ETV Bharat / sports

ಭುವಿ, ರಶೀದ್​ ಮ್ಯಾಜಿಕ್​: ಡೆಲ್ಲಿ ಮಣಿಸಿ ಗೆಲುವಿನ ಹಳಿಗೆ ಮರಳಿದ ಹೈದರಾಬಾದ್​

author img

By

Published : Sep 29, 2020, 11:53 PM IST

Updated : Sep 30, 2020, 3:13 PM IST

ಟೂರ್ನಿಯಲ್ಲಿ ಸತತ ಎರಡು ಸೋಲು ಕಂಡಿದ್ದ ಸನ್​ರೈಸರ್ಸ್​ ಕೊನೆಗೂ ಡೆಲ್ಲಿ ಕ್ಯಾಪಿಟಲ್​ ತಂಡವನ್ನು ತನ್ನ ಬೌಲಿಂಗ್​ ಶಕ್ತಿಯಿಂದ ಕಟ್ಟಿ ಹಾಕಿ 15 ರನ್​ಗಳಿಂದ ಮಣಿಸುವ ಮೂಲಕ ಪ್ರಾಬಲ್ಯ ಮೆರೆಯಿತು.

ಸನ್​ರೈಸರ್ಸ್​ ಹೈದರಾಬಾದ್​ vs ಡೆಲ್ಲಿ ಕ್ಯಾಪಿಟಲ್​

ಅಬುಧಾಬಿ: ಅನುಭವಿ ಭುವನೇಶ್ವರ್ ಕುಮಾರ್​ ಹಾಗೂ ಸ್ಪಿನ್ನರ್​ ರಶೀದ್​ ಖಾನ್​ರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್ ತಂಡ 15 ರನ್​ಗಳಿಂದ ಡೆಲ್ಲಿ ಕ್ಯಾಪಿಟಲ್​ ತಂಡವನ್ನು ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

ಟೂರ್ನಿಯಲ್ಲಿ ಸತತ ಎರಡು ಸೋಲು ಕಂಡಿದ್ದ ಸನ್​ರೈಸರ್ಸ್​ ಕೊನೆಗೂ ಡೆಲ್ಲಿ ಕ್ಯಾಪಿಟಲ್​ ತಂಡವನ್ನು ತನ್ನ ಬೌಲಿಂಗ್​ ಶಕ್ತಿಯಿಂದ ಕಟ್ಟಿ ಹಾಕಿ 15 ರನ್​ಗಳಿಂದ ಮಣಿಸುವ ಮೂಲಕ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿತು.

163 ರನ್​ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್​ ಮೊದಲ ಓವರ್​ನಲ್ಲೇ ಕಳೆದ ಪಂದ್ಯದ ಹೀರೋ ಪೃಥ್ವಿ ಶಾ ಅವರ ವಿಕೆಟ್​ ಕಳೆದುಕೊಂಡಿತು. ಭುವನೇಶ್ವರ್​ ಕುಮಾರ್​ ಬೌಲಿಂಗ್​ನಲ್ಲಿ ಶಾ ಕೀಪರ್​ಬೈರ್ಸ್ಟೋವ್​ಗೆ ಕ್ಯಾಚ್​ ನೀಡಿ ಔಟಾದರು.

ನಂತರ ಬಂದ ನಾಯಕ ಶ್ರೇಯಸ್​ ಅಯ್ಯರ್​ ವಿಕೆಟ್​ ಕಾಯ್ದುಕೊಳ್ಳುವುದಕ್ಕೆ ಮುಂದಾದರೂ ರನ್​ಗಳಿಸುವಲ್ಲಿ ವಿಫರಾದರು. ಇವರು ಶಿಖರ್​ ಧವನ್ ಜೊತೆಗೂಡಿ 40 ರನ್​ಗಳ ಜೊತೆಯಾಟ ನೀಡಿದರು. ಆದರೆ 21 ಎಸೆತಗಳಲ್ಲಿ ಕೇವಲ 17 ರನ್​ಗಳಿಸಿ ರಶೀದ್​ ಖಾನ್​ಗೆ ವಿಕೆಟ್​ ಒಪ್ಪಿಸಿದರು. ಶಿಖರ್​ ಧವನ್​ ಕೂಡ 31 ಎಸೆತಗಳಲ್ಲಿ 34 ರನ್​ಗಳಿಸಿ ರಶೀದ್​ಗೆ 2ನೇ ಬಲಿಯಾದರು.

