ಕರಾಚಿ: 14 ವರ್ಷಗಳ ನಂತರ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ನೀರಸ ಪ್ರದರ್ಶನ ತೋರಿ ಕೇವಲ 220 ರನ್ಗಳಿಗೆ ಆಲೌಟ್ ಆಗಿದೆ.
ಕರಾಚಿ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾಗಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಹರಿಣ ಪಡೆ, ಪಾಕ್ ಬೌಲರ್ಗಳ ದಾಳಿಗೆ ತತ್ತರಿಸಿ 69.2 ಓವರ್ಗಳಲ್ಲಿ 220ಕ್ಕೆ ಸರ್ವಪತನ ಕಂಡಿತು.
ಆರಂಭಿಕ ಡೀನ್ ಎಲ್ಗರ್ 58 ರನ್ ಗಳಿಸುವ ಮೂಲಕ ಏಕೈಕ ಅರ್ಧಶತಕ ಬಾರಿಸಿದರು. ಇವರನ್ನು ಹೊರತುಬಿಡಿಸಿದರೆ ಜಾರ್ಜ್ ಲಿಂಡೆ 35, ರಬಡಾ 21, ಪ್ಲೆಸಿಸ್ 23 ರನ್ ಗಳಿಸಿದರು.
-
Stumps in Karachi 🏏
— ICC (@ICC) January 26, 2021 " class="align-text-top noRightClick twitterSection" data="
14 wickets have fallen today 😲
Pakistan are 33/4, trailing by 187 runs!#PAKvSA ➡️ https://t.co/45UQifG17K pic.twitter.com/peIrMoaWmF
">Stumps in Karachi 🏏
— ICC (@ICC) January 26, 2021
14 wickets have fallen today 😲
Pakistan are 33/4, trailing by 187 runs!#PAKvSA ➡️ https://t.co/45UQifG17K pic.twitter.com/peIrMoaWmFStumps in Karachi 🏏
— ICC (@ICC) January 26, 2021
14 wickets have fallen today 😲
Pakistan are 33/4, trailing by 187 runs!#PAKvSA ➡️ https://t.co/45UQifG17K pic.twitter.com/peIrMoaWmF
ಪಾಕಿಸ್ತಾನ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಪದಾರ್ಪಣೆ ಬೌಲರ್ ನಯುಮನ್ ಅಲಿ 2, ಯಾಸಿರ್ ಶಾ 3, ಶಾಹೀನ್ ಅಫ್ರಿದಿ 2 ಹಾಗೂ ಹಸನ್ ಅಲಿ ಒಂದು ವಿಕೆಟ್ ಪಡೆದರು.
ಇನ್ನು ಪಾಕಿಸ್ತಾನ ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಆರಂಭ ಪಡೆದಿದ್ದು, ಕೇವಲ 34 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ಆರಂಭಿಕರಾದ ಇಮ್ರಾನ್ ಬಟ್(9), ಅಬೀದ್ ಅಲಿ(4) ರಬಾಡಗೆ ವಿಕೆಟ್ ಒಪ್ಪಿಸಿದರೆ, ನಾಯಕ ಬಾಬರ್ ಅಜಮ್ 7 ರನ್ ಗಳಿಸಿ ಕೇಶವ್ ಮಹಾರಾಜ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ನೈಟ್ ವಾಚ್ಮ್ಯಾನ್ ಆಗಿ ಬಂದಿದ್ದ ಶಾಹೀನ್ ಅಫ್ರಿದಿ ಶೂನ್ಯಕ್ಕೆ ಔಟ್ ಆಗಿದ್ದಾರೆ.
ಇದನ್ನು ಓದಿ:ಕೊಹ್ಲಿ ಭಾರತವನ್ನು ಕಠಿಣವಾಗಿಸಿದ್ದಾರೆ, ಯಾರಿಂದಲೂ ಬೆದರಿಸಲಾಗುವುದಿಲ್ಲ: ನಾಸಿರ್ ಹುಸೇನ್