ಮುಂಬೈ: ಕ್ರೀಡಾಪಟುವಿನ ಮೈದಾನದ ಪ್ರದರ್ಶನವನ್ನು ಗುರುತಿಸುತ್ತದೆಯೇ ಹೊರತು ಆತನ ಹಿನ್ನಲೆಯನ್ನಲ್ಲ ಎಂಬುದನ್ನು ತಾವೂ ಬಲವಾಗಿ ನಂಬಿರುವುದಾಗಿ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
ಕ್ರಿಕೆಟ್ ಜಗತ್ತಿನ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಬ್ರೇಕ್ ಮಾಡಿದ್ದ ಸಚಿನ್ 2013ರಲ್ಲಿ ತಮ್ಮ 22 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದರು. ಅವರು ಭಾರತದ ಪರ 200 ಟೆಸ್ಟ್, 463 ಏಕದಿನ ಪಂದ್ಯಗಳನ್ನಾಡಿದ್ದು, 34 ಸಾವಿರಕ್ಕೂ ಹೆಚ್ಚು ರನ್ಗಳಿಸಿದ್ದಾರೆ.
ನಾವು ಡ್ರೆಸ್ಸಿಂಗ್ ರೂಮ್ಗೆ ಪ್ರವೇಶಿಸಿದಾಗ, ನೀವು ಎಲ್ಲಿಂದ ಬಂದಿದ್ದೀರಾ, ದೇಶದ ಯಾವ ಭಾಗದವರು, ನೀವು ಎಲ್ಲಿದ್ದೀರಿ ಎಂದು ಪರಿಗಣನೆಗೆ ಬರುವುದಿಲ್ಲ. ಕ್ರೀಡೆ ಎಲ್ಲರಿಗೂ ಒಂದೇ ಸಮನಾದ ಕ್ಷೇತ್ರವಾಗಿರುತ್ತದೆ. ಕ್ರೀಡೆಯು ಮೈದಾನದಲ್ಲಿ ನಿಮ್ಮ ಪ್ರದರ್ಶನವನ್ನು ಹೊರತುಪಡಿಸಿ ಬೇರೆ ಏನನ್ನೂ ಗುರುತಿಸುವುದಿಲ್ಲ ಎಂದು ತೆಂಡೂಲ್ಕರ್ ವಿಧ್ಯಾರ್ಥಿಗಳ ಜೊತೆ ನಡೆದ ವರ್ಚುಯಲ್ ಸಂವಾದದಲ್ಲಿ ಪ್ರತಿಪಾದನೆ ಮಾಡಿದ್ದಾರೆ.
ಹೊಸ ಉಪಕ್ರಮದ ಮೂಲಕ ಕ್ರೀಡೆ ಜನರನ್ನು ಒಗ್ಗೂಡಿಸುತ್ತದೆ. ನೀವು ತಂಡದ ಕಡೆಗೆ ಕೊಡುಗೆ ನೀಡಲು ಬಯಸುವ ವ್ಯಕ್ತಿಯಾಗಿರುತ್ತೀರಿ ಎಂದು 47 ವರ್ಷದ ಲೆಜೆಂಡರಿ ಬ್ಯಾಟ್ಸ್ಮನ್ ತಿಳಿಸಿದ್ದಾರೆ.
ಇನ್ನು ವಿದ್ಯಾರ್ಥಿಗಳಿಗೆ ತಮ್ಮ ಗುರಿಗಳನ್ನು ಬೆನ್ನತ್ತವುದನ್ನು ಮುಂದುವರಿಸಲು ಹಾಗೂ ಅದಕ್ಕಾಗಿ ಹೆಚ್ಚು ಪರಿಶ್ರಮ ವಹಿಸಬೇಕೆಂದು ತಿಳಿಸಿದ್ದಾರೆ.