ಒವೆಲ್: ಅಂಡರ್-19 ವಿಶ್ವಕಪ್ ಟೂರ್ನಿ ಇಂದಿನಿಂದ ಆರಂಭಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲೇ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಸೋಲಿನ ರುಚಿ ತೋರಿಸಿದೆ. ಈ ಮೂಲಕ ಗೆಲುವಿನ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹರಿಣಗಳಿಗೆ ಆಫ್ಘಾನ್ ಬೌಲರ್ ಮಾರಕ ಬೌಲಿಂಗ್ ದಾಳಿಗೆ ತುತ್ತಾಗಿ 129ರನ್ಗಳಿಗೆ ಆಲೌಟ್ ಆಯಿತು. ಆರಂಭಿಕರಾಗಿ ಕಣಕ್ಕಿಳಿದ ಆಂಡ್ರ್ಯೋ ಲೂವ್(2) ಹಾಗೂ ಜೋನಾಥನ್ ಬಿರ್ಡಾ(0)ರನ್ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಮೈದಾನಕ್ಕಿಳಿದ ಕ್ಯಾಪ್ಟನ್ ಬ್ರೈಸಿ ಪ್ರಸನ್ಸ್ 40ರನ್ ಹಾಗೂ ಲೂಕಿ ಬೈಪೂರ್ಟ್ 25ರನ್ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು.
ಉತ್ತಮವಾಗಿ ಆಡುತ್ತಿದ್ದ ಇವರಿಬ್ಬರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕೆ ಬಂದ ಯಾವುಬ್ಬ ಆಟಗಾರ ಸಹ ಎರಡಕ್ಕಿ ದಾಟಲಿಲ್ಲ. ಆದರೆ ಕೊನೆಯದಾಗಿ ಬಂದ ಗ್ರೆಲ್ಡ್ 23 ಎಸೆತಗಳಲ್ಲಿ 38ರನ್ಗಳಿಕೆ ಮಾಡಿ ತಂಡ 100ರ ಗಡಿ ದಾಟುವಂತೆ ಮಾಡಿದರು. ಕೊನೆಯದಾಗಿ ತಂಡ 29.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 129ರನ್ಗಳಿಸಿತ್ತು.
ಆಫ್ಘಾನ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಸೌಫುದ್ದುಲ್ಲಾ ಗಫಾರಿ 9.1 ಓವರ್ಗಳಲ್ಲಿ 6ವಿಕೆಟ್ ಪಡೆದು ಮಿಂಚಿದ್ರೆ, ನೂರ್ ಅಹ್ಮದ್ ಹಾಗೂ ಫಜಲ್ ಹಕ್ ತಲಾ 2ವಿಕೆಟ್ ಪಡೆದುರು.
130ರನ್ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಆಫ್ಘಾನ್ ಆರಂಭದಲ್ಲಿ ಕ್ಯಾಪ್ಟನ್ ಫರಾನ್(11)ವಿಕೆಟ್ ಕಳೆದುಕೊಂಡರೂ, ತದನಂತರದಲ್ಲಿ ಒಂದಾದ ಇಬ್ರಾಹಿಂ (52) ಹಾಗೂ ಇಮ್ರಾನ್ ಮಿರ್(57) 80ರನ್ಗಳ ಜೊತೆಯಾಟ ಗೆಲುವಿನ ಸನ್ನಿಹಕ್ಕೆ ತಂದಿಟ್ಟಿತ್ತು. ಇದಾದ ಬಳಿಕ ರೆಹಮನ್ನುಲ್ಲಾ ಅಜೇಯ 3ರನ್ ಹಾಗೂ ಅಬಿದ್ ಮೊಹಮ್ಮದಿ ಅಜೇಯ 2ರನ್ಗಳಿಸಿ ತಂಡವನ್ನ 25 ಓವರ್ಗಳಲ್ಲಿ 3ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿಸಿದರು.
ಆರು ವಿಕೆಟ್ ಪಡೆದು ಮಿಂಚಿದ ಆಫ್ಘಾನ್ ಬೌಲರ್ ಸೈಫುದ್ದುಲ್ಲಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.