ETV Bharat / sports

'ಏನೂ ಸೌಲಭ್ಯವಿಲ್ಲದ ಜಮ್ಮುವಿನಿಂದ ಬಂದ ಅಬ್ದುಲ್‌ ಐಪಿಎಲ್​ನಲ್ಲಿ ಅದ್ಭುತ ಸೃಷ್ಟಿಸಿದ್ರು' - ಸನ್​ರೈಸರ್ಸ್​ ಹೈದರಾಬಾದ್​ ಪರ ಅಬ್ದುಲ್ ಸಮದ್​

ನನಗೆ ಸಮದ್​ ಮೇಲೆ ಭರವಸೆಯಿದೆ. ಈಗಾಗಲೇ ಅವನ ಜೊತೆ ಮಾತನಾಡಿದ್ದೇನೆ. ಆತ ಐಪಿಎಲ್​ನಲ್ಲಿ ಆಡಿದ ಮೇಲೆ ಕ್ರಿಕೆಟ್‌ನಲ್ಲಿ ಮುಂದೆ ಬರುತ್ತಿದ್ದಾನೆ. ಆತನಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಖಂಡಿತ ಭವಿಷ್ಯದಲ್ಲಿ ಅತ್ಯುತ್ತಮವಾಗಿ ಆಡಬಲ್ಲ ಎಂದು ರೈನಾ ಹೇಳಿದ್ದಾರೆ.

ಅಬ್ಧುಲ್ ಸಮದ್​
ಅಬ್ಧುಲ್ ಸಮದ್​
author img

By

Published : Dec 8, 2020, 3:29 PM IST

ಜಮ್ಮು: 2020ರ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಪರ ಆಡಿದ್ದು ಜಮ್ಮು ಕಾಶ್ಮೀರದ ಯುವ ಆಲ್​ರೌಂಡರ್​ ಅಬ್ಧುಲ್​ ಸಮದ್​ ಅದ್ಭುತ ಪ್ರದರ್ಶನಕ್ಕೆ ಕಾರಣವಾಗಿದೆ ಎಂದು ಮಾಜಿ ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮದ್ 13ನೇ ಐಪಿಎಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಸೂಕ್ತ ಪ್ರೋತ್ಸಾಹ ಮತ್ತು ಉತ್ತಮ ಸೌಲಭ್ಯಗಳ ಕೊರತೆಯ ನಡುವೆಯೂ ಅದ್ಭುತ ಸೃಷ್ಟಿಸಿದರು ಎಂದು ಯುವ ಆಟಗಾರನನ್ನು ರೈನಾ ಕೊಂಡಾಡಿದ್ದಾರೆ.

ನನಗೆ ಸಮದ್​ ಮೇಲೆ ಭರವಸೆಯಿದೆ. ಈಗಾಗಲೇ ಅವನ ಜೊತೆ ಮಾತನಾಡಿದ್ದೇನೆ. ಆತ ಐಪಿಎಲ್​ನಲ್ಲಿ ಆಡಿದ ಮೇಲೆ ಕ್ರಿಕೆಟ್‌ನಲ್ಲಿ ಮುಂದೆ ಬರುತ್ತಿದ್ದಾನೆ. ಆತನಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಖಂಡಿತ ಭವಿಷ್ಯದಲ್ಲಿ ಅತ್ಯುತ್ತಮವಾಗಿ ಆಡಬಲ್ಲ ಎಂದು ಅವರು ಹೇಳಿದ್ದಾರೆ.

ಸುರೇಶ್ ರೈನಾ ಕ್ರಿಕೆಟ್ ಆಕಾಡೆಮಿ ಟ್ರಯಲ್ಸ್​

ಓದಿ: ಯುವಿ​-ಧೋನಿ ನಂತರ ಟೀಂ ಇಂಡಿಯಾದ ಬೆಸ್ಟ್ ಫಿನಿಷರ್ ಹೆಸರಿಸಿದ ಗಂಭೀರ್

ಸಮದ್​ ಐಪಿಎಲ್​ನಲ್ಲಿ 170 ಸ್ಟ್ರೈಕ್​ರೇಟ್​ನಲ್ಲಿ 111 ರನ್ ​ಗಳಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಕ್ವಾಲಿಫೈಯರ್​ನಲ್ಲಿ ಅವರು ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯದ ಹೆಚ್ಚು ಚರ್ಚಿಸಲ್ಪಟ್ಟ ಆಟಗಾರನಾಗಿದ್ದರು. ಕೇವಲ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು. ರಬಾಡ ಮತ್ತು ಎನ್ರಿಚ್ ನಾಟ್ಜೆ ಅವರ ಬೌಲಿಂಗ್‌ನಲ್ಲಿ ತಲಾ ಒಂದೊಂದು ಸಿಕ್ಸರ್​ ಸಿಡಿಸಿದ್ದರು.​

ಅಬ್ಧುಲ್ ಸಮದ್​
ಅಬ್ಧುಲ್ ಸಮದ್​

ರೈನಾ ಸ್ವತಃ ಇಂದು ಯುವ ಆಟಗಾರರಿಗಾಗಿ ಜಮ್ಮುವಿನಲ್ಲಿ ಟ್ರಯಲ್ಸ್​ ಆಯೋಜಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.