ಮೆಲ್ಬೋರ್ನ್: ಭಾರತ ಮಹಿಳಾ ತಂಡ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಟಿ20 ಸರಣಿಯ ಫೈನಲ್ನಲ್ಲಿ ಆಸ್ಟ್ರೇಲಿಯಾದಲ್ಲಿ ಸೋಲನುಭವಿಸಿ ನಿರಾಶೆಯನುಭವಿಸಿತ್ತು. ಆದರೆ ಈ ಪಂದ್ಯದಲ್ಲಿ ಆಶ್ಚರ್ಯಕರ ರೀತಿಯಲ್ಲಿ ರನ್ಔಟ್ ಮಿಸ್ ಆಗಿರುವುದು ಭಾರಿ ಸುದ್ದಿಯಲ್ಲಿದೆ.
ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಆಸಿಸ್ ತಂಡದ ನಾಯಕಿ ಮಗ್ ಲ್ಯಾನಿಂಗ್ ರನ್ ತೆಗೆದುಕೊಳ್ಳುವ ವೇಳೆ ರನ್ಔಟ್ ಆಗುವುದನ್ನು ಅದೃಷ್ಟದಿಂದ ತಪ್ಪಿಸಿಕೊಂಡಿದ್ದಾರೆ. ಅರುಂಧತಿ ರೆಡ್ಡಿ ಬೌಲಿಂಗ್ನಲ್ಲಿ ಒಂಟಿ ರನ್ತೆಗೆದುಕೊಳ್ಳುವುದಕ್ಕಾಗಿ ಓಡುವ ವೇಳೆ ಶಿಖಾ ಫಾಂಡೆ ಸ್ಟಂಪ್ನತ್ತ ಎಸೆದ ಚೆಂಡು ಸೂಜಿಯಳತೆ ದೂರದಲ್ಲಿ ಮಿಸ್ ಆಗಿತ್ತು. ಅದು ಸ್ಟಂಪ್ಗೆ ಅಳವಿಡಿಸಿದ್ದ ಮೈಕ್ವೈರ್ನಿಂದ ಎಂಬುದು ಆಶ್ಚರ್ಯಕರ ವಿಷಯವಾಗಿದೆ. ಇಂತಹ ಘಟನೆ ಇದೇ ಮೊದಲ ಬಾರಿಗೆ ಕ್ರಿಕೆಟ್ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
-
Another example of technology saving the batter!
— cricket.com.au (@cricketcomau) February 12, 2020 " class="align-text-top noRightClick twitterSection" data="
Have you ever seen this before? #AUSvIND pic.twitter.com/oQkGOuTyWO
">Another example of technology saving the batter!
— cricket.com.au (@cricketcomau) February 12, 2020
Have you ever seen this before? #AUSvIND pic.twitter.com/oQkGOuTyWOAnother example of technology saving the batter!
— cricket.com.au (@cricketcomau) February 12, 2020
Have you ever seen this before? #AUSvIND pic.twitter.com/oQkGOuTyWO
ಈ ವಿಡಿಯೋವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಇಂತಹ ಘಟನೆಯನ್ನು ಎಲ್ಲಾದರೂ ನೋಡಿದ್ದೀರಾ ಎಂದು ಬರೆದುಕೊಂಡಿದೆ.
ಶಿಖಾ ಪಾಂಡೆ ಎಸೆದ ಚೆಂಡು ಸ್ಟಂಪ್ಗೆ ಅಳವಡಿಸಿರುವ ಮೈಕ್ನ ವೈರ್ಗೆ ಬಿದ್ದಿದೆ. ಇದರಿಂದ ಬಾಲ್ ಸ್ಟಂಪ್ಗೆ ಬೀಳಬೇಕಿದ್ದ ಚೆಂಡು ವೈರ್ಗೆ ಬಿದ್ದ ತಕ್ಷಣ ತನ್ನ ಡೈರೆಕ್ಷನ್ ಬದಲಾಯಿಸಿದ ಕಾರಣ ಲ್ಯಾನಿಂಗ್ ಜೀವದಾನ ಪಡೆದಿದ್ದಾರೆ. ಅಲ್ಲದೇ ಆ ವೇಳೆ 20 ರನ್ಗಳಿಸಿದ್ದ ಅವರು ಮತ್ತೆ 6 ರನ್ ಹೆಚ್ಚಿಸಿಕೊಂಡು 15ನೇ ಓವರ್ನಲ್ಲಿ ಔಟಾದರು.
ಈ ಪಂದ್ಯದಲ್ಲಿ ಭಾರತ ತಂಡ ಸ್ಮೃತಿ ಮಂಧಾನರ (66) ಅರ್ಧಶತಕದ ಹೊರತಾಗಿಯೂ 11 ರನ್ಗಳ ಸೋಲು ಕಂಡಿತು.