ETV Bharat / sports

ಈ ರೀತಿ ಸುಲಭದ ರನ್​ಔಟ್​ ಮಿಸ್​ ಮಾಡಿರೋದನ್ನು ನೀವು ನೋಡಿರೋಕೆ ಸಾಧ್ಯವೇ ಇಲ್ಲ!... ವಿಡಿಯೋ

author img

By

Published : Oct 31, 2019, 10:15 AM IST

ಶ್ರೀಲಂಕಾದ ಲಕ್ಷನ್ ಸಂದಕನ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ತುಂಬಾ ಸುಲಭವಾಗಿ ರನ್​ ಮಾಡುವ ಅವಕಾಶವನ್ನು ಅವಸರದ ನಿರ್ಧಾರದಿಂದ ಮಿಸ್​ ಮಾಡಿಕೊಂಡಿದ್ದಾರೆ.

Sri Lankan spinner

ಬ್ರಿಸ್ಬೇನ್​: ಶ್ರೀಲಂಕಾದ ಲಕ್ಷನ್ ಸಂದಕನ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ತುಂಬಾ ಸುಲಭವಾಗಿ ರನ್​ ಮಾಡುವ ಅವಕಾಶವನ್ನು ಅವಸರದ ನಿರ್ಧಾರದಿಂದ ಮಿಸ್​ ಮಾಡಿಕೊಂಡು ಟ್ರೋಲ್​ಗೆ ತುತ್ತಾಗಿದ್ದಾರೆ.

ಬ್ರಿಸ್ಬೇನ್​ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಪಂದ್ಯದ ವೇಳೆ ಡೇವಿಡ್​ ವಾರ್ನರ್​ ಹೊಡೆದ ಚೆಂಡು ಸೀದ ನಾನ್​ಸ್ಟ್ರೈಕರ್​ ಸ್ಟಂಪ್​ಗೆ ಬಡಿದಿದೆ. ಇದೇ ವೇಳೆ, ನಾನ್​ಸ್ಟ್ರೈಕರ್​ನಲ್ಲಿದ್ದ ಸ್ಟಿವ್​ ಸ್ಮಿತ್​ ರನ್​ಗಾಗಿ ಕ್ರೀಸ್​ಬಿಟ್ಟು ಅರ್ಧ ಬಂದಿದ್ದರು. ಈ ವೇಳೆ, ಕೈಗೆ ಚೆಂಡು​ ಸಿಕ್ಕಿದ ಕೂಡಲೆ ಸಂದಕನ್​ ವಿಕೆಟ್​ ಕಿತ್ತಿದ್ದಾರೆ. ಆದರೆ ಅಂಪೈರ್​ ರನ್​ಔಟ್​ ಮಾನ್ಯ ಮಾಡಿಲ್ಲ.

Sandakan had a golden opportunity to run out Smith! #AUSvSL pic.twitter.com/E7AsOwEjSJ

— cricket.com.au (@cricketcomau) October 30, 2019 ">

ಹೌದು, ಒಂದು ಬಾರಿ ಬೇಲ್ಸ್​ ಬಿದ್ದರೆ ನಂತರ ಔಟ್​ ಮಾಡಬೇಕೆಂದರೆ ಚೆಂಡು​ ತಾಗಿದಂತೆ ಸ್ಟಂಪ್​ ಕೀಳಬೇಕು. ಆದರೆ ಸಂದಕನ್​ ಒಂದು ಕೈಯಲ್ಲಿ ಚೆಂಡು​ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಸ್ಟಂಪ್​ ಕಿತ್ತಿದ್ದಾರೆ. ಆದರೆ ಸ್ಟಂಪ್​ಗೆ ಚೆಂಡನ್ನು ತಾಗಿಸುವುದನ್ನು ಮರೆತಿದ್ದಾರೆ. ಈ ಎಡವಟ್ಟಿನಿಂದ ರನ್​ಔಟ್ ಮಾಡುವ ಸುಲಭ ಅವಕಾಶವನ್ನು ಕೈಯ್ಯಾರೆ ಕಳೆದುಕೊಂಡರು.​

ಈ ಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ತಂಡ ಇನ್ನು ಒಂದು ಪಂದ್ಯವಿರುವಂತೆಯೇ ಸರಣಿ ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ನಿಷೇಧದ ನಂತರ ಮೊದಲ ಟಿ-20 ಸರಣಿಯಾಡುತ್ತಿರುವ ವಾರ್ನರ್-ಸ್ಮಿತ್ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದ್ದರು.

