ETV Bharat / sports

ಧೋನಿ ನಿಮ್ಮ​ ಕೆರಿಯರ್​ ಅಂತ್ಯಗೊಳಿಸಲಿದ್ದಾರೆ: ಇಂಗ್ಲೆಂಡ್​ ಆಲ್​ರೌಂಡರ್​ಗೆ ಶ್ರೀಶಾಂತ್​ ತಿರುಗೇಟು

author img

By

Published : Jun 9, 2020, 8:44 AM IST

2019 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ 31 ರನ್​ಗಳ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ಕುರಿತು ಟೀಕಿಸಿ ತಮ್ಮ ಆನ್​ ಫೈಯರ್​ ಬುಕ್​ನಲ್ಲಿ ಟೀಕಿಸಿದ್ದರು.

S Sreesanth slams Ben Stokes
ಸ್ಟೋಕ್ಸ್​ ಶ್ರೀಶಾಂತ್​ ತಿರುಗೇಟು

ನವದೆಹಲಿ: ಭಾರತ ಕಂಡ ಶ್ರೇಷ್ಠ ನಾಯಕ ಎಂಎಸ್​ ಧೋನಿ ವಿಶ್ವಕಪ್​ನಲ್ಲಿ ನಡೆಸಿದ ಬ್ಯಾಟಿಂಗ್​ ಪ್ರದರ್ಶನದ ಬಗ್ಗೆ ಟೀಕಿಸಿದ್ದ ಇಂಗ್ಕೆಂಡ್​ ಆಲ್​ರೌಂಡರ್​ ಬೆನ್​ಸ್ಟೋಕ್ಸ್​ ವಿರುದ್ಧ ಭಾರತದ ವೇಗಿ ಎಸ್​ ಶ್ರೀಶಾಂತ್​ ಕಿಡಿಕಾರಿದ್ದು, ಭಾರತ ತಂಡದ ಮಾಜಿ ನಾಯಕ ಸ್ಟೋಕ್ಸ್​ ವೃತ್ತಿ ಜೀವನವನ್ನು ಅಂತ್ಯಗೊಳಿಸಲಿದ್ದಾರೆ ಎಂದಿದ್ದಾರೆ.

2019 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ 31 ರನ್​ಗಳ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ಕುರಿತು ಟೀಕಿಸಿ ತಮ್ಮ ಆನ್​ ಫೈಯರ್​ ಬುಕ್​ನಲ್ಲಿ ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀಶಾಂತ್​, 'ಬೆನ್​ ಸ್ಟೋಕ್ಸ್​ , ನೀವು ಧೋನಿ ವಿರುದ್ಧ ಭವಿಷ್ಯದಲ್ಲಿ ಆಡಬಾರದು ಎಂದು ದೇವರಲ್ಲಿ ಬೇಡಿಕೊಳ್ಳಿ, ಅವರು ಯಾವುದನ್ನು ಮರೆಯುವುದಿಲ್ಲ' ಎಂದು ಇನ್​​ಸ್ಟಾಗ್ರಾಂ ಲೈವ್​ನಲ್ಲಿ ಹೇಳಿಕೊಂಡಿದ್ದಾರೆ.

ಎಂಎಸ್​ ಧೋನಿ ಕ್ರೀಸ್​ಗೆ ಬಂದಾಗ ಭಾರತ ತಂಡಕ್ಕೆ 11 ಓವರ್​ಗಳಲ್ಲಿ 112 ರನ್​ಗಳಿಸುವ ಅಗತ್ಯವಿತ್ತು. ಧೋನಿ ಸಿಕ್ಸರ್​ ಬಾರಿಸಿ ಮ್ಯಾಚ್​ ಮುಗಿಸುವ ಆಲೋಚನೆ ಮಾಡದೇ ಕೇವಲ ಒಂದು ರನ್​ ತೆಗೆಯುವುದರಲ್ಲಿ ತೊಡಗಿಸಿಕೊಂಡಿದ್ದರು. ಆ ಪಂದ್ಯದಲ್ಲಿ ಭಾರತ ಇನ್ನು ಒಂದು ಡಜನ್​ ಎಸೆತಗಳು ಬಾಕಿ ಉಳಿದಿರುವಂತೆ ಗೆಲುವು ಸಾಧಿಸಬಹುದಿತ್ತು. ಆದರೆ ಧೋನಿ - ಜಾಧವ್​ ಪಂದ್ಯವನ್ನು ಗೆಲ್ಲಿಸಲು ಪ್ರಯತ್ನ ಮಾಡಲೇ ಇಲ್ಲ ಎಂದು ಸ್ಟೋಕ್ಸ್​ ತಮ್ಮ ಪುಸ್ತಕದಲ್ಲಿ ಧೋನಿ ಅವರನ್ನ ಟೀಕಿಸಿದ್ದಾರೆ.