.@SunRisers register their first win of #Dream11IPL 2020 as they beat #DelhiCapitals by 15 runs in Match 11

A look at the Match Summary below 👇#DCvSRH pic.twitter.com/OWyZdkhenD

— IndianPremierLeague (@IPL) September 29, 2020 ">

4ನೇ ವಿಕೆಟ್​ ಜೊತೆಯಾದ ಹೆಟ್ಮೈರ್ ಮತ್ತು ರಿಷಭ್ ಪಂತ್​ 42 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರಾದರೂ, 21 ಎಸೆತಗಳಲ್ಲಿ 21 ರನ್​ಗಳಿಸಿದ್ದ ಹೆಟ್ಮೈರ್, ಭುವನೇಶ್ವರ್​ ಕುಮಾರ್​ ಸ್ವಿಂಗ್ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಮನೀಶ್ ಪಾಂಡೆಗೆ ಕ್ಯಾಚ್​ ನೀಡಿ ಔಟಾದರು.

ಇವರ ಬೆನ್ನಲ್ಲೇ ಡೆಲ್ಲಿ ತಂಡದ ಆಪತ್ಪಾಂಧವ ಪಂತ್,​ ರಶೀದ್​ ಸ್ಪಿನ್​ ಮೋಡಿಗೆ ಬಲಿಯಾದರು. 27 ಎಸೆತಗಳಲ್ಲಿ 2 ಸಿಕ್ಸರ್​, ಒಂದು ಬೌಂಡರಿ ಸಹಿತ 28 ರನ್​ಗಳಿಸಲಷ್ಟೇ ಶಕ್ತವಾದರು. ಉಳಿದಂತೆ ಸ್ಟೋಯ್ನಿಸ್​ 11, ಅಕ್ಷರ್ ಪಟೇಲ್ 5 ರನ್​ಗಳಿಸಿ ಔಟಾದರೆ, ರಬಾಡ 15 ರನ್​ಗಳಿಸಿ ಔಟಾಗದೆ ಉಳಿದರು.

ಟೂರ್ನಿಯಲ್ಲಿ ಬಲಿಷ್ಠ ಬೌಲಿಂಗ್ ಶಕ್ತಿಯನ್ನು ಹೊಂದಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡ ಕೊನೆಗೂ ತನ್ನ ಮೂರನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಅನುಭವಿ ಭುವನೇಶ್ವರ್​ ಕುಮಾರ್​ 25ಕ್ಕೆ 2, ರಶೀದ್​ ಖಾನ್​ 14ಕ್ಕೆ 3 ಎನ್ ನಟರಾಜನ್​ 25ಕ್ಕೆ 1, ಹಾಗೂ ಖಲೀಲ್ ಅಹ್ಮದ್​ 43 ಕ್ಕೆ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್​ರೈಸರ್ಸ್​ ಹೈದರಾಬಾದ್​, ವಾರ್ನರ್​ 45, ಬೈರ್ಸ್ಟೋವ್​ 53 ಹಾಗೂ ವಿಲಿಯಮ್ಸನ್​ ಅವರ 41 ರನ್​ಗಳ ನೆರವಿನಿಂದ 162 ರನ್​ಗಳಿಸಿತ್ತು.

ಅಬುಧಾಬಿ: ಅನುಭವಿ ಭುವನೇಶ್ವರ್ ಕುಮಾರ್​ ಹಾಗೂ ಸ್ಪಿನ್ನರ್​ ರಶೀದ್​ ಖಾನ್​ರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್ ತಂಡ 15 ರನ್​ಗಳಿಂದ ಡೆಲ್ಲಿ ಕ್ಯಾಪಿಟಲ್​ ತಂಡವನ್ನು ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

ಟೂರ್ನಿಯಲ್ಲಿ ಸತತ ಎರಡು ಸೋಲು ಕಂಡಿದ್ದ ಸನ್​ರೈಸರ್ಸ್​ ಕೊನೆಗೂ ಡೆಲ್ಲಿ ಕ್ಯಾಪಿಟಲ್​ ತಂಡವನ್ನು ತನ್ನ ಬೌಲಿಂಗ್​ ಶಕ್ತಿಯಿಂದ ಕಟ್ಟಿ ಹಾಕಿ 15 ರನ್​ಗಳಿಂದ ಮಣಿಸುವ ಮೂಲಕ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿತು.

