ETV Bharat / sports

ಏಕದಿನ-ಟೆಸ್ಟ್​​ನಲ್ಲಿ ಸಿಗುವ ಯಶಸ್ಸು ಟಿ20ಯಲ್ಲಿ ಯಾಕಿಲ್ಲ?... ರೋಹಿತ್ ಉತ್ತರ ಹೀಗಿದೆ - ರೋಹಿತ್​ ಶರ್ಮಾ-ಟಿ20 ಕ್ರಿಕೆಟ್​

ಭಾರತ ತಂಡ ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ವಿಶ್ವದ ಬಲಿಷ್ಠ ತಂಡವಾಗಿದೆ. ಆದರೆ ಟಿ20 ತಂಡದಲ್ಲಿ ಮಾತ್ರ ಹಿನ್ನಡೆ ಅನುಭವಿಸುತ್ತಿದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ನಾಯಕ ರೋಹಿತ್​ ಶರ್ಮಾ ಪ್ರತಿಕ್ರಿಯಿಸಿ ಕೆಲವು ಕಾರಣಗಳನ್ನು ನೀಡಿದ್ದಾರೆ.

Rohit sharma/ರೋಹಿತ್​ ಶರ್ಮಾ
author img

By

Published : Nov 6, 2019, 7:27 PM IST

ರಾಜ್​ಕೋಟ್​​: ಭಾರತ ತಂಡ ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ವಿಶ್ವದ ಬಲಿಷ್ಠ ತಂಡವಾಗಿದೆ. ಆದ್ರೆ ಟಿ20 ಯಲ್ಲಿ ಮಾತ್ರ ಹಿನ್ನಡೆ ಅನುಭವಿಸುತ್ತಿದೆ. ಇದಕ್ಕೆ ಕಾರಣವೇನು ಎಂಬುದನ್ನು ನಾಯಕ ರೋಹಿತ್​ ಶರ್ಮಾ ತಿಳಿಸಿದ್ದಾರೆ.

ಭಾರತ ಕ್ರಿಕೆಟ್​ ತಂಡ ಕೊನೆಯ ಬಾರಿಗೆ 2018ರಲ್ಲಿ ವೆಸ್ಟ್ ಇಂಡೀಸ್​ ವಿರುದ್ಧ 3-0ಯಲ್ಲಿ ಸರಣಿ ಜಯಿಸಿತ್ತು. ನಂತರ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 2-0 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ​1-1 ರಲ್ಲಿ ಸಮಬಲ ಸಾಧಿಸಿತ್ತು. ಇದೀಗ ಪ್ರಸ್ತುತ ಸರಣಿಯಲ್ಲಿ 0-1ರಲ್ಲಿ ಬಾಂಗ್ಲಾ ವಿರುದ್ಧ ಸರಣಿ ಹಿನ್ನಡೆ ಅನುಭವಿಸಿದೆ.

  • ' class='align-text-top noRightClick twitterSection' data=''>

ಈ ಕುರಿತು ಮಾತನಾಡಿರುವ ರೋಹಿತ್​ ಶರ್ಮಾ, ಟಿ20 ಕ್ರಿಕೆಟ್​ನಲ್ಲಿ ನಮ್ಮ ಖಾಯಂ ತಂಡ ಆಡುತ್ತಿಲ್ಲ, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದು ನಮ್ಮ ಟಿ20 ಕ್ರಿಕೆಟ್​ನ ಹಿನ್ನಡೆಗೆ ಕಾರಣವಾಗಿದೆ. ಆದರೆ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಮಾತ್ರ ನಮ್ಮ ಪೂರ್ಣ ತಂಡ ಆಡುವುದರಿಂದ ಯಶಸ್ಸು ಮುಂದುವರಿಯುತ್ತಿದೆ ಎಂದಿದ್ದಾರೆ.

ಆದರೆ ಯುವ ಆಟಗಾರರಿಗೆ ಚುಟುಕು ಕ್ರಿಕೆಟ್​ನಲ್ಲಿ ಅವಕಾಶ ಕಲ್ಪಿಸುವುದರಿಂದ ಅವರೂ ಸಹ ತಮ್ಮ ಪ್ರದರ್ಶನವನ್ನು ತೋರಿಸುವ ಮೂಲಕ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ಗೆ ಸಿದ್ಧರಾಗಲು ಅನುಕೂಲಕರವಾಗಲಿದೆ ಎಂದು ರೋಹಿತ್​ ಅಭಿಪ್ರಾಯಪಟ್ಟಿದ್ದಾರೆ.

ನಮಗೆ ಬೆಂಚ್​ ಸ್ಟ್ರೆಂತ್​ ಬಲಿಷ್ಠಗೊಳಿಸಲು ಅನೇಕ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದೇವೆ. ಆದರೆ ನಮ್ಮ ಸೋಲಿಗೆ ಇದೊಂದು ಕಾರಣ ಎನ್ನಲಾಗದು. ನಾವು ಗೆಲ್ಲಬೇಕಾಗಿದೆ, ಅದೇ ನಮ್ಮ ಪ್ರಮುಖ ಆದ್ಯತೆ. ನಾನೂ ಸೇರಿದಂತೆ ಮೊದಲು ಟಿ20 ಆಡುವ ಯುವ ಆಟಗಾರರು ಹಲವು ಪಾಠಗಳನ್ನು ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ ಆಡುವ ಮುನ್ನ ಕಲಿಯಬೇಕಿದೆ ಎಂದು ಹಿಟ್​ಮ್ಯಾನ್​ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.