ಹೈದರಾಬಾದ್: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸುತ್ತಿದ್ದು, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನ ಫ್ರಾಂಚೈಸಿ ಸನ್ರೈಸರ್ಸ್ ಹೈದರಾಬಾದ್ ಕೂಡ ಧನ ಸಹಾಯ ಮಾಡಿದೆ.
ಕೊರೊನಾ ವಿರುದ್ಧದ ಹೋರಾಟಕ್ಕಾಗಿ 10 ಕೋಟಿ ರೂ ದೇಣಿಗೆ ಮಾಡಿರುವ ಹೈದರಾಬಾದ್ ತಂಡದ ನಿರ್ಧಾರಕ್ಕೆ ತಂಡದ ಕ್ಯಾಪ್ಟನ್ ಡೇವಿಡ್ ವಾರ್ನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
How good is this well done Sun TV Group @SunRisers https://t.co/bToZNyQNdx
— David Warner (@davidwarner31) April 9, 2020 " class="align-text-top noRightClick twitterSection" data="
">How good is this well done Sun TV Group @SunRisers https://t.co/bToZNyQNdx
— David Warner (@davidwarner31) April 9, 2020How good is this well done Sun TV Group @SunRisers https://t.co/bToZNyQNdx
— David Warner (@davidwarner31) April 9, 2020
'ವೆಲ್ ಡನ್ ಸನ್ ಟಿವಿ ಗ್ರೂಪ್' ಎಂದು ಡೇವಿಡ್ ವಾರ್ನರ್ ಟ್ವೀಟ್ ಮಾಡಿದ್ದಾರೆ. ಪಿಎಂ ಕೇರ್ಸ್ ನಿಧಿಗೆ ಈಗಾಗಲೇ ಅನೇಕ ಕ್ರೀಡಾಪಟುಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಈಗಾಗಲೇ 51 ಕೋಟಿ ರೂ ಕೊಟ್ಟಿದೆ.
2016ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಗೆದ್ದ ಈ ತಂಡ ಪ್ರಮುಖ ಫ್ರಾಂಚೈಸಿಗಳಲ್ಲಿ ಒಂದಾಗಿದೆ. 2018ರ ಫೈನಲ್‌ನಲ್ಲಿ ಸಿಎಸ್ಕೆ ವಿರುದ್ಧ ಸೋಲು ಕಂಡಿತ್ತು.
ಕಳೆದ ಮಾರ್ಚ್ 29 ರಿಂದ ಶುರುವಾಗಬೇಕಿದ್ದ ಈ ಟೂರ್ನಿ ಕೊರೊನಾ ವೈರಸ್ ಭೀತಿಯಿಂದಾಗಿ ಮುಂದೂಡಲಾಗಿದೆ.