ದುಬೈ: ಭಾರತ ತಂಡದ ಮಾಜಿ ಆಲ್ರೌಂಡರ್ ಸುರೇಶ್ ರೈನಾ ದುಬೈನಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನಪು ಮಾಡಿಕೊಂಡಿದ್ದು, ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ವಿನಂತಿಸಿಕೊಂಡಿದ್ದಾರೆ.
13ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲ ತಂಡಗಳು ದುಬೈಗೆ ಹಾರಿದ್ದು, ಹೋಟೆಲ್ಗಳಲ್ಲಿ 6 ದಿನಗಳ ಕ್ವಾರಂಟೈನ್ಗೆ ಒಳಗಾಗಿವೆ. ಸಿಎಸ್ಕೆ ತಂಡದೊಂದಿಗೆ ದುಬೈ ಸೇರಿರುವ ರೈನಾ ಅಭ್ಯಾಸ ಆರಂಭಿಸುವ ಮುನ್ನ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಈ ವೇಳೆ, ಸುಶಾಂತ್ ಸಿಂಗ್ ರಜಪೂತ್ ಅವರ ಸಿನಿಮಾ ಸಾಂಗ್ಗಳನ್ನು ಕೇಳುವ ಸಂದರ್ಭದಲ್ಲಿ ಭಾವುಕರಾಗಿರುವ ಅವರು, ಸಾಮಾಜಿಕ ಜಾಲತಾಣದ ಮೂಲಕ ಸುಶಾಂತ್ ಸಾವಿಗೆ ನ್ಯಾಯ ದೊರಕಬೇಕೆಂದು ಆಗ್ರಹಿಸಿದ್ದಾರೆ.
-
Brother you will always be alive in our hearts, your fans miss you more than anything! 🌟 I have full faith on our government & it’s leaders who will leave no stone unturned to bring you justice, you are a true inspiration!🙏#GlobalPrayersforSSR #JusticeforSSR@narendramodi pic.twitter.com/dziQlhr2vn
— Suresh Raina🇮🇳 (@ImRaina) August 24, 2020 " class="align-text-top noRightClick twitterSection" data="
">Brother you will always be alive in our hearts, your fans miss you more than anything! 🌟 I have full faith on our government & it’s leaders who will leave no stone unturned to bring you justice, you are a true inspiration!🙏#GlobalPrayersforSSR #JusticeforSSR@narendramodi pic.twitter.com/dziQlhr2vn
— Suresh Raina🇮🇳 (@ImRaina) August 24, 2020Brother you will always be alive in our hearts, your fans miss you more than anything! 🌟 I have full faith on our government & it’s leaders who will leave no stone unturned to bring you justice, you are a true inspiration!🙏#GlobalPrayersforSSR #JusticeforSSR@narendramodi pic.twitter.com/dziQlhr2vn
— Suresh Raina🇮🇳 (@ImRaina) August 24, 2020
ಈಗಾಗಲೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಲಾಗಿದ್ದು, ತನಿಖೆ ನಡೆಯುತ್ತಿದೆ. ದೇಶಾದ್ಯಂತ ಸುಶಾಂತ್ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಕೂಗು ಹೆಚ್ಚಾಗುತ್ತಿದೆ. ಇದೀಗ ಕ್ರಿಕೆಟಿಗ ರೈನಾ ಕೂಡ ಅದಕ್ಕೆ ಬೆಂಬಲ ನೀಡಿದ್ದಾರೆ.
ಸಹೋದರ ನೀನು ಸದಾ ನಮ್ಮ ಹೃದಯದಲ್ಲಿ ಜೀವಂತವಾಗಿರುವೆ. ನಿಮ್ಮ ಅಭಿಮಾನಿಗಳು ಎಲ್ಲಕ್ಕಿಂತ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ನಾನು ನಮ್ಮ ಸರ್ಕಾರದ ಮೇಲೆ ತುಂಬಾ ನಂಬಿಕೆಯಿಟ್ಟಿದ್ದೇನೆ. ನಮ್ಮ ನಾಯಕರು ನಿಮಗೆ ನ್ಯಾಯ ತಂದು ಕೊಡಲಿದ್ದಾರೆ ಎಂದು ಭಾವಿಸಿದ್ದೇನೆ. ನೀವು ನಿಜವಾದ ಪ್ರೇರಣೆಯಾಗಿದ್ದೀರಾ ಎಂದು ರೈನಾ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದು, #JusticeforSSR ಎಂದು ಉಲ್ಲೇಖಿಸಿದ್ದಾರೆ.