ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಭಾರತ ತಂಡ ಹರಿಣಗಳನ್ನು ಆಲೌಟ್ ಮಾಡುವ ಮೂಲಕ 326 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
36ಕ್ಕೆ 3 ವಿಕೆಟ್ ಕಳೆದುಕೊಂಡು ಮೂರನೇ ದಿನ ಆಟವಾರಂಭಿಸಿದ ಆಫ್ರಿಕಾ ಪರ ನೈಟ್ ವಾಚ್ಮನ್ಗಳಾಗಿದ್ದ ಆ್ಯನ್ರಿಚ್ ನಾರ್ಟ್ಜೆ(3) ಹಾಗೂ ಡಿ ಬ್ರಯಾನ್(30)ರನ್ನು ಬೇಗ ಔಟ್ ಮಾಡುವ ಮೂಲಕ ಯಾದವ್ ಹಾಗೂ ಶಮಿ ಭಾರತಕ್ಕೆ ಆರಂಭಿಕ ಮುನ್ನಡೆ ತಂಡದುಕೊಟ್ಟರು.
ಆದರೆ, ನಾಯಕ ಡುಪ್ಲೆಸಿಸ್(64) ಹಾಗೂ ಡಿಕಾಕ್(31) 17 ಓವರ್ಗಳ ಕಾಲ ಕ್ರೀಸ್ನಲ್ಲಿ ನಿಂತು 75ರನ್ಗಳ ಜೊತೆಯಾಟ ನಡೆಸಿ ಹರಿಣ ಪಡೆಯ ಪೆವಿಲಿಯನ್ ಪರೇಡ್ಗೆ ತಡೆಯೊಡ್ಡಿದರು. 31 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಡಿಕಾಕ್ರನ್ನು ಅಶ್ವಿನ್ ಬೌಲ್ಡ್ ಮಾಡಿದರು. ನಂತರ ಬಂದ ಮುತ್ತುಸ್ವಾಮಿ ಜಡೇಜಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. 117ಎಸೆತಗಳಲ್ಲಿ 64 ರನ್ ಸಿಡಿಸಿದ್ದ ಪ್ಲೆಸಿಸ್ರನ್ನು ಅಶ್ವಿನ್ ಔಟ್ ಮಾಡುವ ಮೂಲಕ ಹರಿಣಗಳಿಗೆ ಆಘಾತ ನೀಡಿದರು.
-
That's the end of the innings and the day!
— ICC (@ICC) October 12, 2019 " class="align-text-top noRightClick twitterSection" data="
Ashwin takes the final wicket and South Africa are all out 275. Rabada is the last man to go and Philander is left unbeaten on 44. Maharaj is the top-scorer with his valiant knock of 72.
Follow #INDvSA LIVE ▶️ https://t.co/MO1tirvOza pic.twitter.com/q4ahE1acrq
">That's the end of the innings and the day!
— ICC (@ICC) October 12, 2019
Ashwin takes the final wicket and South Africa are all out 275. Rabada is the last man to go and Philander is left unbeaten on 44. Maharaj is the top-scorer with his valiant knock of 72.
Follow #INDvSA LIVE ▶️ https://t.co/MO1tirvOza pic.twitter.com/q4ahE1acrqThat's the end of the innings and the day!
— ICC (@ICC) October 12, 2019
Ashwin takes the final wicket and South Africa are all out 275. Rabada is the last man to go and Philander is left unbeaten on 44. Maharaj is the top-scorer with his valiant knock of 72.
Follow #INDvSA LIVE ▶️ https://t.co/MO1tirvOza pic.twitter.com/q4ahE1acrq
ಭಾರತೀಯರನ್ನು ಕಾಡಿದ ಮಹಾರಾಜ-ಫಿಲಾಂಡರ್ :
162ಕ್ಕೆ 8ವಿಕೆಟ್ ಕಳೆದುಕೊಂಡು ಇಂದೇ ಫಾಲೋಆನ್ಗೊಳಗಾಗುವ ಭೀತಿಯಲ್ಲಿದ್ದ ಹರಿಣಗಳಿಗೆ ಬಾಲಂಗೋಚಿಗಳಾದ ಫಿಲಾಂಡರ್(44) ಹಾಗೂ ಕೇಶವ್ ಮಹಾರಾಜ್(72) 42 ಓವರ್ಗಳ ಜೊತೆಯಾಟ ನಡೆಸಿ ಭಾರತೀಯ ಬೌಲರ್ಗಳನ್ನು ಕಾಡಿದರು.
ದಿನದಂತ್ಯಕ್ಕೆ 4 ಓವರ್ಗಳಿರುವಾಗ 72 ರನ್ಗಳಿಸಿದ್ದ ಕೇಶವ್ ಮಹಾರಾಜ್ ಅಶ್ವಿನ್ ಬೌಲಿಂಗ್ನಲ್ಲಿ ರೋಹಿತ್ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಕಗಿಸೋ ರಬಡಾರನ್ನು ಅಶ್ವಿನ್ ಎಲ್ಬಿಡಬ್ಲೂ ಬಲೆಗೆ ಬೀಳಿಸುವ ಮೂಲಕ ಹರಿಣಗಳ ಇನ್ನಿಂಗ್ಸ್ಗೆ ತೆರೆ ಎಳೆದರು. ಭಾರತದ ಪರ ಉಮೇಶ್ ಯಾದವ್ 3ವಿಕೆಟ್, ರವಿಚಂದ್ರನ್ ಅಶ್ವಿನ್ 4ವಿಕೆಟ್, ಜಡೇಜಾ 1 ವಿಕೆಟ್ ಹಾಗೂ ಶಮಿ 3 ವಿಕೆಟ್ ಪಡೆದರು.
ಇನ್ನು, ಎರಡು ದಿನಗಳ ಆಟ ಬಾಕಿಯಿದ್ದು, ಭಾರತ ತಂಡ 326 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ. ಆದರೆ, ಎದುರಾಳಿಗೆ ಫಾಲೋಆನ್ ಏರಲಿದಿಯೇ ಅಥವಾ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಲಿದೆಯಾ ಎಂಬುದೇ ಕೌತುಕದ ವಿಚಾರವಾಗಲಿದೆ.