ಇಂದೋರ್: ಬಾಂಗ್ಲಾದೇಶದ ವಿರುದ್ಧ ಇಂದೋರ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈಗಷ್ಟೇ ಎರಡನೇ ದಿನ ಮುಕ್ತಾಯಗೊಂಡಿದೆ. ಇದರ ಮಧ್ಯೆ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸ ನಡೆಸುತ್ತಿದೆ.
-
Madhya Pradesh: Team India practices with 'pink ball' under lights in Indore. The second test match between India and Bangladesh, in Kolkata, will be the first day-night test match in India. #INDvBAN pic.twitter.com/vURhyTXvp1
— ANI (@ANI) November 15, 2019 " class="align-text-top noRightClick twitterSection" data="
">Madhya Pradesh: Team India practices with 'pink ball' under lights in Indore. The second test match between India and Bangladesh, in Kolkata, will be the first day-night test match in India. #INDvBAN pic.twitter.com/vURhyTXvp1
— ANI (@ANI) November 15, 2019Madhya Pradesh: Team India practices with 'pink ball' under lights in Indore. The second test match between India and Bangladesh, in Kolkata, will be the first day-night test match in India. #INDvBAN pic.twitter.com/vURhyTXvp1
— ANI (@ANI) November 15, 2019
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನವೆಂಬರ್ 22ರಿಂದ ಡೇ ನೈಟ್ ಮ್ಯಾಚ್ ಆರಂಭಗೊಳ್ಳಲಿದ್ದು, ಬಾಂಗ್ಲಾ ವಿರುದ್ಧದ ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಬಿಸಿಸಿಐ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ಟೀಂ ಇಂಡಿಯಾ ಪ್ಲೇಯರ್ಸ್ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಇಂದೋರ್ ಮೈದಾನದಲ್ಲೇ ಕೊಹ್ಲಿ ಪಡೆ ಪಿಂಕ್ ಬಾಲ್ನಲ್ಲಿ ಅಭ್ಯಾಸ ನಡೆಸುತ್ತಿರುವ ಕೆಲ ಪೋಟೋಗಳು ಹೊರಬಿದ್ದಿವೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಮೊದಲ ಇನ್ನಿಂಗ್ಸ್ನಲ್ಲಿ 150ರನ್ಗಳಿಗೆ ಆಲೌಟ್ ಆಗಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ನಡೆಸುತ್ತಿರುವ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 493ರನ್ ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.