ETV Bharat / sports

ಡಬಲ್ ದಮಾಕ: ಕ್ವಾಲಿಫೈಯರ್​ ಜೊತೆಗೆ ತಂದೆಯಾದ ಖುಷಿಯಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ನಟರಾಜನ್​

author img

By

Published : Nov 7, 2020, 6:32 PM IST

ತಮಿಳುನಾಡಿನ ಪ್ರಥಮ ದರ್ಜೆ ಕ್ರಿಕೆಟಿಗನಾಗಿರುವ ನಟರಾಜನ್​ ಶುಕ್ರವಾರ ನಡೆದ ಪಂದ್ಯದಲ್ಲಿ ಮಿಸ್ಟರ್​ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್​ ಅವರನ್ನೇ ಬೌಲ್ಡ್​ ಮಾಡುವ ಮೂಲಕ ಬೆರಗು ಮೂಡಿಸಿದ್ದರು. ಟೂರ್ನಿಯಲ್ಲಿ 15 ಪಂದ್ಯಗಳಿಂದ 16 ವಿಕೆಟ್​ ಪಡೆದಿದ್ದಾರೆ.

ಟಿ ನಟರಾಜನ್
ಟಿ ನಟರಾಜನ್

ಅಬುಧಾಬಿ: 13ನೇ ಆವೃತ್ತಿಯಲ್ಲಿ ಕರಾರುವಾಕ್ ಯಾರ್ಕರ್​ಗಳಿಗೆ ಪ್ರಸಿದ್ಧರಾಗಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಟಿ ನಟರಾಜನ್​ ತಂದೆಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಶನಿವಾರ ಅವರ ಪತ್ನಿ ಪವಿತ್ರ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.

ಆರ್​ಸಿಬಿ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ನಾಯಕ ಡೇವಿಡ್​ ವಾರ್ನರ್​ ನಟರಾಜನ್​ ಪತ್ನಿ ಪವಿತ್ರ ಇಂದು ಮಗುವಿಗೆ ಜನ್ಮ ನೀಡಿದ್ದಾರೆ. ಈ ಗೆಲುವನ್ನು ಆ ಮಗುವಿಗೆ ಅರ್ಪಿಸುವುದಾಗಿ ತಿಳಿಸಿದ್ದರು. ಈ ವಿಚಾರವನ್ನು ಸನ್​ರೈಸರ್ಸ್​ ಹೈದರಾಬಾದ್​ ತನ್ನ ಟ್ವಿಟರ್​ ಖಾತೆಯಲ್ಲೂ ಶೇರ್ ಮಾಡಿದೆ. ಆದರೆ ಮಗುವ ಗಂಡು ಆಥವಾ ಹೆಣ್ಣು ಎಂಬುದು ತಿಳಿದುಬಂದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.