ETV Bharat / sports

ಶ್ರೀಲಂಕಾವನ್ನು 10 ವಿಕೆಟ್​ಗಳಿಂದ ಮಣಿಸಿ ಟೆಸ್ಟ್​ ಸರಣಿ ಗೆದ್ದ ದಕ್ಷಿಣ ಆಫ್ರಿಕಾ - Karunaratne century

ಮೊದಲ ಇನ್ನಿಂಗ್ಸ್​ನಲ್ಲಿ ಶ್ರೀಲಂಕಾ 157ಕ್ಕೆ ಆಲೌಟ್​ ಆದರೆ, ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 302 ರನ್​ಗಳಿಗೆ ಆಲೌಟ್​ ಆದರೂ 145 ರನ್​ಗಳ ಇನ್ನಿಂಗ್ಸ್​ ಮುನ್ನಡೆ ಪಡೆದುಕೊಂಡಿತ್ತು. ಶ್ರೀಲಂಕಾ 2ನೇ ಇನ್ನಿಂಗ್ಸ್​ನಲ್ಲಿ 211 ರನ್​ಗಳಿಗೆ ಸರ್ವಪತನಗೊಂಡು 67 ರನ್​ಗಳ ಜಯ ಸಾಧಿಸಿತ್ತು.

ಶ್ರೀಲಂಕಾ 10 ವಿಕೆಟ್​ಗಳ ಜಯ ಸಾಧಿಸಿದ ದ.ಆಫ್ರಿಕಾ

author img

By

Published : Jan 5, 2021, 7:09 PM IST

ಜೋಹನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ಆಲ್​ರೌಂಡ್​ ಪ್ರದರ್ಶನ ತೋರಿ ಶ್ರೀಲಂಕಾ ತಂಡವನ್ನು ಎರಡನೇ ಟೆಸ್ಟ್​ನಲ್ಲಿ 10 ವಿಕೆಟ್​ಗಳಿಂದ ಮಣಿಸುವ ಮೂಲಕ 2-0ಯಲ್ಲಿ ಟೆಸ್ಟ್​ ಸರಣಿ ಜಯಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಶ್ರೀಲಂಕಾ 157ಕ್ಕೆ ಆಲೌಟ್​ ಆದರೆ, ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 302 ರನ್​ಗಳಿಗೆ ಆಲೌಟ್​ ಆದರೂ 145 ರನ್​ಗಳ ಇನ್ನಿಂಗ್ಸ್​ ಮುನ್ನಡೆ ಪಡೆದುಕೊಂಡಿತ್ತು. ಇದಕ್ಕುತ್ತರವಾಗಿ ಶ್ರೀಲಂಕಾ 2ನೇ ದಿನ 4 ವಿಕೆಟ್​ ಕಳೆದುಕೊಂಡು 150 ರನ್ ​ಗಳಿಸಿತ್ತು.

ಮೂರನೇ ದಿನವಾದ ಇಂದು ಶ್ರೀಲಂಕಾ ತಂಡ 211 ರನ್​ಗಳಿಗೆ ಆಲೌಟ್ ಆಗುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಕೇವಲ 67 ರನ್​ಗಳ ಸಾಧಾರಣ ಗುರಿ ನೀಡಿತ್ತು. ನಿನ್ನೆ 91 ರನ್​ಗಳಿಸಿದ್ದ ಕರುಣರತ್ನೆ ಇಂದು 103 ರನ್ ​ಗಳಿಸಿ ಔಟಾದರು. ಇನ್ನಿಂಗ್ಸ್​ ಸೋಲನ್ನು ತಪ್ಪಿಸಲು ಯಶಸ್ವಿಯಾದರೂ ಲಂಕಾ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಲಾಗಲಿಲ್ಲ.

ಲುಂಗಿ ಎಂಗಿಡಿ 4, ಎನ್ರಿಚ್​ ನೋಕಿಯಾ 2, ಸಿಂಪಾಲ 3 ಹಾಗೂ ವಿಯಾನ್ ಮಲ್ಡರ್​ ಒಂದು ವಿಕೆಟ್​ ಪಡೆದು ಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ತಂಡ ನೀಡಿದ 67 ರನ್​ಗಳ ಸಾದಾರಣ ಗುರಿಯನ್ನು ಕೇವಲ 13.2 ಓವರ್​ಗಳಲ್ಲಿ ತಲುಪಿ 10 ವಿಕೆಟ್​ಗಳ ಜಯ ಸಾಧಿಸಿತು. ಮ್ಯಾರ್ಕ್ರಮ್ 36 ಮತ್ತು ಡೀನ್ ಎಲ್ಗರ್​ 31 ರನ್ ​ಗಳಿಸಿದರು.

ಟೆಸ್ಟ್​ ಸರಣಿಯನ್ನು 2-0 ಅಂತರದಲ್ಲಿ ಜಯ ಸಾಧಿಸುವ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪಾಯಿಂಟ್​ ಟೇಬಲ್​ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.