ETV Bharat / sports

ನರೈನ್‌ ಬೌಲಿಂಗ್‌ ಶೈಲಿ ಕ್ರಮಬದ್ಧವಾಗಿದೆ: IPL ಪರಿಶೀಲನಾ ಸಮಿತಿ

author img

By

Published : Oct 18, 2020, 4:17 PM IST

Updated : Oct 18, 2020, 4:24 PM IST

ಅಬುಧಾಬಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧ ಸುನೀಲ್ ನರೈನ್ ಬೌಲಿಂಗ್ ಶೈಲಿ ಅನುಮಾನಾಸ್ಪದ ಎಂದು ಮೈದಾನದ ಅಂಪೈರ್ ವರದಿ ನೀಡಿದ್ದರು. ಇದೀಗ ನರೈನ್ ಬೌಲಿಂಗ್ ಶೈಲಿಯನ್ನು ಪರಿಶೀಲಿಸಿರುವ ಐಪಿಎಲ್​ ಸಮಿತಿ, ಕೆಕೆಆರ್​ ಪ್ರಧಾನ ಸ್ಪಿನ್ನರ್‌ನನ್ನು ಕಳಂಕರಹಿತರನ್ನಾಗಿ ಮಾಡಿದೆ.

ಅನುಮಾಸ್ಪದ ಬೌಲಿಂಗ್ ಶೈಲಿ
ಸುನೀಲ್ ನರೈನ್

ಅಬುಧಾಬಿ: ಅನುಮಾನಾಸ್ಪದ ಬೌಲಿಂಗ್ ಶೈಲಿ ಆರೋಪ ಹೊತ್ತಿದ್ದ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಆಲ್​ರೌಂಡರ್​ ಸುನೀಲ್ ನರೈನ್ ಇದೀಗ ನಿರಾಳರಾಗಿದ್ದಾರೆ.

ಐಪಿಎಲ್​ನ ಸಂಶಯಾಸ್ಪದ ಬೌಲಿಂಗ್ ಶೈಲಿ ಪರಿಶೀಲನಾ ಸಮಿತಿ ನರೈನ್​ ಬೌಲಿಂಗ್ ಸರಿಯಿದೆ ಎಂದು ತಿಳಿಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಮುಂದಿನ ಪಂದ್ಯಗಳಿಗೆ ಅವರು ಲಭ್ಯರಾಗಲಿದ್ದಾರೆ.

ಅಬುಧಾಬಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧ ಸುನೀಲ್ ನರೈನ್ ಬೌಲಿಂಗ್ ಶೈಲಿ ಅಕ್ರಮ ಎಂದು ಮೈದಾನದ ಅಂಪೈರ್ ವರದಿ ನೀಡಿದ್ದರು. ಇದೀಗ ಅವರ ಬೌಲಿಂಗ್ ಶೈಲಿಯನ್ನು ಪರಿಶೀಲಿಸಿರುವ ಐಪಿಎಲ್​ ಸಮಿತಿ, ಕೆಕೆಆರ್​ ಪ್ರಧಾನ ಸ್ಪಿನ್ನರ್​ ಬೌಲಿಂಗ್ ಕ್ರಮಬದ್ಧವಾಗಿದೆ ಎಂದು ತಿಳಿಸಿದೆ.

ನರೈನ್ ಸ್ಲೋ ಮೋಷನ್ ಬೌಲಿಂಗ್ ವಿಡಿಯೋವನ್ನು ಕಳುಹಿಸಿದ್ದ ಕೆಕೆಆರ್, ಬೌಲಿಂಗ್​ ಶೈಲಿಯನ್ನು ಪರಿಶೀಲಿಸುವಂತೆ ​ ಐಪಿಎಲ್ ಪರಿಶೀಲನಾ ಸಮಿತಿಗೆ ಮನವಿ ಮಾಡಿತ್ತು. ಇದೀಗ ಆ ವಿಡಿಯೋ ಪರಿಶೀಲಿಸಿರುವ ಸಮಿತಿ "ನರೈನ್ ಅವರ ಬೌಲಿಂಗ್ ವಿಧಾನವನ್ನು ಎಲ್ಲಾ ಆಯಾಮಗಳಿಂದಲೂ ಪರಿಶೀಲಿಸಲಾಗಿದೆ. ಅವರ ಶೈಲಿ ಅನುಮತಿ ನೀಡಿದ ಪರಿಧಿಯೊಳಗಿದೆ" ಎಂದು ಸ್ಪಷ್ಟಪಡಿಸಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೇವಲ 2 ರನ್​ಗಳ ಅಂತರದಿಂದ ಗೆದ್ದ ನಂತರ ಪಂದ್ಯದ ಅಧಿಕಾರಿಗಳ ದೂರಿನಿಂದ ಬೌಲರ್‌ ವಿರುದ್ಧ ಆರೋಪ ಮಾಡಿದ್ದು, ಶ್ರೇಷ್ಠ ಸ್ಪಿನ್ನರ್​ಗೆ ಹಾಗೂ ಕೆಕೆಆರ್ ಫ್ರಾಂಚೈಸಿಗೆ ಬೇಸರ ತಂದಿತ್ತು. ನಂತರ ಮೂರು ಪಂದ್ಯಗಳಿಂದ ನರೈನ್​ರನ್ನು ಹೊರಗಿಟ್ಟು ಆರೋಪ ಮುಕ್ತಗೊಳಿಸಲು ಬಯಸಿತ್ತು. ಇದೀಗ ನರೈನ್ ಬೌಲಿಂಗ್ ಶೈಲಿಯ ಮೇಲಿದ್ದ ಅಕ್ರಮ ಕಳಂಕ ಕಳಚಿಬಿದ್ದಿದ್ದು, ಐಪಿಎಲ್​ನ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ.

Last Updated : Oct 18, 2020, 4:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.