ETV Bharat / sports

'ಜೀವನದ ಅತ್ಯಂತ ಸುಂದರವಾದ ಉಡುಗೊರೆ': ಪತ್ನಿ, ಮಗಳ ಫೋಟೋ ಶೇರ್ ಮಾಡಿದ ನಟರಾಜನ್​!

author img

By

Published : Feb 23, 2021, 10:21 PM IST

Updated : Feb 23, 2021, 10:36 PM IST

ಇದೇ ಮೊದಲ ಸಲ ಪತ್ನಿ ಹಾಗೂ ಮಗಳ ಫೋಟೋ ಶೇರ್ ಮಾಡಿಕೊಂಡಿರುವ ಟೀಂ ಇಂಡಿಯಾ ವೇಗಿ ಟಿ.ನಟರಾಜನ್​ ಇನ್​ಸ್ಟಾಗ್ರಾಂ​ನಲ್ಲಿ ಶೇರ್ ಮಾಡಿದ್ದಾರೆ.

T Natarajan
T Natarajan

ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿರುವ ವೇಗದ ಬೌಲರ್ ಟಿ.ನಟರಾಜನ್​ ಇದೀಗ ಮೊದಲ ಸಲ ತಮ್ಮ ಪತ್ನಿ ಹಾಗೂ ಮಗಳ ಫೋಟೋ ಶೇರ್ ಮಾಡಿದ್ದಾರೆ.

ಜೀವನದ ಅತ್ಯಂತ ಸುಂದರವಾದ ಉಡುಗೊರೆ ಎಂದು ಬರೆದುಕೊಂಡಿರುವ ಟಿ.ನಟರಾಜನ್​ ಮಗಳು ಹಾಗೂ ಪತ್ನಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿ: ತಮಿಳುನಾಡು ಘೋಷಿಸಿದ್ದ ತಂಡದಿಂದ ನಟರಾಜನ್ ಹೊರಕ್ಕೆ​

ನಾಲ್ಕು ತಿಂಗಳ ಹಿಂದೆ ಕ್ರಿಕೆಟರ್​ ನಟರಾಜನ್ ದಂಪತಿಗೆ ಮುದ್ದಾದ ಹೆಣ್ಣು ಮಗು ಹುಟ್ಟಿದ್ದು, ಹನ್ವಿಕಾ ಎಂದು ಹೆಸರಿಡಲಾಗಿದೆ. ನೀನು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿರುವೆ. ನಮ್ಮನ್ನು ಪೋಷಕರಾಗಿ ಸ್ವೀಕರಿಸಿದ ನಿನಗೆ ಧನ್ಯವಾದಗಳು ಎಂದು ಇದೀಗ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಟರಾಜನ್ ಇದೀಗ ಇಂಗ್ಲೆಂಡ್​ ವಿರುದ್ಧದ ಐದು ಟಿ-20 ಕ್ರಿಕೆಟ್​ ಸರಣಿಗಾಗಿ ಆಯ್ಕೆಯಾಗಿದ್ದು, ಆದಷ್ಟು ಬೇಗ ತಂಡ ಸೇರಿಕೊಳ್ಳಲಿದ್ದಾರೆ. ಮಾರ್ಚ್​ 12ರಿಂದ ಈ ಸರಣಿ ಆರಂಭಗೊಳ್ಳಲಿದೆ.

ಟಿ.ನಟರಾಜನ್​ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡದಲ್ಲಿ ಆಡುತ್ತಿದ್ದು, ಕಳೆದ ಆವೃತ್ತಿಯಲ್ಲಿ ಮಿಂಚು ಹರಿಸಿದ್ದಾರೆ. ಅದರ ಫಲವಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು.

Last Updated : Feb 23, 2021, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.