ಎರಡನೇ ಚುಟುಕು ಪಂದ್ಯವನ್ನು ಗೆದ್ದಿದ್ದ ಭಾರತ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಹೀಗಾಗಿ ಇಂದಿನ ಮ್ಯಾಚ್ ಸರಣಿ ಗೆಲ್ಲುವ ನಿಟ್ಟಿನಲ್ಲಿ ಉಭಯ ತಂಡಗಳಿಗೂ ನಿರ್ಣಾಯಕವಾಗಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪರ ಸೀಫರ್ಟ್(43), ಮುನ್ರೋ(72) ಅಬ್ಬರಿಸಿದರು. ಕೊನೆಯಲ್ಲಿ ಗ್ರಾಂಡ್ಹೋಮ್(30) ಮಿಚೆಲ್ (19) ರನ್ಗಳ ನೆರವಿನಿಂದ 20 ಒವರ್ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 212 ರನ್ ದಾಖಲಿಸಿತ್ತು.
ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಧವನ್ 5 ರನ್ನಿಗೆ ನಿರ್ಗಮಿಸಿದರು. ನಂತರ ಬಂದ ವಿಜಯ್ ಶಂಕರ್(43), ರಿಷಭ್ ಪಂಥ್(28) ಹಾರ್ದಿಕ್ ಪಾಂಡ್ಯ(21) ರನ್ ಬಾರಿಸಿ ತಂಡದ ಮೊತ್ತಕ್ಕೆ ವೇಗ ನೀಡಿದರು.
ಕೊನೆಯಲ್ಲಿ ಪಂದ್ಯ ಅತ್ಯಂತ ರೋಚಕ ಘಟ್ಟದಲ್ಲಿದ್ದಾಗ, ನಿಧಾಸ್ ಟ್ರೋಫಿಯ ಹೀರೋ ದಿನೇಶ್ ಕಾರ್ತಿಕ್(33) ಹಾಗೂ ಕೃನಾಲ್ ಪಾಂಡ್ಯ(26) ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಕೊನೆಯ ಎಸೆತದ ತನಕ ಬಂದಿದ್ದ ಪಂದ್ಯದಲ್ಲಿ ಭಾರತ ರೋಚಕ ನಾಲ್ಕು ರನ್ಗಳ ಸೋಲು ಅನುಭವಿಸಿತ್ತು.