ಸೂರತ್: ಇಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಹರಿಯಾಣ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.
- ' class='align-text-top noRightClick twitterSection' data=''>
ಹರಿಯಾಣ ನೀಡಿದ್ದ 195ರನ್ಗಳ ಗುರಿ ಬೆನ್ನತ್ತಿದ ಪಾಂಡೆ ಹುಡುಗರು 15 ಓವರ್ಗಳಲ್ಲೇ ಗುರಿ ಮುಟ್ಟಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ಕೆ.ಎಲ್. ರಾಹುಲ್ ಭರ್ಜರಿ ಆರಂಭ ನೀಡಿದ್ರು.
ಹರಿಯಾಣ ಬೌಲರ್ಗಳ ಬೆವರಿಳಿಸಿದ ಈ ಜೋಡಿ ಮೊದಲ ವಿಕೆಟ್ಗೆ 125ರನ್ ಕಲೆಹಾಕಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ರಾಹುಲ್ ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್ಗಳ ನೆರವಿನಿಂದ 66ರನ್ ಗಳಿಸಿ ಔಟ್ ಆದ್ರು.
- ' class='align-text-top noRightClick twitterSection' data=''>
ಟೂರ್ನಿಯುದ್ದಕ್ಕೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದೇವದತ್ ಪಡಿಕ್ಕಲ್ ಇಂದಿನ ಪಂದ್ಯದಲ್ಲೂ ಅಬ್ಬರಿಸಿದ್ರು. 47 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 87 ರನ್ ಗಳಿಸಿ ಔಟ್ ಆದ್ರು. ಅಂತಿಮವಾಗಿ ಕರ್ನಾಟಕ ತಂಡ 15 ಓವರ್ಗಳಲ್ಲಿ 195ರನ್ ಗಳಿಸಿ ಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹರಿಯಾಣ ತಂಡಕ್ಕೆ ಭರ್ಜರಿ ಆರಂಭ ದೊರಕಿತು. ಆರಂಭಿಕ ಆಟಗಾರ ಬಿಶೋನಿ ಮತ್ತು ಹರ್ಷಲ್ ಪಟೇಲ್ ಜೋಡಿ ಮೊದಲ ವಿಕೆಟ್ಗೆ 67 ರನ್ಗಳ ಜೊತೆಯಾಟ ನೀಡಿತು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಶ್ರೇಯಸ್ ಗೋಪಾಲ್ ಹರ್ಷಲ್ ಪಟೇಲ್ಗೆ ಪೆವಿಲಿಯನ್ ದಾರಿ ತೋರಿಸಿದ್ರು.
ಅಬ್ಬರದ ಬ್ಯಾಟಿಂಗ್ ನಡೆಸಿದ ಚೈತನ್ಯ ಬಿಶ್ನೋಯ್ ಆಕರ್ಷಕ ಆರ್ಧ ಶತಕ ಸಿಡಿಸಿ ಔಟ್ ಆದ್ರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಹಿಮಾಂಶು ರಾಣಾ ಕರ್ನಾಟಕ ಬೌಲರ್ಗಳ ಬೆವರಿಳಿಸಿದ್ರು. ಸ್ಫೋಟಕ ಬ್ಯಾಟಿಂಗ್ನಿಂದ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದ್ರು. ಅಂತಿಮವಾಗಿ ಹರಿಯಾಣ ತಂಡ 20 ಓವರ್ಗಳಿಗೆ 8 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತು.
- ' class='align-text-top noRightClick twitterSection' data=''>
6 ಎಸೆತ 5 ವಿಕೆಟ್:
ಅಂತಿಮ ಓವರ್ನಲ್ಲಿ ಬೌಲಿಂಗ್ಗೆ ಇಳಿದ ಕನ್ನಡಿಗ ಅಭಿಮನ್ಯು ಮಿಥುನ್ 6 ಎಸೆತಗಳಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದು ಮಿಂಚಿದ್ರು. ಶ್ರೇಯಸ್ ಗೋಪಾಲ್ 2 ವಿಕೆಟ್ ಕಬಳಿಸಿದ್ರು.