ಸೂರತ್: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭಾರತೀಯ ವನಿತೆಯರ ಟೀಂ ಪ್ರಾಬಲ್ಯ ಸಾಧಿಸಿದ್ದು, ಇನ್ನೂ ಒಂದು ಪಂದ್ಯ ಉಳಿದಿರುವಂತೆ 3-0ಯಲ್ಲಿ ಸರಣಿ ಜಯಿಸಿದೆ.
ಸೂರತ್ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 5 ವಿಕೆಟ್ಗಳಿಂದ ದಕ್ಷಿಣಆಫ್ರಿಕಾದ ಮಹಿಳಾ ತಂಡ ಮಣಿಸಿ ಸರಣಿ ವಶಪಡಿಸಿಕೊಂಡಿದೆ. ಟಾಸ್ ಗೆದ್ದು ಹರಿಣಗಳಿಗೆ ಬ್ಯಾಟಿಂಗ್ ಆಹ್ವಾನ ನೀಡಿದ ಹರ್ಮನ್ಪ್ರೀತ್ ಕೌರ್ ನಿರ್ಧಾರವನ್ನು ಭಾರತೀಯ ಬೌಲರ್ಗಳು ಸಮರ್ಥಿಸಿಕೊಂಡರು. ಭಾರತದ ಸ್ಪಿನ್ ಬೌಲಿಂಗ್ ಮುಂದೆ ಪರದಾಡಿದ ದ.ಆಫ್ರಿಕಾ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 98 ರನ್ಗಳಿಸಿತು.
-
And that is how you finish in style. 3-0 lead in the series for #TeamIndia. Well done @ImHarmanpreet 😎👏👏 #INDvSA pic.twitter.com/zDijTlp2yH
— BCCI Women (@BCCIWomen) October 3, 2019 " class="align-text-top noRightClick twitterSection" data="
">And that is how you finish in style. 3-0 lead in the series for #TeamIndia. Well done @ImHarmanpreet 😎👏👏 #INDvSA pic.twitter.com/zDijTlp2yH
— BCCI Women (@BCCIWomen) October 3, 2019And that is how you finish in style. 3-0 lead in the series for #TeamIndia. Well done @ImHarmanpreet 😎👏👏 #INDvSA pic.twitter.com/zDijTlp2yH
— BCCI Women (@BCCIWomen) October 3, 2019
ರಾಧಾ ಯಾದವ್ 3 ಹಾಗೂ ದೀಪ್ತಿ ಶರ್ಮಾ 2 ವಿಕೆಟ್ ಕಿತ್ತರು. ಶಿಖಾ ಪಾಂಡೆ, ಹರ್ಮನ್ಪ್ರೀತ್ ಕೌರ್ ಹಾಗೂ ಪೂನಂ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. 99 ರನ್ಗಳ ಅಲ್ಪ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ನಾಯಕಿ ಹರ್ಮನ್ಪ್ರೀತ್ ಕೌರ್ ಗೆಲುವು ಸಾಧ್ಯವಾಗಿಸಿದರು. ಕೌರ್ 34 ರನ್, ಶಫಾಲಿ ಶರ್ಮಾ 14 ಹಾಗೂ ದೀಪ್ತಿ ಶರ್ಮಾ 16 ರನ್ ಗಳಿಸಿ ಐದು ವಿಕೆಟ್ ನಷ್ಟಕ್ಕೆ ಗೆಲುವು ಭಾರತದ ಪಾಲಾಯಿತು.
ಇಂದು ಸೂರತ್ನಲ್ಲಿ 6ನೇ ಟಿ20 ಪಂದ್ಯ ನಡೆಯಲಿದ್ದು, ಈಗಾಗಲೇ ಸರಣಿ ಗೆದ್ದಿರುವ ಭಾರತಕ್ಕೆ ಈ ಪಂದ್ಯ ಅಷ್ಟೇನೂ ಮಹತ್ವ ಹೊಂದಿಲ್ಲ.