ETV Bharat / sports

ಐಪಿಎಲ್​ನಲ್ಲಿ ಶ್ರೀಶಾಂತ್ ಹೆಸರು ನೋಂದಣಿ: ಘೋಷಣೆ ಮಾಡಿದ ಮೂಲ ಬೆಲೆ ಎಷ್ಟು ಗೊತ್ತಾ!? - ಇಂಡಿಯನ್​ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ

ಇಂಡಿಯನ್​ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ವೇಗದ ಬೌಲರ್​ ಶ್ರೀಶಾಂತ್​ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

Sreesanth
Sreesanth
author img

By

Published : Feb 5, 2021, 9:37 PM IST

Updated : Feb 5, 2021, 10:34 PM IST

ನವದೆಹಲಿ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಹರಾಜು ಪ್ರಕ್ರಿಯೆ ಫೆ. 18ರಂದು ನಡೆಯಲಿದ್ದು, ಅದಕ್ಕಾಗಿ 1097 ಪ್ಲೇಯರ್ಸ್​ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಶ್ರೀಶಾಂತ್​​ ಕೂಡ ತಮ್ಮ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ.

ಐಪಿಎಲ್​ ಆಟಗಾರರ ನೋಂದಣಿ ಕಾರ್ಯ ಇಂದು ಮುಕ್ತಾಯಗೊಂಡಿದ್ದು, ಇದರಲ್ಲಿ 863 ಅನ್​ಕ್ಯಾಪ್ಡ್​ ಪ್ಲೇಯರ್ಸ್​​ ಇದರಲ್ಲಿ 743ಭಾರತೀಯ ಪ್ಲೇಯರ್ಸ್​​ ಇದ್ದಾರೆ. ಪ್ರಮುಖವಾಗಿ ಟೂರ್ನಿಯಿಂದ ಆಸ್ಟ್ರೇಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​ ಹಾಗೂ ಇಂಗ್ಲೆಂಡ್​ನ ಜೋ ರೂಟ್​ ಹೊರಗುಳಿಯಲಿದ್ದಾರೆ. ವಿಶೇಷವೆಂದರೆ ಭಾರತದ ಎಸ್.ಶ್ರೀಶಾಂತ್ ಹಾಗೂ ಬಾಂಗ್ಲಾ ಕ್ರಿಕೆಟಿಗ ಶಕೀಬ್​ ಅಲ್​ ಹಸನ್ ಹರಾಜಿನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಓದಿ: ಐಪಿಎಲ್​ ಹರಾಜಿನಲ್ಲಿ 1097 ಪ್ಲೇಯರ್ಸ್​​: ಬಿಡ್ಡಿಂಗ್​​ನಲ್ಲಿ 743 ಭಾರತೀಯ ಆಟಗಾರರು!

ಪಟ್ಟಿಯಲ್ಲಿ 207 ಅಂತಾರಾಷ್ಟ್ರೀಯ ಪ್ಲೇಯರ್ಸ್ ಹಾಗೂ 863 ಅನ್​ಕ್ಯಾಪ್ಡ್​ ಪ್ಲೇಯರ್ಸ್, 27 ಅಸೋಸಿಯೇಷನ್​ ಮಟ್ಟದಲ್ಲಿ ಆಡಿರುವ ಪ್ಲೇಯರ್ಸ್​ ಇದ್ದಾರೆ. 11 ಆಟಗಾರರ ಮೌಲ್ಯ 2 ಕೋಟಿ ರೂ.ಗಿಂತಲೂ ಅತ್ಯಧಿಕವಾಗಿದ್ದು, ಅದರಲ್ಲಿ ಶಕೀಬ್​ ಕೂಡ ಒಬ್ಬರಾಗಿದ್ದಾರೆ. ಇನ್ನು ಶ್ರೀಶಾಂತ್​ ತಮ್ಮ ಮೂಲ ಬೆಲೆ 75 ಲಕ್ಷ ರೂ. ಎಂದು ನಿಗದಿಪಡಿಸಿಕೊಂಡಿದ್ದಾರೆ. ಉಳಿದಂತೆ ಕೇದಾರ್ ಜಾಧವ್, ಹರ್ಭಜನ್​ ಸಿಂಗ್​, ಗ್ಲೆನ್​ ಮ್ಯಾಕ್ಸ್​ವೆಲ್​, ಸ್ಮಿತ್​, ಮೊಯಿನ್​ ಅಲಿ, ಜೇಸನ್ ರಾಯ್​, ಪ್ಲಂಕೆಟ್​, ಬಿಲ್ಲಿಂಗ್ಸ್ ಕೂಡ ಇದ್ದಾರೆ. ಹನುಮ ವಿಹಾರಿ, ಉಮೇಶ್ ಯಾದವ್, ಆರನ್​ ಫಿಂಚ್​ ತಮ್ಮ ಮೂಲ ಬೆಲೆ 1 ಕೋಟಿ ಎಂದು ಘೋಷಣೆ ಮಾಡಿದ್ದಾರೆ.

Last Updated : Feb 5, 2021, 10:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.