ETV Bharat / sports

ಮುಷ್ತಾಕ್​ ಅಲಿ ಟ್ರೋಫಿ: ಕರ್ನಾಟಕ ಮಣಿಸಿ ಸೆಮೀಸ್​ಗೆ ಎಂಟ್ರಿ ಕೊಟ್ಟ ಪಂಜಾಬ್​ - ಕರ್ನಾಟಕ vs ಪಂಜಾಬ್​

ಲೀಗ್​ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಸೋಲುಂಡಿದ್ದ ಕರ್ನಾಟಕ ತಂಡ ಇದೀಗ ಮತ್ತೆ ಕ್ವಾರ್ಟರ್​ ಫೈನಲ್​ನಲ್ಲೂ ಹೀನಾಯ ಪ್ರದರ್ಶನ ತೋರಿ ಕೇವಲ 87 ರನ್​ಗಳಿಗೆ ಆಲೌಟ್​ ಆಗಿತ್ತು.

ಸಯ್ಯದ್  ಮುಷ್ತಾಕ್​ ಅಲಿ ಟ್ರೋಫಿ
ಸಯ್ಯದ್ ಮುಷ್ತಾಕ್​ ಅಲಿ ಟ್ರೋಫಿ
author img

By

Published : Jan 26, 2021, 3:10 PM IST

ಅಹ್ಮದಾಬಾದ್​: ಸಯ್ಯದ್ ಮುಷ್ತಾಕ್​ ಅಲಿ ಟಿ-20 ಟೂರ್ನಮೆಂಟ್​ನ ಕ್ವಾರ್ಟರ್​ ಫೈನಲ್​ನಲ್ಲಿ ಕರ್ನಾಟಕ ತಂಡ ಪಂಜಾಬ್​ ವಿರುದ್ಧ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.

ಅಹಮದಾಬಾದ್​ನ ಸರ್ದಾರ್ ಪಟೇಲ್​ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾರ್ಟರ್​ ಫೈನಲ್​ನಲ್ಲಿ ಟಾಸ್​ ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಕೇವಲ 87 ರನ್​ಗಳಿಗೆ ಆಲೌಟ್ ಆಗಿತ್ತು. ಅನಿವೃದ್ಧ ಜೋಶಿ 27 ರನ್, ಪಡಿಕ್ಕಲ್​ 11, ಕರುಣ್ ನಾಯರ್​ 12, ಶ್ರೇಯಸ್​ ಅಯ್ಯರ್ 13 ರನ್ ​ಗಳಿಸಿದರು.

ಪಂಜಾಬ್​ ತಂಡದ ಪರ ಸಿದ್ಧಾರ್ಥ್​ ಕೌಲ್​ 15ಕ್ಕೆ 3, ರಾಮ್​ದೀಪ್​ ಸಿಂಗ್​ 22ಕ್ಕೆ 2, ಅರ್ಶದೀಪ್​ ಸಿಂಗ್ 16ಕ್ಕೆ 2, ಸಂದೀಪ್ ಶರ್ಮಾ 17ಕ್ಕೆ 2 ವಿಕೆಟ್​ ಪಡೆದರು.

88 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ತಂಡ ಒಂದು ವಿಕೆಟ್​ ಕಳೆದುಕೊಂಡು 89 ರನ್​ ಗಳಿಸಿತು. ಸಿಮ್ರಾನ್ ಸಿಂಗ್ ಅಜೇಯ 49 ಮತ್ತು ಮಂದೀಪ್ ಸಿಂಗ್​ ಅಜೇಯ 35 ರನ್​ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಪಂಜಾಬ್​ ತಂಡ ಸೆಮಿಫೈನಲ್​ ಪಂದ್ಯದಲ್ಲಿ ಕ್ವಾರ್ಟರ್​ ಫೈನಲ್​ 3ರಲ್ಲಿ ಗೆಲ್ಲುವ ವಿಜೇತರನ್ನು ಎದುರಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.