ETV Bharat / sports

ಐಪಿಎಲ್​ ಆಟ ಮುಂದುವರಿಸಿದ ತೆವಾಟಿಯ... ಡೆಲ್ಲಿ ವಿರುದ್ಧ ಹರಿಯಾಣಕ್ಕೆ ಸುಲಭ ಜಯ

author img

By

Published : Jan 17, 2021, 10:55 PM IST

ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶಿಖರ್ ಧವನ್​ ನೇತೃತ್ವದ ಡೆಲ್ಲಿ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್​ಗಳಿಸಿತ್ತು. ನಿತೀಶ್ ರಾಣ 66 , ಹಿತೇಶ್ ದಲಾಲ್​ 49, ಅನುಜ್ ರಾವತ್​ 34 ರನ್​ಗಳಿಸಿದ್ದರು.

ರಾಹುಲ್ ತೆವಾಟಿಯಾ
ರಾಹುಲ್ ತೆವಾಟಿಯಾ

ಮುಂಬೈ: ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಶೆಲ್ಡಾನ್ ಕಾಟ್ರೆಲ್​ಗೆ ಒಂದೇ ಓವರ್​ನಲ್ಲಿ 5 ಸಿಕ್ಸರ್​ ಚಚ್ಚಿ ರಾತ್ರೋರಾತ್ರಿ ಖ್ಯಾತಿಗೆ ಪಾತ್ರರಾಗಿದ್ದ ರಾಜಸ್ಥಾನ್​ ರಾಯಲ್ಸ್ ತಂಡದ ಆಲ್​ರೌಂಡರ್​ ರಾಹುಲ್ ತೆವಾಟಿಯಾ ಮತ್ತೆ ಸುದ್ದಿಗೆ ಬಂದಿದ್ದಾರೆ.

ಆದರೆ ಈ ಐಪಿಎಲ್​ನಲ್ಲಿ ಅಲ್ಲ, ಬದಲಿರಾಗಿ ತಮ್ಮ ರಾಜ್ಯದ ಹರಿಯಾಣ ಪರ ಅಂತಹದ್ದೇ ಆಟವನ್ನು ತೋರಿಸಿದ್ದಾರೆ. ಭಾನುವಾರ ಮುಂಬೈನಲ್ಲಿ ಡೆಲ್ಲಿ ವಿರುದ್ಧ ನಡೆದ ಸಯ್ಯದ್ ಮುಷ್ತಾಕ್​ ಅಲಿ ಟ್ರೋಫಿ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 31 ರನ್​ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶಿಖರ್ ಧವನ್​ ನೇತೃತ್ವದ ಡೆಲ್ಲಿ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್​ಗಳಿಸಿತ್ತು. ನಿತೀಶ್ ರಾಣ 66 , ಹಿತೇಶ್ ದಲಾಲ್​ 49, ಅನುಜ್ ರಾವತ್​ 34 ರನ್​ಗಳಿಸಿದ್ದರು.

183 ರನ್​ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಹರಿಯಾಣದ ತಂಡ 18.2 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ಗುರಿ ತಲುಪಿದೆ. ಆರಂಭಿಕ ಚೈತನ್ಯ ಬಿಷ್ಣೋಯ್​ 35, ಶಿವಂ ಚೌಹಾಣ್​ 32 ರನ್​ಗಳಿಸಿದರೆ, ರೋಹಿತ್ ಪರ್ಮೋದ್​ ಶರ್ಮಾ ಕೇವಲ21 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ ಅಜೇಯ 48, ಹಾಗೂ ರಾಹುಲ್ ತೆವಾಟಿಯಾ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ ಅಜೇಯ 31 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದಲ್ಲದೆ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲೂ ಗೆಲುವು ಸಾಧಿಸಿ ಕ್ವಾರ್ಟಲ್​ ಫೈನಲ್​ಗೆ ಮತ್ತಷ್ಟು ಹತ್ತಿರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.