ಕೊಲೊಂಬೋ(ಶ್ರೀಲಂಕಾ): ಬಾಲಿವುಡ್ನ ಹೆಸರಾಂತ ನಟ ರಿಷಿ ಕಪೂರ್ ಲುಕೇಮಿಯಾ ಎಂಬ ಮಾರಕ ಕಾಯಿಲೆಯಿಂದ ಗುರುವಾರ ನಿಧನರಾಗಿದ್ದು, ಇಡೀ ದೇಶದ ಜನತೆ ಕಂಬನಿ ಮಿಡಿಯುತ್ತಿದೆ.
ಈಗಾಗಲೆ ಭಾರತ ತಂಡದ ಕ್ರಿಕೆಟಿಗರು, ಬಾಲಿವುಡ್ ನಟರು ಹಲವಾರು ರಾಜಕಾರಣಿಗಳು ಬಾಲಿವುಡ್ ಲೆಜೆಂಡ್ ಸಾವಿಗೆ ಸಂತಾಪ ಸೂಚಿಸಿದ್ದರು. ಇದಕ್ಕೆ ಶ್ರೀಲಂಕಾ ಕ್ರಿಕೆಟಿಗ ಕೂಡ ಸೇರಿಕೊಂಡಿದ್ದಾರೆ.
-
I used to love his movies during my childhood . One of them is ‘ Deewana’
— Thisara perera (@PereraThisara) April 30, 2020 " class="align-text-top noRightClick twitterSection" data="
RIP #MrRishikapoor pic.twitter.com/swaoF2NEo4
">I used to love his movies during my childhood . One of them is ‘ Deewana’
— Thisara perera (@PereraThisara) April 30, 2020
RIP #MrRishikapoor pic.twitter.com/swaoF2NEo4I used to love his movies during my childhood . One of them is ‘ Deewana’
— Thisara perera (@PereraThisara) April 30, 2020
RIP #MrRishikapoor pic.twitter.com/swaoF2NEo4
ಲಂಕಾ ತಂಡದ ಸ್ಫೋಟಕ ಬ್ಯಾಟ್ಸ್ಮನ್, ಆಲ್ರೌಂಡರ್ ತಿಸರಾ ಪೆರೆರಾ ರಿಷಿ ಕಪೂರ್ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.‘ ನಾನು ಬಾಲ್ಯದಲ್ಲಿಇವರ ಚಿತ್ರಗಳನ್ನ ನೋಡಲು ಇಷ್ಟಪಡುತ್ತಿದ್ದೆ. ಅವುಗಳಲ್ಲಿ ದೀವಾನ ಕೂಡ ಒಂದು’ ಎಂದು ಬರೆದುಕೊಂಡು ರಿಷಿ ಕಪೂರ್ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
1952ರ ಸೆಪ್ಟೆಂಬರ್ 4ರಂದು ಮುಂಬೈನಲ್ಲಿ ಜನಿಸಿದ ಕಪೂರ್ , 1970 ರಲ್ಲಿ 'ಮೇರಾ ನಾಮ್ ಜೋಕರ್' ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಪಡೆದುಕೊಂಡಿದ್ದರು. ರಿಷಿ ಕಪೂರ್ 1973ರಲ್ಲಿ ತಯಾರಾದ ಪ್ರಸಿದ್ಧ ಸಿನಿಮಾ 'ಬಾಬಿ' ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡಿದ್ದರು. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.