ಪರ್ತ್: ಮಹಿಳಾ ಟಿ20 ವಿಶ್ವಕಪ್ನ 4ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಇಂಗ್ಲೆಂಡ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿ ಏಕದಿನ ಕ್ರಿಕೆಟ್ ಚಾಂಪಿಯನ್ ತಂಡಕ್ಕೆ ಶಾಕ್ ನೀಡಿದೆ.
ಕೊನೆಯ ಓವರ್ವರೆಗೂ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಈ ಕದನದಲ್ಲಿ ಹರಿಣಗಳ ಪಡೆ ಗೆದ್ದು ಸಂಭ್ರಮಿಸಿದೆ.
ಇಂಗ್ಲೆಂಡ್ ನೀಡಿದ 124 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಹರಿಣ ಪಡೆಗೆ ಆರಂಭದಲ್ಲಿ ಸ್ಫೋಟಕ ಆಟಗಾರ್ತಿ ಲಿಜೆಲ್ಲೆ ಲೀ(4) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
-
Hugs, high fives, and plenty of relieved faces 😅
— T20 World Cup (@T20WorldCup) February 23, 2020 " class="align-text-top noRightClick twitterSection" data="
The aftermath of a thriller.#ENGvSA | #T20WorldCup pic.twitter.com/3WH7shfmEl
">Hugs, high fives, and plenty of relieved faces 😅
— T20 World Cup (@T20WorldCup) February 23, 2020
The aftermath of a thriller.#ENGvSA | #T20WorldCup pic.twitter.com/3WH7shfmElHugs, high fives, and plenty of relieved faces 😅
— T20 World Cup (@T20WorldCup) February 23, 2020
The aftermath of a thriller.#ENGvSA | #T20WorldCup pic.twitter.com/3WH7shfmEl
ಆದರೆ ನಾಯಕಿ ಡೇನ್ ವ್ಯಾನ್ ನೀಕೆರ್ಕ್ ಎರಡನೇ ವಿಕೆಟ್ಗೆ ಆಲ್ರೌಂಡರ್ ಮರಿಝಾನ್ನೆ ಕಾಪ್ ಜೊತೆ 84 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಸನಿಹ ತಂದರು. ಆದರೆ ಒಂದು ಓವರ್ಗಳ ಅಂತರದಲ್ಲಿ 51 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ಸಹಿತ 46 ರನ್ ಗಳಿಸಿದ್ದ ನೀಕೆರ್ಕ್ ಹಾಗೂ, 33 ಎಸೆತಗಳಲ್ಲಿ 6 ಬೌಂಡರಿ ಸಹಿತ 38 ರನ್ ಗಳಿಸಿದ್ದ ಕಾಪ್ ಔಟಾಗಿ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಸ್ಫೋಟಕ ಆಟಗಾರ್ತಿ ಟ್ರಿಯಾನ್ ಕೂಡ 12 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಸಹಿತ 12 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಗೆಲುವಿನ ಜವಾಬ್ದಾರಿ ತೆಗೆದುಕೊಂಡ ಅನುಭವಿ ಮಿಗ್ನಾನ್ ಪ್ರೀಜ್ 11ಎಸೆತಗಳಲ್ಲಿ 18 ರನ್ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು ತಂದುಕೊಟ್ಟರು.
-
2/20 with the ball
— T20 World Cup (@T20WorldCup) February 23, 2020 " class="align-text-top noRightClick twitterSection" data="
46 with the bat
A true captain's performance from Player of the Match Dane van Niekerk 🤳#ENGvSA | #T20WorldCup pic.twitter.com/HAFsVHObfz
">2/20 with the ball
— T20 World Cup (@T20WorldCup) February 23, 2020
46 with the bat
A true captain's performance from Player of the Match Dane van Niekerk 🤳#ENGvSA | #T20WorldCup pic.twitter.com/HAFsVHObfz2/20 with the ball
— T20 World Cup (@T20WorldCup) February 23, 2020
46 with the bat
A true captain's performance from Player of the Match Dane van Niekerk 🤳#ENGvSA | #T20WorldCup pic.twitter.com/HAFsVHObfz
ಇಂಗ್ಲೆಂಡ್ ಪರ ಸೋಪಿಯಾ ಎಕ್ಲೆಸ್ಟೋನ್ 2 ವಿಕೆಟ್ ಪಡೆದರೆ, ಸಾರಾ ಗ್ಲೆನ್ ಹಾಗೂ ಆನ್ಯ ಶ್ರುಬ್ಸೋಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ತಂಡ ಆಲ್ರೌಂಡರ್ ನಟಲಿ ಸೀವರ್(50) ಅವರ ಅರ್ಧ ಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿತ್ತು.
ಅಯಬೊಂಗ ಖಾಕಾ 3 ವಿಕೆಟ್, ನಾಯಕಿ ನೀಕೆರ್ಕ್ ಹಾಗೂ ಕಾಪ್ ತಲಾ 2 ವಿಕೆಟ್, ಇಸ್ಮೈಲ್ ಒಂದು ವಿಕೆಟ್ ಪಡೆದು ಆಂಗ್ಲರನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ದರು.
2 ವಿಕೆಟ್ ಹಾಗೂ 46 ರನ್ ಗಳಿಸಿದ ದಕ್ಷಿಣ ಆಫ್ರಿಕಾ ನಾಯಕಿ ಡೇನ್ ವ್ಯಾನ್ ನೀಕೆರ್ಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.