ಲಂಡನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಫೈನಲ್ ಓವರ್ನಲ್ಲಿ ವಿರೋಚಿತ ಸೋಲು ಕಂಡಿದ್ದು, ಈ ಮೂಲಕ ನಿರಾಸೆಗೊಳಗಾಗಿದೆ. ಈ ಮೂಲಕ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಹರಿಣಗಳ ತಂಡ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 8ವಿಕೆಟ್ ಕಳೆದುಕೊಂಡು 177ರನ್ಗಳಿಕೆ ಮಾಡ್ತು. ತಂಡದ ಪರ ಆರಂಭಿಕ ಆಟಗಾರ ತೆಂಬಾ ಬವಮ್ 43 ಅತಿ ಹೆಚ್ಚು ರನ್ಗಳಿಕೆ ಮಾಡಿದ್ರು.
178 ರನ್ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಜಾಸನ್ ರಾಯ್ ಕೇವಲ 38 ಎಸೆತಗಳಲ್ಲಿ 3 ಸಿಕ್ಸರ್, 7ಬೌಂಡರಿ ಸೇರಿ 70 ರನ್ಗಳಿಕೆ ಮಾಡಿ ತಂಡಕ್ಕೆ ಬದ್ರ ಬುನಾದಿ ಹಾಕಿದರು. 132ರನ್ಗಳಿಕೆ ಮಾಡುವಷ್ಟರಲ್ಲಿ ಕೇವಲ 3ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಸುಲಭ ಗೆಲುವು ದಾಖಲು ಮಾಡುತ್ತದೆ ಎಂದು ಎಲ್ಲರೂ ಅಂದು ಕೊಂಡಿದ್ದರು. 34 ಎಸೆತಗಳಲ್ಲಿ ತಂಡಕ್ಕೆ 46ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಕೈಯಲ್ಲಿ ಏಳು ವಿಕೆಟ್ ಇದ್ದವು.
ಕ್ಯಾಪ್ಟನ್ ಇಯಾನ್ ಮಾರ್ಗನ್ 52ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸುತ್ತಿದ್ದಂತೆ ಮೈದಾನಕ್ಕೆ ಬಂದ ಜಾಯ್ ಡೈನ್ಲಿ(3), ಬೆನ್ ಸ್ಟೋಕ್ಸ್(4), ಮೊಯಿನ್ ಅಲಿ(5), ಥಾಮ್ ಕರನ್(2)ರನ್ಗಳಿಕೆ ಮಾಡಿ ಪೆವಿಲಿಯನ್ ಸೇರಿಕೊಂಡರು. ಕೇವಲ 5ರನ್ಗಳಿಕೆ ಮಾಡುವಲ್ಲಿ ಪ್ರಮುಖ 4ವಿಕೆಟ್ ಕಳೆದುಕೊಂಡ್ತು. ಕೊನೆ ಓವರ್ನಲ್ಲಿ ತಂಡಕ್ಕೆ 7ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಲುಂಗಿ ಎಂಗಿಡಿ ಕೇವಲ 6ರನ್ ಬಿಟ್ಟುಕೊಟ್ಟಿದ್ದರಿಂದ ದಕ್ಷಿಣ ಆಫ್ರಿಕಾ ತಂಡ 1ರನ್ಗಳ ರೋಚಕ ಗೆಲುವು ದಾಖಲು ಮಾಡಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. 4ಓವರ್ನಲ್ಲಿ 30ರನ್ ನೀಡಿ 4ವಿಕೆಟ್ ಪಡೆದುಕೊಂಡು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.