ETV Bharat / sports

ಸುನಿಲ್​ ಗವಾಸ್ಕರ್​ ನೆಟ್ಸ್​ನಲ್ಲಿ ನಾ ನೋಡಿದ ಅತ್ಯಂತ ಕೆಟ್ಟ ಆಟಗಾರ: ಕಿರಣ್​ ಮೋರೆ

ಸುನಿಲ್​ ಗವಾಸ್ಕರ್​ ಅವರ ಜೊತೆಯಲ್ಲಿ ಕೆಲವ ವರ್ಷಗಳ ಕಾಲ ಜೊತೆಯಾಗಿ ಆಡಿರುವ ಮೋರೆ ನೆಟ್​ನಲ್ಲಿ ಸುನಿಲ್​ ಗವಾಸ್ಕರ್​ ಅವರು ಅತ್ಯಂತ ಕೆಟ್ಟ​ ರೀತಿಯಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದರು ಎಂದಿದ್ದಾರೆ.

author img

By

Published : Jul 4, 2020, 4:40 PM IST

Sunil Gavaskar
ಸುನಿಲ್​ ಗವಾಸ್ಕರ್​

ಮುಂಬೈ: ಭಾರತ ತಂಡದ ದಂತಕತೆ ಸುನಿಲ್​ ಗವಾಸ್ಕರ್​ರವರನ್ನು ನೆಟ್ಸ್​ನಲ್ಲಿ ನಾನು ನೋಡಿದ ಅತ್ಯಂತ ಕೆಟ್ಟ ಆಟಗಾರ. ಆದರೆ, ಪಂದ್ಯದಲ್ಲೇ ಅವರ ಆಟ ಅದ್ಭುತವಾಗಿರುತ್ತಿತ್ತು ಎಂದು ಮಾಜಿ ವಿಕೆಟ್​ ಕೀಪರ್​ ಕಿರಣ್​ ಮೋರೆ ಹೇಳಿದ್ದಾರೆ.

ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ಬಾರಿಗೆ ಹತ್ತು ಸಾವಿರ ರನ್​ಗಳಿಸಿದ ದಾಖಲೆ ಹೊಂದಿರುವ ಸುನಿಲ್​ ಗವಾಸ್ಕರ್​ ಕುರಿತು ಮಾಜಿ ವಿಕೆಟ್​ ಕೀಪರ್​ ಮೋರೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುನಿಲ್​ ಗವಾಸ್ಕರ್​ ಅವರ ಜೊತೆ ಕೆಲವ ವರ್ಷಗಳ ಕಾಲ ಜೊತೆಯಾಗಿ ಆಡಿರುವ ಮೋರೆ ನೆಟ್​ನಲ್ಲಿ ಸುನಿಲ್​ ಗವಾಸ್ಕರ್​ ಅವರು ಅತ್ಯಂತ ಕೆಟ್ಟ​ ರೀತಿ ಬ್ಯಾಟಿಂಗ್​ ಮಾಡುತ್ತಿದ್ದರು ಎಂದಿದ್ದಾರೆ.

'ಬಲಿಷ್ಠ ಬೌಲರ್​ಗಳ ಮುಂದೆ ಸರಾಗವಾಗಿ ರನ್​ಗಳಿಸುತ್ತಿದ್ದ ಅವರು ನೆಟ್ಸ್​ನಲ್ಲಿ ಮಾತ್ರ ಬೌಲರ್​ಗಳನ್ನು ಎದುರಿಸಲು ಗವಾಸ್ಕರ್​ ಪರದಾಡುತ್ತಿದ್ದರು ಎಂದು ಬಹಿರಂಪಡಿಸಿದ್ದಾರೆ. ಆದರೂ ಸುನಿಲ್​ ಗವಾಸ್ಕರ್​ ಅವರನ್ನು ಹೊಗಳಿರುವ ಮೋರೆ, ಗವಾಸ್ಕರ್​ ನೆಟ್ಸ್​ನಲ್ಲಿ ಆಡುವುದಕ್ಕಿಂತ ಪಂದ್ಯದಲ್ಲಿ 99.9ರಷ್ಟು ವಿಭಿನ್ನವಾಗಿ ಆಡುತ್ತಿದ್ದರು. ಅವರ ಆಟ ನಿಜಕ್ಕೂ ಅದ್ಭುತವಾಗಿರುತ್ತಿತ್ತು.'

kiran more
ಕಿರಣ್​ ಮೋರೆ

ಹೆಲ್ಮೆಟ್​ ಇಲ್ಲದೆ ಡೆನಿಸ್​ ಲಿಲ್ಲಿ, ಜೆಫ್​ ಥಾಮಸ್​ರಂತಹ ಮಾರಕ ವೇಗಿಗಳನ್ನೇ ಎದುರಿಸುತ್ತಿದ್ದ ಗವಾಸ್ಕರ್​ಗೆ ಏಕಾಗ್ರತೆ ಎಂಬುದು ದೇವರು ಕೊಟ್ಟ ಉಡುಗೊರೆಯಾಗಿತ್ತು. ಅವರ ಏಕಾಗ್ರತೆ ನಿಜಕ್ಕೂ ನಂಬಲಸಾಧ್ಯವಾದಂತಿತ್ತು. ಅವರ ಪಕ್ಕದಲ್ಲಿ ನಿಂತು ಮಾತನಾಡಿದ್ರೂ, ನೃತ್ಯ ಮಾಡುತ್ತಿದ್ದರೂ ಅವರು ಅವರದ್ದೇ ಲೋಕದಲ್ಲಿರುತ್ತಿದ್ದರು. ಯಾವಾಗಲೂ ಕ್ರಿಕೆಟ್​ ಬಗ್ಗೆಯೇ ಆಲೋಚಿಸುತ್ತಿದ್ದರು ಎಂದು 57 ವರ್ಷದ ಕಿರಣ್​ ಮೋರೆ ತಿಳಿಸಿದ್ದಾರೆ.

ಸುನಿಲ್​ ಗವಾಸ್ಕರ್​ 1971ರಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. 1987ರಲ್ಲಿ ವಿದಾಯ ಹೇಳುವ ಮುನ್ನ ಭಾರತದ ಪರ 233 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು. 125 ಟೆಸ್ಟ್​ ಪಂದ್ಯಗಳನ್ನಾಡಿದ್ದ ಅವರು, 34 ಶತಗಳೊಡನೆ 10,122 ರನ್​ಗಳಿಸಿದ್ದರು. ಅಂತಾರಾಷ್ಟ್ರೀಯ(ಟೆಸ್ಟ್​ ಅಥವಾ ಏಕದಿನ) ಕ್ರಿಕೆಟ್​ ಮಾದರಿಯಲ್ಲಿ ಮೊದಲ ಬಾರಿಗೆ 10 ಸಾವಿರ ಗಡಿದಾಟಿದ ಬ್ಯಾಟ್ಸ್​ಮನ್​ ಎಂಬ ದಾಖಲೆ ಕೂಡ ಲಿಟ್ಲ್​ ಮಾಸ್ಟರ್​ಗೆ ಸಲ್ಲುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.