ETV Bharat / sports

ಒಂದೇ ಪಂದ್ಯದಲ್ಲಿ ಸ್ಮಿತ್​ - ಸಾಮ್ಸನ್​ ಅದ್ಭುತ ಫೀಲ್ಡಿಂಗ್.. ಯಾವುದು ಬೆಸ್ಟ್​ ಅಂತಾ ನೀವೇ ನೋಡಿ.. - ಭಾರತಕ್ಕೆ ಸರಣಿ ಜಯ

ಈ ಹಿಂದೆ ಐಪಿಎಲ್​ನಲ್ಲಿ ಮತ್ತು ಇದೇ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲೂ ಇದೇ ರೀತಿಯ ಕ್ಷೇತ್ರರಕ್ಷಣೆ ಮಾಡಿ ಸಿಕ್ಸರ್​ ತಡೆಯುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು ಸಂಜು ಸಾಮ್ಸನ್‌..

ಭಾರತ ಆಸ್ಟ್ರೇಲಿಯಾ ಟಿ20
ಭಾರತ ಆಸ್ಟ್ರೇಲಿಯಾ ಟಿ20
author img

By

Published : Dec 8, 2020, 6:12 PM IST

ಸಿಡ್ನಿ : ಭಾರತ ತಂಡದ ಉದಯೋನ್ಮುಖ ಪ್ರತಿಭೆ ಸಂಜು ಸಾಮ್ಸನ್​ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

ಸಿಡ್ನಿಯಲ್ಲಿ ನಡೆಯುತ್ತಿರುವ ಕೊನೆಯ ಟಿ20 ಪಂದ್ಯದ ವೇಳೆ ಮ್ಯಾಕ್ಸ್​ವೆಲ್​ ಶಾರ್ದುಲ್ ಠಾಕೂರ್ ಎಸೆದ 13ನೇ ಓವರ್​ನ 2ನೇ ಎಸೆತದಲ್ಲಿ ದೊಡ್ಡ ಹೊಡೆತ ಪ್ರಯೋಗ ಮಾಡಿದರು. ಬೌಂಡರಿ ಲೈನ್​ನಲ್ಲಿದ್ದ ಸಂಜು ಸಾಮ್ಸನ್​ ಬೌಂಡರಿ ಗೆರೆ ದಾಟದಂತೆ ನೆಗೆದು ಚೆಂಡನ್ನು ಹಿಡಿದು ಮೈದಾನಕ್ಕೆ ಎಸೆದರು. ಈ ಮೂಲಕ 6 ರನ್​ಗಳ ಬದಲಿಗೆ 2 ರನ್​ ನೀಡಿ 4 ರನ್​ ಉಳಿಸಿದರು.

ಈ ಹಿಂದೆ ಐಪಿಎಲ್​ನಲ್ಲಿ ಮತ್ತು ಇದೇ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲೂ ಇದೇ ರೀತಿಯ ಕ್ಷೇತ್ರರಕ್ಷಣೆ ಮಾಡಿ ಸಿಕ್ಸರ್​ ತಡೆಯುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು.

ಕೊಹ್ಲಿ ಬಾರಿಸಿದ ಸಿಕ್ಸರ್​ ತಡೆದ ಸ್ಮಿತ್​ : ಮೊದಲ ಇನ್ನಿಂಗ್ಸ್​ನಲ್ಲಿ ಸಂಜು ಸಾಮ್ಸನ್​ ತಡೆದ ಮಾದರಿಯಲ್ಲೇ ಸ್ಟೀವ್​ ಸ್ಮಿತ್​ ಕೂಡ ಅದ್ಭುತ ಫೀಲ್ಡಿಂಗ್ ಮೂಲಕ ತಂಡಕ್ಕೆ ಅಮೂಲ್ಯವಾದ 4 ರನ್​​ ಉಳಿಸಿದ್ದರು.

12.4 ನೇ ಓವರ್​ನಲ್ಲಿ ಕೊಹ್ಲಿ ಸ್ಟ್ರೈಟ್​ ಗ್ರೌಂಡ್​ ಮೇಲೆ ಬಾರಿಸಿದ ಚೆಂಡನ್ನು ಬೌಂಡರಿ ಲೈನಲ್​ನಲ್ಲಿ ನಿಂತಿದ್ದ ಸ್ಮಿತ್ ನೆಗೆದು ಹಿಡಿದು ಮೈದಾನಕ್ಕೆ ಎಸೆದು ಬೌಂಡರಿ ಒಳಗೆ ಬಿದ್ದರು. ಮತ್ತೊಬ್ಬ ಫೀಲ್ಡರ್​ ಚೆಂಡನ್ನು ವಿಕೆಟ್​ ಕೀಪರ್‌ಗೆ ಎಸೆದು ತಂಡಕ್ಕೆ 4 ರನ್​ ಉಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.