತ ವಿಶ್ವಕಪ್ನಲ್ಲಿ ಭಾರತ ತಂಡ 7 ಪಂದ್ಯಗಳಲ್ಲಿ 5 ಗೆಲುವು,ಒಂದು ಸೋಲುಕಂಡಿದೆ. ಬಾಂಗ್ಲಾದೇಶ 7 ಪಂದ್ಯಗಳಲ್ಲಿ 3 ಗೆಲುವು ಹಾಗೂ ಮೂರು ಸೋಲಿನ ಜೊತೆಗೆ 7 ಅಂಕ ಪಡೆದು 7ನೇ ಸ್ಥಾನದಲ್ಲಿದೆ.
ಗರಿಷ್ಠ ಸ್ಕೋರರ್
ಭಾರತ: ರೋಹಿತ್ ಶರ್ಮಾ 440
ಬಾಂಗ್ಲಾದೇಶ: ಶಕಿಬ್ ಅಲ್ ಹಸನ್ 476
ಗರಿಷ್ಠ ವಿಕೆಟ್:
ಭಾರತ : ಮೊಹಮ್ಮದ್ ಶಮಿ-13
ಬಾಂಗ್ಲಾದೇಶ: ಶಕಿಬ್ ಹಲ್ ಹಸನ್/ಮುಸ್ತಫಿಜುರ್- 10
ಏಕದಿನ ಕ್ರಿಕೆಟ್ನಲ್ಲಿ ಮುಖಾಮುಖಿ:
ಎರುಡು ತಂಡಗಳು ಏಕದಿನ ಕ್ರಿಕೆಟ್ನಲ್ಲಿ 34ವ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ ತಂಡ 29 ಪಂದ್ಯಗಳಲ್ಲಿ, ಬಾಂಗ್ಲಾ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಸಂಭಾವ್ಯ ಬಾಂಗ್ಲಾದೇಶ ತಂಡ:
ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಕಿಬ್ ಅಲ್ ಹಸನ್, ಮುಷ್ಫೀಕರ್ ರಹೀಮ್, ಲಿಟ್ಟನ್ ದಾಸ್, ಮಹಮ್ಮದುಲ್ಲಾ, ಮೊಸದ್ದೀಕ್ ಹುಸೇನ್, ಮುಶ್ರಫೆ ಮೊರ್ತಾಜಾ, ಮೆಹದಿ ಹಸನ್, ರುಬೆಲ್ ಹುಸೇನ್, ಮುಸ್ತಫಿಜುರ್ ರೆಹಮಾನ್
ಸಂಭಾವ್ಯ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ರಿಷಭ್ ಪಂತ್, ಕೆ.ಎಲ್. ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ.