ಬ್ರಿಸ್ಬೇನ್: ಟೀಂ ಇಂಡಿಯಾ ಆಟಗಾರರ ಗಾಯಾಳುಗಳ ಪಟ್ಟಿ ದಿನೇ ದಿನೆ ಬೆಳೆಯುತ್ತಿದ್ದು ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ವೇಗಿ ನವದೀಪ್ ಸೈನಿ ತೊಡೆಸಂದು ನೋವಿಗೆ ತುತ್ತಾಗಿದ್ದಾರೆ.
36ನೇ ಓವರ್ನಲ್ಲಿ ಬೌಲಿಂಗ್ ಮಾಡುತ್ತಿದ್ದ ಸೈನಿ ತೊಡೆಸಂದು ನೋವಿಗೆ ಒಳಗಾದ್ರು. ನಂತರ ಮೈದಾನಕ್ಕೆ ಬಂದ ಫಿಸಿಯೋ, ಸೈನಿ ಅವರನ್ನು ಪರೀಕ್ಷಿಸಿ ಮೈದಾನದಿಂದ ಹೊರಕ್ಕೆ ಕರೆದೊಯ್ದರು. ಸೈನಿ ಬದಲು ರೋಹಿತ್ ಶರ್ಮಾ ಆ ಓವರ್ ಅನ್ನು ಪೂರ್ಣಗೊಳಿಸಿದ್ರು.
-
Navdeep Saini has complained of pain in his groin. He is currently being monitored by the BCCI medical team.#AUSvIND pic.twitter.com/NXinlnZ9W5
— BCCI (@BCCI) January 15, 2021 " class="align-text-top noRightClick twitterSection" data="
">Navdeep Saini has complained of pain in his groin. He is currently being monitored by the BCCI medical team.#AUSvIND pic.twitter.com/NXinlnZ9W5
— BCCI (@BCCI) January 15, 2021Navdeep Saini has complained of pain in his groin. He is currently being monitored by the BCCI medical team.#AUSvIND pic.twitter.com/NXinlnZ9W5
— BCCI (@BCCI) January 15, 2021
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ನವದೀಪ್ ಸೈನಿ ಅವರು ತೊಡೆಸಂದು ನೋವಿನ ಬಗ್ಗೆ ಒಳಗಾಗಿದ್ದಾರೆ. ಪ್ರಸ್ತುತ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ.
ಈಗಾಗಲೇ ಹಲವು ಆಟಗಾರರು ಗಾಯಗೊಂಡಿದ್ದ ಪರಿಣಾಮ ಸೈನಿ ಟೀಂ ಇಂಡಿಯಾದಲ್ಲಿ ಅವಕಾಶಪಡೆದಿದ್ದರು. ಪ್ರಮುಖ ವೇಗಿಗಳಿಲ್ಲದ ತಂಡಕ್ಕೆ ಸೈನಿ ಆಸರೆಯಾಗಬಲ್ಲರು ಎಂದು ಊಹಿಸಲಾಗಿತ್ತು. ಆದರೆ, ಅವರು ಕೂಡ ಗಾಯಕ್ಕೆ ತುತ್ತಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.