ಕೊಲಂಬೊ: ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಮಾಡಿದ್ದ ಶ್ರೀಲಂಕಾ ಕ್ರಿಕೆಟರ್ ಶೆಹಾನ್ ಮಧುಶಂಕಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಮಧುಶಂಕಾ ಅವರನ್ನು 2 ವಾರಗಳ ಕಾಲ ಬಂಧನದಲ್ಲಿಡುವಂತೆ ಮ್ಯಾಜಿಸ್ಟ್ರೇಟ್ ಸೂಚಿಸಿದ್ದಾರೆ.
ಮಧುಶಂಕಾ ಅವರನ್ನು ಪನ್ನಾಲಾ ನಗರದಲ್ಲಿ ಬಂಧಿಸಿದಾಗ ಅವರ ಬಳಿ ಎರಡು ಗ್ರಾಮ್ಗಿಂತಲೂ ಹೆಚ್ಚು ಹೆರಾಯಿನ್ ಪತ್ತೆಯಾಗಿದೆ. ಲಾಕ್ಡೌನ್ ನಡುವೆಯೂ ವ್ಯಕ್ತಿಯೊಬ್ಬರ ಜೊತೆ ತೆರಳುತ್ತಿದ್ದಾಗ ತಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧು ಶಂಕಾ ಬಾಂಗ್ಲಾದೇಶದ ವಿರುದ್ಧ 2018ರಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು.
ಶ್ರೀಲಂಕಾ ಮಂಗಳವಾರದಿಂದ ಕರ್ಫ್ಯೂ ಸಡಿಲಿಕೆ ಮಾಡಿತ್ತು. ಆದರೂ ನಿಯಮಗಳನ್ನು ಬ್ರೇಕ್ ಮಾಡಿದ ಸುಮಾರು 65,000 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.