S Sreesanth slams Ben Stokes
ಎಂಎಸ್​ ಧೋನಿ

"ಸ್ಟೋಕ್ಸ್​ ಮುಂದೆ ಧೋನಿಯನ್ನು ಎದುರಿಸುವ ಎಲ್ಲ ಕ್ಷಣದಲ್ಲೂ ನಾನು ಅವರಿಗೆ ಶುಭ ಹಾರೈಸುತ್ತೇನೆ. ಅದು ಐಪಿಎಲ್‌ ಆಗಿರಲಿ ಅಥವಾ ಭಾರತ- ಇಂಗ್ಲೆಂಡ್‌ ವಿರುದ್ಧ ಪಂದ್ಯವಾಗಿರಲಿ. ನೀವು ಲಕ್ಷಾಂತರ ರೂಪಾಯಿ ಗಳಿಸುತ್ತಿರಬಹುದು, ಆದರೆ, ಧೋನಿ ನಿಮ್ಮ ಭವಿಷ್ಯವನ್ನು ಅಂತ್ಯಗೊಳಿಸುತ್ತಾರೆ. ಧೋನಿ ಚೆಂಡನ್ನು ಎಲ್ಲೆಡೆ ಬಾರಿಸುತ್ತಾರೆ, ಬೆನ್​ಸ್ಟೋಕ್ಸ್​ ಅವರನ್ನು ಎಂದಿಗೂ ಔಟ್​ ಮಾಡಲಾರರು. ಅವರು ಬಾಯಿ ತೆರೆಯುವ ಮೊದಲು ಹಲ್ಮೆಟ್​ ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು " ಎಂದು ಶ್ರೀಶಾಂತ್ ಹೇಳಿದ್ದಾರೆ.

ಇನ್ನು ವೆಸ್ಟ್​ ಇಂಡೀಸ್​ ಮಾಜಿ ವೇಗಿ ಮೈಕಲ್​ ಹೋಲ್ಡಿಂಗ್​ ಕೂಡ ಧೋನಿ ಪರ ಬ್ಯಾಟಿಂಗ್​ ಮಾಡಿದ್ದಾರೆ. ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ಇಂಗ್ಲೆಂಡ್​ ವಿರುದ್ಧ ಪಂದ್ಯವನ್ನು ಗೆಲ್ಲಬೇಕಾಗಿದೆ ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ.

"ಜನರು ಈ ದಿನಗಳಲ್ಲಿ ಪುಸ್ತಕದಲ್ಲಿ ಏನು ಬೇಕಾದರೂ ಬರೆದುಕೊಳ್ಳುತ್ತಾರೆ. ಏಕೆಂದರೆ ಜನರು ತಮ್ಮ ಅಭಿಪ್ರಾಯಗಳೊಂದಿಗೆ ಹೆಚ್ಚು ಮುಕ್ತರಾಗಿರುತ್ತಾರೆ. ಹಾಗೂ ಅವರು ಪುಸ್ತಕ ಬರೆಯುವಾಗ ಕೆಲವೊಂದು ಹೆಡ್​ಲೈನ್​ ಬೇಕಿರುತ್ತದೆ" ಎಂದು ಹೋಲ್ಡಿಂಗ್​ ಸ್ಟೋಕ್ಸ್​ಗೆ ತಿರುಗೇಟು ನೀಡಿದ್ದಾರೆ.

"ಆ ಪಂದ್ಯ ಭಾರತಕ್ಕೆ ಗೆಲ್ಲುವಂತದ್ದಾಗಿರಲಿಲ್ಲ. ಆದರೆ, ಆ ಪಂದ್ಯವನ್ನು ಬೇಕೆಂದೆ ಸೋಲನುಭವಿಸಲಾಯಿತು ಎಂದು ಯಾರಾದರೂ ಹೇಳುತ್ತಾರೆ ಎಂದು ನಾನು ಆಲೋಚಿಸಿಲ್ಲ. ನಾನು ಪಂದ್ಯವನ್ನು ನೋಡಿದ್ದೇನೆ ಭಾರತ ತಂಡ ಶೇ 100ರಷ್ಟು ಪ್ರಯತ್ನ ಮಾಡಲಿಲ್ಲ. ಆದರೆ ಧೋನಿ ಮುಖಭಾವ ಪಂದ್ಯವನ್ನು ಗೆಲ್ಲಬೇಕೆಂದಿತ್ತು ಎಂಬುವುದನ್ನು ನಾನು ಗಮನಿಸಿದ್ದೇನೆ. ಆದರೆ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸದಿರುವುದು ತಂಡದ ನಿರ್ಧಾರ ಎನ್ನುವುದನ್ನು ನಾನು ನಂಬುವುದಿಲ್ಲ" ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.