ಬ್ರಿಸ್ಬೇನ್​: ಶ್ರೀಲಂಕಾದ ಲಕ್ಷನ್ ಸಂದಕನ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ತುಂಬಾ ಸುಲಭವಾಗಿ ರನ್​ ಮಾಡುವ ಅವಕಾಶವನ್ನು ಅವಸರದ ನಿರ್ಧಾರದಿಂದ ಮಿಸ್​ ಮಾಡಿಕೊಂಡು ಟ್ರೋಲ್​ಗೆ ತುತ್ತಾಗಿದ್ದಾರೆ.

ಬ್ರಿಸ್ಬೇನ್​ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಪಂದ್ಯದ ವೇಳೆ ಡೇವಿಡ್​ ವಾರ್ನರ್​ ಹೊಡೆದ ಚೆಂಡು ಸೀದ ನಾನ್​ಸ್ಟ್ರೈಕರ್​ ಸ್ಟಂಪ್​ಗೆ ಬಡಿದಿದೆ. ಇದೇ ವೇಳೆ, ನಾನ್​ಸ್ಟ್ರೈಕರ್​ನಲ್ಲಿದ್ದ ಸ್ಟಿವ್​ ಸ್ಮಿತ್​ ರನ್​ಗಾಗಿ ಕ್ರೀಸ್​ಬಿಟ್ಟು ಅರ್ಧ ಬಂದಿದ್ದರು. ಈ ವೇಳೆ, ಕೈಗೆ ಚೆಂಡು​ ಸಿಕ್ಕಿದ ಕೂಡಲೆ ಸಂದಕನ್​ ವಿಕೆಟ್​ ಕಿತ್ತಿದ್ದಾರೆ. ಆದರೆ ಅಂಪೈರ್​ ರನ್​ಔಟ್​ ಮಾನ್ಯ ಮಾಡಿಲ್ಲ.

ಹೌದು, ಒಂದು ಬಾರಿ ಬೇಲ್ಸ್​ ಬಿದ್ದರೆ ನಂತರ ಔಟ್​ ಮಾಡಬೇಕೆಂದರೆ ಚೆಂಡು​ ತಾಗಿದಂತೆ ಸ್ಟಂಪ್​ ಕೀಳಬೇಕು. ಆದರೆ ಸಂದಕನ್​ ಒಂದು ಕೈಯಲ್ಲಿ ಚೆಂಡು​ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಸ್ಟಂಪ್​ ಕಿತ್ತಿದ್ದಾರೆ. ಆದರೆ ಸ್ಟಂಪ್​ಗೆ ಚೆಂಡನ್ನು ತಾಗಿಸುವುದನ್ನು ಮರೆತಿದ್ದಾರೆ. ಈ ಎಡವಟ್ಟಿನಿಂದ ರನ್​ಔಟ್ ಮಾಡುವ ಸುಲಭ ಅವಕಾಶವನ್ನು ಕೈಯ್ಯಾರೆ ಕಳೆದುಕೊಂಡರು.​

ಈ ಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ತಂಡ ಇನ್ನು ಒಂದು ಪಂದ್ಯವಿರುವಂತೆಯೇ ಸರಣಿ ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ನಿಷೇಧದ ನಂತರ ಮೊದಲ ಟಿ-20 ಸರಣಿಯಾಡುತ್ತಿರುವ ವಾರ್ನರ್-ಸ್ಮಿತ್ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.