ಗಾಲೆ: ಜೋ ರೂಟ್ ಅಬ್ಬರ ದ್ವಿಶತಕ ಹಾಗೂ ಆಂಗ್ಲ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿರುವ ಅತಿಥೇಯ ಶ್ರೀಲಂಕಾ ತಂಡ ತವರಿನಲ್ಲೇ ಇನ್ನಿಂಗ್ಸ್ ಸೋಲಿನ ಭೀತಿ ಶುರುವಾಗಿದೆ.
ಮೊದಲ ಇನ್ನಿಂಗ್ಸ್ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ ಶ್ರೀಲಂಕಾ ಕೇವಲ 135 ರನ್ಗಳಿಗೆ ಸರ್ವಫತನ ಕಂಡಿದೆ. ಇದಕ್ಕುತ್ತುರವಾಗಿ ಪ್ರವಾಸಿ ಇಂಗ್ಲೆಂಡ್ ತಂಡ 421 ರನ್ಗಳ ಬೃಹತ್ ಮೊತ್ತ ದಾಖಲಿಸಿ ಬರೋಬ್ಬರಿ 286 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ನಾಯಕ ಜೋ ರೂಟ್ ಶ್ರೀಲಂಕಾ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿ 321 ಎಸೆತಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 228 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ರೂಟ್ಗೆ ಇದು ನಾಯಕನಾಗಿ ಇಂಗ್ಲೆಂಡ್ ಪರ 2ನೇ ಹಾಗೂ ಒಟ್ಟಾರೆ 4ನೇ ದ್ವಿಶತಕವಾಗಿದೆ.
286 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ 2 ವಿಕೆಟ್ ಕಳೆದುಕೊಂಡು 156 ರನ್ಗಳಿಸಿದೆ. ಕುಸಾಲ್ ಪೆರೆರಾ 62 ರನ್ ಹಾಗೂ ಕುಸಾಲ್ ಮೆಂಡಿಸ್ 15 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಲಹಿರು ತಿರುಮನ್ನೆ 76 ರನ್ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಇನ್ನಿಂಗ್ಸ್ ಸೋಲು ತಪ್ಪಿಸಲು ಹೋರಾಡುತ್ತಿದ್ದಾರೆ. ಶ್ರೀಲಂಕಾ ಇನ್ನು 130 ರನ್ಗಳ ಹಿನ್ನಡೆಯಲ್ಲಿದೆ. ಕೈಯಲ್ಲಿ ಇನ್ನು 8 ವಿಕೆಟ್ಗಳಿದ್ದು, ಇಂಗ್ಲೆಂಡ್ ಪೈಪೋಟಿಯುತ ಟಾರ್ಗೆಟ್ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.
- ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ ಮೊದಲ ಇನ್ನಿಂಗ್ಸ್ 135: ಚಂಡಿಮಾಲ್ 28, ಡಾಮ್ ಬೆಸ್ 30ಕ್ಕೆ5,ಬ್ರಾಡ್ 20ಕ್ಕೆ 3.
- ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 421 ರನ್: ಜೋ ರೂಟ್ 228, ಡೇನಿಯಲ್ ಲಾರೆನ್ಸ್ 73, ದಿಲ್ರುವಾನ್ ಪೆರೆರಾ 109ಕ್ಕೆ4, ಎಂಬುಲ್ಡೆನಿಯಾ 176ಕ್ಕೆ 3
- ಶ್ರೀಲಂಕಾ 2ನೇ ಇನ್ನಿಂಗ್ಸ್ 156ಕ್ಕೆ2: ಕುಸಾಲ್ ಪೆರೆರಾ 62, ತಿರುಮನ್ನೆ ಅಜೇಯ 76, ಸ್ಯಾಮ್ ಕರ್ರನ್ 25ಕ್ಕೆ1
ಇದನ್ನು ಓದಿ: ವಾಷಿಂಗ್ಟನ್ ಶಿಸ್ತುಬದ್ದ ಬೌಲರ್, ಅಶ್ವಿನ್ ಸ್ಥಾನಕ್ಕೆ ಸರಿಯಾದ ಆಯ್ಕೆ: ಆಸೀಸ್ ಕೋಚ್ ಬಣ್ಣನೆ