ಶಾರ್ಜಾ: ವುಮೆನ್ಸ್ ಟಿ20 ಚಾಲೆಂಜ್ನ 3ನೇ ಪಂದ್ಯದಲ್ಲಿ ಟ್ರೈಲ್ಬ್ಲೇಜರ್ಸ್ ವಿರುದ್ಧ ಟಾಸ್ ಗೆದ್ದ ಸೂಪರ್ ನೋವಾಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ರೋಚಕ ಸೋಲುಕಂಡಿದ್ದ ಸೂಪರ್ ನೋವಾಸ್ ಫೈನಲ್ ಪ್ರವೇಶಿಸಬೇಕಾದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ವೆಲಾಸಿಟಿ ಟ್ರೈಲ್ ಬ್ಲೇಜರ್ಸ್ ವಿರುದ್ಧ ಹೀನಾಯ ಸೋಲು ಕಂಡಿರುವುದರಿಂದ ಈ ಪಂದ್ಯದಲ್ಲಿ ಸೂಪರ್ ನೋವಾಸ್ ಗೆದ್ದರೆ ರನ್ರೇಟ್ ಆಧಾರದ ಮೇಲೆ ಫೈನಲ್ ಪ್ರವೇಶಿಸಲಿದೆ.
-
Match 3. Supernovas win the toss and elect to bat https://t.co/Kj1ikDw45P #TBLvSNO #JioWomensT20Challenge
— IndianPremierLeague (@IPL) November 7, 2020 " class="align-text-top noRightClick twitterSection" data="
">Match 3. Supernovas win the toss and elect to bat https://t.co/Kj1ikDw45P #TBLvSNO #JioWomensT20Challenge
— IndianPremierLeague (@IPL) November 7, 2020Match 3. Supernovas win the toss and elect to bat https://t.co/Kj1ikDw45P #TBLvSNO #JioWomensT20Challenge
— IndianPremierLeague (@IPL) November 7, 2020
ಇತ್ತ ಮೊದಲ ಪಂದ್ಯದಲ್ಲೇ ಆಲ್ರೌಂಡರ್ ಪ್ರದರ್ಶನ ತೋರಿ ಗಮನ ಸೆಳಿದಿರುವ ಸ್ಮೃತಿ ಮಂಧಾನ ನೇತೃತ್ವದ ಟ್ರೈಲ್ ಬ್ಲೇಜರ್ಸ್ ತಂಡ ಇಂದಿನ ಪಂದ್ಯದಲ್ಲೂ ಗೆಲ್ಲಲು ಎದುರು ನೋಡುತ್ತಿದೆ. ಈ ಪಂದ್ಯವನ್ನು ಸೋತರು ರನ್ರೇಟ್ನಲ್ಲಿ ಸಾಕಷ್ಟು ಮುಂದಿರುವುದರಿಂದ ಸ್ಮೃತಿ ಪಡೆ ಫೈನಲ್ ಪ್ರವೇಶಿಸಿಲಿದೆ.
ಈ ಪಂದ್ಯದಲ್ಲಿಟ್ರೈಲ್ ಬ್ಲೇಜರ್ಸ್ ಯಾವುದೇ ಬದಲಾವಣೆ ಯಿಲ್ಲದೆ ಕಣಕ್ಕಿಳಿಯುತ್ತಿದ್ದರೆ, ಸೂಪರ್ ನೋವಾಸ್ ಒಂದು ಬದಲಾವಣೆ ಮಾಡಿಕೊಂಡಿದೆ. ಅನುಭವಿ ಸ್ಪಿನ್ನರ್ ಅನುಜಾ ಪಾಟೀಲ್ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.