ETV Bharat / sports

ವಿಂಡೀಸ್​ ವಿರುದ್ಧ ಏಕದಿನ ಸರಣಿ ಗೆಲ್ಲುವ ವಿಶ್ವಾಸದಲ್ಲಿ ಕೊಹ್ಲಿ ಬಳಗ - ಕ್ರಿಸ್​ ಗೇಲ್​ ಕೊನೆ ಪಂದ್ಯ

ಯುನಿವರ್ಸಲ್​ ಬಾಸ್​ ಖ್ಯಾತಿಯ ಕ್ರಿಸ್​ ಗೇಲ್​ ಇಂದು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಲಿದ್ದಾರೆ.

ಭಾರತ
author img

By

Published : Aug 14, 2019, 12:03 PM IST

ಫೋರ್ಟ್​ ಆಫ್​ ಸ್ಪೇನ್​: ವೆಸ್ಟ್​ ಇಂಡೀಸ್​ ವಿರುದ್ಧದ ಕೊನೆಯ ಏಕದಿನ ಪಂದ್ಯ ಇಂದು ನಡೆಯಲಿದ್ದು ಕೊಹ್ಲಿ ನೇತೃತ್ವದ ಭಾರತ ತಂಡ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

ಈಗಾಗಲೆ ಟಿ-20 ಸರಣಿಯನ್ನು 3-0ಯಲ್ಲಿ ಗೆದ್ದು ಬೀಗಿರುವ ಭಾರತ ತಂಡ ಏಕದಿನ ಸರಣಿಯನ್ನು 1-0ಯಲ್ಲಿ ಮುನ್ನಡೆ ಪಡೆದು ಕೊಂಡಿದೆ. ಕ್ವೀನ್ಸ್​ ಪಾರ್ಕ್​ನಲ್ಲಿ ನಡೆಯಲಿರುವ ಈ ಪಂದ್ಯವನ್ನು ಗೆದ್ದು 2-0ಯಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿ ವಿರಾಟ್​ ಕೊಹ್ಲಿ ಬಳಗವಿದೆ.

ODI against West Indies
ಕ್ರಿಸ್ ಗೇಲ್​

ಇಂದಿನ ಪಂದ್ಯ ಯುನಿವರ್ಸಲ್​ ಬಾಸ್ ಖ್ಯಾತಿಯ ಕ್ರಿಸ್​ ಗೇಲ್​ಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ ವಿದಾಯ ಹೇಳಬೇಕೆಂದಿದ್ದ ಗೇಲ್​ರ ಆಸೆಗೆ ವಿಂಡೀಸ್​ ಮಂಡಳಿ ನಿರಾಶೆ ಮೂಡಿಸಿದೆ. ಆದ್ದರಿಂದ ಯುನಿವರ್ಸಲ್​ ಬಾಸ್​ಗೆ ಇಂದು ನಡೆಯುವ ಏಕದಿನ ಪಂದ್ಯವೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿವೆ.

ಈ ಕಾರಣದಿಂದಾದರೂ ವೆಸ್ಟ್​ ಇಡೀಸ್​ ಭಾರತದ ವಿರುದ್ಧ ಗೆದ್ದು ಸರಣಿ ಸಮಬಲ ಸಾಧಿಸುವ ಜೊತೆಗೆ ಗೇಲ್​ಗೆ ವಿದಾಯ ಪಂದ್ಯವನ್ನು ಸ್ಮರಣೀಯವನ್ನಾಗಿಸಲು ಕಾಯುತ್ತಿದೆ.

ODI against West Indies
ವಿರಾಟ್​ ಕೊಹ್ಲಿ

ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 279 ರನ್​ಗಳಿಸಿದರೆ, ಇದಕ್ಕುತ್ತರವಾಗಿ ವೆಸ್ಟ್​ ಇಂಡೀಸ್​ ತಂಡ 210 ರನ್​ಗಳಿಗೆ ಆಲೌಟ್​ ಆಗುವ ಮೂಲಕ 59 ರನ್​ಗಳಿಂದ ಸೋಲೊಪ್ಪಿಕೊಂಡಿತು. ವಿರಾಟ್​ ಕೊಹ್ಲಿ 11 ಇನ್ನಿಂಗ್ಸ್​ಗಳ ನಂತರ ಶತಕ ಬಾರಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದರು.

ತಂಡಗಳು ಇಂತಿವೆ:

ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್​ ಅಹ್ಮದ್​

ವೆಸ್ಟ್​ ಇಂಡೀಸ್: ಕ್ರಿಸ್ ಗೇಲ್, ಎವಿನ್ ಲೆವಿಸ್, ಶಾಯ್​ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ರಾಸ್ಟನ್ ಚೇಸ್, ಜೇಸನ್ ಹೋಲ್ಡರ್ (ನಾಯಕ), ಕಾರ್ಲೊಸ್ ಬ್ರಾಥ್​ವೈಟ್, ಒಸಾನ್​ ಥಾಮಸ್, ಶೆಲ್ಡನ್ ಕಾಟ್ರೆಲ್, ಕೆಮರ್ ರೋಚ್

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.