ಸಿಡ್ನಿ: ಮಳೆಯಡಚಣೆಯ ನಡುವೆಯೂ ನಡೆದ 12 ಓವರ್ಗಳ ಬಿಬಿಎಲ್ ಫೈನಲ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ತಂಡ ಮ್ಯಾಕ್ಸ್ವೆಲ್ ನೇತೃತ್ವದ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ 19 ರನ್ಗಳ ಜಯ ಸಾಧಿಸಿ ಬಿಬಿಎಲ್ನ 9ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟೂರ್ನಿಯ ಲೀಗ್ನಲ್ಲಿ ಪ್ರಾಬಲ್ಯ ಸಾಧಿಸಿದ್ದ ಮ್ಯಾಕ್ಸ್ವೆಲ್ ಪಡೆ ಫೈನಲ್ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಬಂದ ಸಿಡ್ನಿ ಸಿಕ್ಸರ್ಸ್ 12 ಓವರ್ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ 5 ವಿಕೆಟ್ ಕಳೆದುಕೊಂಡು 116 ರನ್ಗಳಿಸಿತು. ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವ ವಿಕೆಟ್ ಕೀಪರ್ ಜೋಸ್ ಫಿಲಿಪ್ಪೆ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 52 ರನ್ಗಳಿಸಿದರು. ಜೋರ್ಡಾನ್ ಸಿಲ್ಕ್ 27, ಸ್ಟಿವ್ ಸ್ಮಿತ್ 21 ರನ್ಗಳಿಸಿದರು.
-
Josh Philippe is the Player of the Final for his brilliant knock of 52 off 29 balls! #BBL09 pic.twitter.com/83OKQdOfLy
— KFC Big Bash League (@BBL) February 8, 2020 " class="align-text-top noRightClick twitterSection" data="
">Josh Philippe is the Player of the Final for his brilliant knock of 52 off 29 balls! #BBL09 pic.twitter.com/83OKQdOfLy
— KFC Big Bash League (@BBL) February 8, 2020Josh Philippe is the Player of the Final for his brilliant knock of 52 off 29 balls! #BBL09 pic.twitter.com/83OKQdOfLy
— KFC Big Bash League (@BBL) February 8, 2020
117 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ತಂಡ 12 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 97 ರನ್ಗಳಿಸಲಷ್ಟೇ ಶಕ್ತವಾಗಿ 19 ರನ್ಗಳ ಸೋಲುಕಂಡಿತು. ಸ್ಟೋಯ್ನೀಸ್ 10, ನಿಕ್ ಲರ್ಕಿನ್ 38, ನಾಥನ್ ಕೌಲ್ಟರ್ ನೈಲ್ 19 ರನ್ಗಳಿಸಿ ವಿಫಲ ಹೋರಾಟ ನಡೆಸಿದರು.
ಇನ್ನು 9 ಆವೃತ್ತಿಗಳಲ್ಲಿ ಸಿಡ್ನಿ 4ನೇ ಬಾರಿ ಫೈನಲ್ ತಲುಪಿದ್ದ ಸಿಡ್ನಿ ಸಿಕ್ಸರ್ಸ್ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. 2011 ರ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಸಿಕ್ಸರ್ಸ್ 2020ರಲ್ಲಿ ಮತ್ತೆ ಚಾಂಪಿಯನ್ ಪಟ್ಟ ಪಡೆದಿದೆ.
2015-16ರಲ್ಲಿ ಫೈನಲ್ ತಲುಪಿ ನಿರಾಶೆ ಅನುಭವಿಸಿದ್ದ ಮೆಲ್ಬೋರ್ನ್ ಸ್ಟಾರ್ಸ್ ಇದೀಗ ಮತ್ತೊಮ್ಮೆ ನಿರಾಶೆಯನುಭವಿಸಿತು.