ಪರ್ತ್: ಟಿ20 ಮಹಿಳಾ ವಿಶ್ವಕಪ್ನ 6ನೇ ಪಂದ್ಯದಲ್ಲಿ ಭಾರತ ತಂಡ ನೆರೆಯ ಬಾಂಗ್ಲಾದೇಶದ ವಿರುದ್ಧ 142 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ತಂಡ ಆರಂಭದಲ್ಲೇ ಮಂದಾನ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ತನಿಯಾ ಭಾಟಿಯಾ ಕೇವಲ 2 ರನ್ಗೆ ವಿಕೆಟ್ ಒಪ್ಪಿಸಿದರು. ಆದರೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಶೆಫಾಲಿ ವರ್ಮಾ ಕೇವಲ 17 ಎಸೆತಗಳಲ್ಲಿ ಭರ್ಜರಿ 4 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 39 ರನ್ಗಳಿಸಿ ಉತ್ತಮ ಆರಂಭ ನೀಡಿದರು.
-
India set Bangladesh 143 to win.
— T20 World Cup (@T20WorldCup) February 24, 2020 " class="align-text-top noRightClick twitterSection" data="
In the 2018 Asia Cup, Bangladesh chased down 142 against India, their highest T20I chase to date.
Will we see history made tonight?#INDvBAN | #T20WorldCup
SCORE 📝 https://t.co/xD9crB4phZ pic.twitter.com/kepKCo5dfv
">India set Bangladesh 143 to win.
— T20 World Cup (@T20WorldCup) February 24, 2020
In the 2018 Asia Cup, Bangladesh chased down 142 against India, their highest T20I chase to date.
Will we see history made tonight?#INDvBAN | #T20WorldCup
SCORE 📝 https://t.co/xD9crB4phZ pic.twitter.com/kepKCo5dfvIndia set Bangladesh 143 to win.
— T20 World Cup (@T20WorldCup) February 24, 2020
In the 2018 Asia Cup, Bangladesh chased down 142 against India, their highest T20I chase to date.
Will we see history made tonight?#INDvBAN | #T20WorldCup
SCORE 📝 https://t.co/xD9crB4phZ pic.twitter.com/kepKCo5dfv
ಶೆಫಾಲಿಗೆ ಸಾಥ್ ನೀಡಿದ ಜಮೀಮಾ ರೋಡ್ರಿಗ್ಸ್ 37 ಎಸೆತಗಳಲ್ಲಿ 34 ರನ್ಗಳಿಸಿ ರನ್ ಔಟಾದರು. ನಾಯಕಿ ಹರ್ಮನ್ ಪ್ರೀತ್ ಕೌರ್ 8 ರನ್ಗಳಿಸಿ ಮತ್ತೆ ವಿಫಲರಾದರು. ಮಂದಾನ ಜಾಗಕ್ಕೆ ತಂಡ ಸೇರಿಕೊಂಡಿದ್ದ ರಿಚ ಘೋಷ್ 14ರನ್ಗಳಿಗೆ ಸೀಮಿತರಾದರು. ಆಸ್ಟ್ರೇಲಿಯಾ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ದೀಪ್ತಿ ಶರ್ಮಾ(11) ರನ್ ಕದಿಯುವ ಆತುರದಲ್ಲಿ ರನೌಟ್ ಆಗಿ ನಿರಾಶೆ ಮೂಡಿಸಿದರು.
ಆದರೆ ಕೊನೆಯಲ್ಲಿ ಅಬ್ಬರಿಸಿದ ಕನ್ನಡತಿ ವೇದಾ ಕೃಷ್ಣಮೂರ್ತಿ ಕೇವಲ11 ಎಸೆತಗಳಲ್ಲಿ 20ರನ್ಗಳಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು. ಶಿಖಾ ಪಾಂಡೆ 7 ರನ್ಗಳಿಸಿ ಔಟಾಗದೆ ಉಳಿದರು.
ಬಾಂಗ್ಲಾದೇಶ ಪರ ಪನ್ನ ಘೋಷ್ 2 ವಿಕೆಟ್, ಸಲ್ಮಾ ಖತುನ್ 2 ವಿಕೆಟ್ ಪಡೆದರು.