ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟೆಸ್ಟ್ನಲ್ಲಿ ಸ್ಟುವರ್ಟ್ ಬ್ರಾಡ್ 10 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಕೇವಲ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಇಂಗ್ಲೆಂಡ್ ಮೊತ್ತ ಹೆಚ್ಚಾಗಲು ಕಾರಣರಾಗಿದ್ದರು.
ಎರಡನೇ ದಿನದಾಟದ ನಂತರ ಮಾತನಾಡಿದ ಅವರು ತಾವೂ ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಅವರ ಬ್ಯಾಟಿಂಗ್ ಶೈಲಿಯನ್ನು ಅನುಸರಿಸಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ. ವಾರ್ನ್ ಒಬ್ಬ ಲೆಜೆಂಡರಿ ಬೌಲರ್ ಆಗಿದ್ದರು ಟೆಸ್ಟ್ ಕ್ರಿಕೆಟ್ನಲ್ಲಿ ಕೊನೆಯ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಬಂದು ಎದರಾಳಿಯನ್ನು ಕಾಡುತ್ತಿದ್ದರು. ಅವರು ಟೆಸ್ಟ್ ಕ್ರಿಕೆಟ್ನಲ್ಲಿ 12 ಅರ್ಧಶತಕದ ಸಹಿತ 3154 ರನ್ಗಳಿಸಿದ್ದಾರೆ.
"ಅವು ಸಾಕಷ್ಟು ಪ್ರಮುಖ ರನ್ಗಳಾಗಿದ್ದವು. ಅದು ನಮ್ಮ ತಂಡದ ಇನ್ನಿಂಗ್ಸ್ನ ವೇಗವನ್ನು ಬದಲಿಸುವ ನೆರವಾಯಿತು. ವಿಂಡೀಸ್ ತಂಡ ಬೆಳಿಗ್ಗೆ ಮೊದಲ ಸೆಸನ್ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು.ಆದರೆ ನಾನು ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಅದು ಯಶಸ್ವಿಯಾಯಿತು" ಎಂದು ಅವರು ಹೇಳಿದ್ದಾರೆ.
ನಾನು ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೆ. ಗೇಬ್ರಿಯಲ್ ಮತ್ತು ರೋಚ್ರನ್ನು ಬಿಟ್ಟು ಉಳಿದ ಬೌಲರ್ಗಳ ವಿರುದ್ಧ ಆಡಲು ನಿರ್ಧರಿಸಿದ್ದೆ. ಏಕೆಂದರೆ ಅವರು ಬೆಳಿಗ್ಗೆ ಉತ್ತಮವಾಗಿ ಬೌಲಿಂಗ್ ಮಾಡಿದ್ದರು.
ತಾವೂ ಅಭ್ಯಾಸ ಮಾಡುವ ಸಂದರ್ಭದಲ್ಲಿ ನಾಟಿಂಗ್ಹ್ಯಾಮ್ಶೈರ್ ತಂಡದ ಮೆಂಟರ್ ಪೀಟರ್ ಮೋರಿಸ್ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರು ನನಗೆ 2005ರ ಆ್ಯಶಸ್ ಸರಣಿಯ ವೇಳೆ ಶೇನ್ ವಾರ್ನ್ ಅದ್ಭುತವಾಗಿ ಚೆಂಡನ್ನು ದಂಡಿಸುತ್ತಿದ್ದ ವಿಷಯವನ್ನು ಉದಾಹರಣೆಯಾಗಿ ನನಗೆ ತಿಳಿಸಿದ್ದರು. ನಾನು ಅದನ್ನು ಪ್ರಯೋಗಿಸಲು ಸರಿಯಾದ ಸಮಯ ಎಂದು ಭಾವಿಸಿದೆ ಎಂದು ಬ್ರಾಡ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡ 280 ಕ್ಕೆ 8 ವಿಕೆಟ್ ಕೇಳದುಕೊಂಡಿದ್ದಾಗ ಕ್ರೀಸ್ಗೆ ಆಗಮಿಸಿದ ಬ್ರಾಡ್ ವಿಂಡೀಸ್ ಬೌಲರ್ಗಳನ್ನು ಚೆಂಡಾಡಿದರು. ಅವರು ಕೇವಲ 45 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 62 ರನ್ ಚಚ್ಚಿದರು. ಅಲ್ಲದೆ ಇಂಗ್ಲೆಂಡ್ ಪರ ವೇಗವಾಗಿ ಅರ್ಧಶತಕ ಸಿಡಿಸಿದ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಇವರಿಗಿಂತ ಮೊದಲು ಇಯಾನ್ ಬೋಥಮ್ 28 ಹಾಗೂ 32 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಅಲೆನ್ ಲ್ಯಾಂಬ್, ಆ್ಯಂಡ್ರ್ಯೂ ಫ್ಲಿಂಟಾಫ್ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.ಇದೀಗ ಬ್ರಾಡ್ ಕೂಡ ಅವರ ಜೊತೆ 3ನೇ ಸ್ಥಾನ ಹಂಚಿಕೊಂಡರು.
ಬ್ರಾಡ್ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 369 ರನ್ಗಳಿಸಿತು. ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್ ತಂಡ 136 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.