163 ರನ್​ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್​ ಮೊದಲ ಓವರ್​ನಲ್ಲೇ ಕಳೆದ ಪಂದ್ಯದ ಹೀರೋ ಪೃಥ್ವಿ ಶಾ ಅವರ ವಿಕೆಟ್​ ಕಳೆದುಕೊಂಡಿತು. ಭುವನೇಶ್ವರ್​ ಕುಮಾರ್​ ಬೌಲಿಂಗ್​ನಲ್ಲಿ ಶಾ ಕೀಪರ್​ಬೈರ್ಸ್ಟೋವ್​ಗೆ ಕ್ಯಾಚ್​ ನೀಡಿ ಔಟಾದರು.

ನಂತರ ಬಂದ ನಾಯಕ ಶ್ರೇಯಸ್​ ಅಯ್ಯರ್​ ವಿಕೆಟ್​ ಕಾಯ್ದುಕೊಳ್ಳುವುದಕ್ಕೆ ಮುಂದಾದರೂ ರನ್​ಗಳಿಸುವಲ್ಲಿ ವಿಫರಾದರು. ಇವರು ಶಿಖರ್​ ಧವನ್ ಜೊತೆಗೂಡಿ 40 ರನ್​ಗಳ ಜೊತೆಯಾಟ ನೀಡಿದರು. ಆದರೆ 21 ಎಸೆತಗಳಲ್ಲಿ ಕೇವಲ 17 ರನ್​ಗಳಿಸಿ ರಶೀದ್​ ಖಾನ್​ಗೆ ವಿಕೆಟ್​ ಒಪ್ಪಿಸಿದರು. ಶಿಖರ್​ ಧವನ್​ ಕೂಡ 31 ಎಸೆತಗಳಲ್ಲಿ 34 ರನ್​ಗಳಿಸಿ ರಶೀದ್​ಗೆ 2ನೇ ಬಲಿಯಾದರು.

4ನೇ ವಿಕೆಟ್​ ಜೊತೆಯಾದ ಹೆಟ್ಮೈರ್ ಮತ್ತು ರಿಷಭ್ ಪಂತ್​ 42 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರಾದರೂ, 21 ಎಸೆತಗಳಲ್ಲಿ 21 ರನ್​ಗಳಿಸಿದ್ದ ಹೆಟ್ಮೈರ್, ಭುವನೇಶ್ವರ್​ ಕುಮಾರ್​ ಸ್ವಿಂಗ್ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಮನೀಶ್ ಪಾಂಡೆಗೆ ಕ್ಯಾಚ್​ ನೀಡಿ ಔಟಾದರು.

ಇವರ ಬೆನ್ನಲ್ಲೇ ಡೆಲ್ಲಿ ತಂಡದ ಆಪತ್ಪಾಂಧವ ಪಂತ್,​ ರಶೀದ್​ ಸ್ಪಿನ್​ ಮೋಡಿಗೆ ಬಲಿಯಾದರು. 27 ಎಸೆತಗಳಲ್ಲಿ 2 ಸಿಕ್ಸರ್​, ಒಂದು ಬೌಂಡರಿ ಸಹಿತ 28 ರನ್​ಗಳಿಸಲಷ್ಟೇ ಶಕ್ತವಾದರು. ಉಳಿದಂತೆ ಸ್ಟೋಯ್ನಿಸ್​ 11, ಅಕ್ಷರ್ ಪಟೇಲ್ 5 ರನ್​ಗಳಿಸಿ ಔಟಾದರೆ, ರಬಾಡ 15 ರನ್​ಗಳಿಸಿ ಔಟಾಗದೆ ಉಳಿದರು.

ಟೂರ್ನಿಯಲ್ಲಿ ಬಲಿಷ್ಠ ಬೌಲಿಂಗ್ ಶಕ್ತಿಯನ್ನು ಹೊಂದಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡ ಕೊನೆಗೂ ತನ್ನ ಮೂರನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಅನುಭವಿ ಭುವನೇಶ್ವರ್​ ಕುಮಾರ್​ 25ಕ್ಕೆ 2, ರಶೀದ್​ ಖಾನ್​ 14ಕ್ಕೆ 3 ಎನ್ ನಟರಾಜನ್​ 25ಕ್ಕೆ 1, ಹಾಗೂ ಖಲೀಲ್ ಅಹ್ಮದ್​ 43 ಕ್ಕೆ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್​ರೈಸರ್ಸ್​ ಹೈದರಾಬಾದ್​, ವಾರ್ನರ್​ 45, ಬೈರ್ಸ್ಟೋವ್​ 53 ಹಾಗೂ ವಿಲಿಯಮ್ಸನ್​ ಅವರ 41 ರನ್​ಗಳ ನೆರವಿನಿಂದ 162 ರನ್​ಗಳಿಸಿತ್ತು.

Last Updated : Sep 30, 2020, 3:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.