ಗುವಾಹಟಿ: ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರು ಟಿ-20 ಪಂದ್ಯಗಳ ಮೊದಲ ಪಂದ್ಯವನ್ನಾಡಲು ಟೀಂ ಇಂಡಿಯಾ ಹಾಗೂ ಸಿಂಹಳೀಯರ ತಂಡ ಈಗಾಗಲೇ ಗುವಾಹಟಿಗೆ ಬಂದಿಳಿದಿದ್ದು, ಬರುವ ಭಾನುವಾರ(ಜ.5)ದಂದು ಮೊದಲ ಪಂದ್ಯ ನಡೆಯಲಿದೆ.
ಟೀಂ ಇಂಡಿಯಾ ಹಾಗೂ ಶ್ರೀಲಂಕಾ ತಂಡಕ್ಕೆ ಇದು ಹೊಸ ವರ್ಷದ ಮೊದಲ ಸರಣಿಯಾಗಿರುವ ಕಾರಣ ಉಭಯ ತಂಡಗಳು ಗೆಲುವ ತವಕದಲ್ಲಿವೆ. ಬರಾಸ್ಪರಾ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಸ್ಸೋಂನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುತ್ತಿರುವ ಕಾರಣ ಹೆಚ್ಚಿನ ಭದ್ರತೆಯನ್ನ ಉಭಯ ತಂಡಗಳಿಗೂ ನೀಡಲಾಗಿದೆ.
ಟೀಂ ಇಂಡಿಯಾ ಇಂತಿದೆ: ವಿರಾಟ್ ಕೊಹ್ಲಿ(ಕ್ಯಾಪ್ಟನ್), ಶಿಖರ್ ಧವನ್,ಕೆಎಲ್ ರಾಹುಲ್,ಶ್ರೇಯಸ್ ಅಯ್ಯರ್,ರಿಷಭ್ ಪಂತ್(ವಿಕೆಟ್ ಕೀಪರ್)ರವೀಂದ್ರ ಜಡೇಜಾ,ಶಿವಂ ದುಬೆ,ಯಜುವೇಂದ್ರ ಚಹಾಲ್,ಕುಲ್ದೀಪ್ ಯಾದವ್,ಜಸ್ಪ್ರೀತ್ ಬುಮ್ರಾ,ನವದೀಪ್ ಸೈನಿ,ಶಾರ್ದೂಲ್ ಠಾಕೂರ್,ಮನೀಷ್ ಪಾಂಡೆ,ವಾಷಿಂಗ್ಟನ್ ಸುಂದರ್,ಸಂಜು ಸ್ಯಾಮ್ಸನ್
ಶ್ರೀಲಂಕಾ ತಂಡ ಇಂತಿದೆ: ಲಸಿತ್ ಮಲಿಂಗಾ(ನಾಯಕ), ದನುಷ್ಕ ಗುಣತಿಲಕ್, ಪರ್ನಾಡೋ, ಏಂಜೆಲೊ ಮ್ಯಾಥ್ಯೂಸ್, ಶನಕ್, ಕುಶಾಲ್ ಪರೆರಾ, ಡಿಕ್ವೇಲ್, ಧನಂಜಯ ಡಿ ಸಿಲ್ವಾ,ಇಸೂರ್ ಉದನ್, ರಾಜಪಕ್ಷೆ, ಓ ಫರ್ನಾಡೋ, ಹಸರಂಗ್, ಲಾಹೀರು ಕುಮಾರ್, ಕುಶಾಲ್ ಮೆಂಡಿಸ್,ಲಕ್ಷನ್ ಸಂದಕನ್ ಹಾಗೂ ಕುಶೂನ್ ರಂಜಿತ್