ನವದೆಹಲಿ: ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ 7 ವರ್ಷ ನಿಷೇಧಕ್ಕೊಳಗಾಗಿದ್ದ ಭಾರತ ತಂಡದ ವೇಗಿ ಶ್ರಿಶಾಂತ್ ತಮ್ಮ ನೆಚ್ಚಿನ ಏಕದಿನ ತಂಡವನ್ನು ಪ್ರಕಟಿಸಿದ್ದು, ಮಾಜಿ ನಾಯಕ ಸೌರವ್ ಗಂಗೂಲಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.
ಭಾರತ ಎರಡು ಬಾರಿ ವಿಶ್ವಕಪ್ ಗೆದ್ದ ತಂಡದಲ್ಲಿ ಅವಕಾಶ ಸಿನಿಮಾ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಅವರ ನಿಷೇಧದ ಅವಧಿ ಕೊನೆಗೊಳ್ಳಲಿದೆ. ಕೊರೊನಾ ಅವಧಿಯಲ್ಲಿ ಮನೆಯಲ್ಲೆ ಕಾಲ ಕಳೆಯುತ್ತಿರುವ ಶ್ರೀಶಾಂತ್ ತಮ್ಮ ನೆಚ್ಚಿನ ಏಕದಿನ ತಂಡವನ್ನು ಪ್ರಕಟಿಸಿದ್ದು, ಆ ತಂಡಕ್ಕೆ ಸೌರವ್ ಗಂಗೂಲಿಯನ್ನು ನಾಯಕನನ್ನನಾಗಿ ನೇಮಿಸಿದ್ದಾರೆ.
12 ಆಟಗಾರರ ತಂಡವನ್ನು ಪ್ರಕಟಿಸಿರುವ ಶ್ರೀಶಾಂತ್, ಭಾರತದ 5, ದಕ್ಷಿಣ ಆಫ್ರಿಕಾದ ಮೂವರು, ಆಸ್ಟ್ರೇಲಿಯಾದ ಇಬ್ಬರು, ವಿಂಡೀಸ್ನ ಒಬ್ಬ ಆಟಗಾರನನ್ನು ಆಯ್ಕೆ ಮಾಡಿದ್ದಾರೆ. ವಿಕೆಟ್ ಕೀಪರ್ ಆಗಿ ಧೋನಿಯನ್ನು ಆಯ್ಕೆ ಮಾಡಿರುವ ಶ್ರೀಶಾಂತ್ ತಮ್ಮನ್ನೇ 12ನೇ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.
ಶ್ರೀಶಾಂತ್ ನೆಚ್ಚಿನ ಏಕದಿನ ತಂಡ: ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ(ನಾಯಕ), ಬ್ರಿಯಾನ್ ಲಾರಾ, ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಯುವರಾಜ್ ಸಿಂಗ್, ಎಂಎಸ್ ಧೋನಿ(ವಿಕೆ), ಜಾಕ್ ಕಾಲೀಸ್, ಶೇನ್ ವಾರ್ನ್, ಅಲನ್ ಡೊನಾಲ್ಡ್, ಗ್ಲೆನ್ ಮೆಕ್ಗ್ರಾತ್, ಶ್ರೀಶಾಂತ್