ಪೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾ ಬೌಲರ್ಗಳ ಕಪಿಮುಷ್ಠಿಗೆ ಸಿಲುಕಿದ ಆಸ್ಟ್ರೇಲಿಯನ್ನರು 159 ರನ್ಗಳ ಟಾರ್ಗೆಟ್ ಬೆನ್ನತ್ತದೆ 12 ರನ್ಗಳ ಸೋಲು ಕಂಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ, ನಾಯಕ ಕ್ವಿಂಟನ್ ಡಿಕಾಕ್(70) ಅವರ ಭರ್ಜರಿ ಅರ್ಧಶತಕ ಹಾಗೂ ಡಾಸ್ಸೆನ್ 37 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 158ರನ್ಗಳಿಸಿತ್ತು.
ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ 2, ಆ್ಯಡಂ ಜಂಪಾ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ ಒಂದು ವಿಕೆಟ್ ಪಡೆದಿದ್ದರು.
159 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದು ಮೊದಲ ವಿಕೆಟ್ಗೆ ವಾರ್ನರ್ ಹಾಗೂ ಫಿಂಚ್ 48 ರನ್ಗಳಿಸಿದರು. ಫಿಂಚ್ 14 ರನ್ಗಳಿಸಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಮಿತ್(29) ವಾರ್ನರ್ ಜೊತೆಗೂಡಿ 50 ರನ್ಗಳ ಜೊತೆಯಾಟ ನೀಡಿದರು.
-
South Africa complete an incredible comeback to win by 12 runs! 🎉
— ICC (@ICC) February 23, 2020 " class="align-text-top noRightClick twitterSection" data="
Warner finishes on 67* but it's not enough.#SAvAUS pic.twitter.com/ybPadLzEsV
">South Africa complete an incredible comeback to win by 12 runs! 🎉
— ICC (@ICC) February 23, 2020
Warner finishes on 67* but it's not enough.#SAvAUS pic.twitter.com/ybPadLzEsVSouth Africa complete an incredible comeback to win by 12 runs! 🎉
— ICC (@ICC) February 23, 2020
Warner finishes on 67* but it's not enough.#SAvAUS pic.twitter.com/ybPadLzEsV
ಸ್ಮಿತ್ ಔಟಾಗುತ್ತಿದ್ದಂತೆ ಆಸ್ಟ್ರೇಲಿಯಾ ನಾಟಕೀಯ ಕುಸಿತ ಕಂಡಿತು. 14 ರನ್ಗಳಿಸಿದ ಅಲೆಕ್ಸ್ ಕ್ಯಾರಿ, ನಂತರ ಬಂದ ಮಿಚೆಲ್ ಮಾರ್ಷ್(6), ಮ್ಯಾಥ್ಯೂ ವೇಡ್(1), ಅಶ್ಟನ್ ಅಗರ್(1), ರನ್ಗಳಿಸಿ ಔಟಾದರು.
ಆರಂಭಿಕನಾಗಿ ಕಣಕ್ಕಿಳಿದಿದ್ದ ವಾರ್ನರ್ ಕೊನೆಯ ಓವರ್ ವರೆಗೂ ಆಡಿದರೂ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. 56 ಎಸೆತಗಳನ್ನು ಎದುರಿಸಿದ ವಾರ್ನರ್ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 67 ರನ್ಗಳಿಸಿ ಔಟಾಗದೆ ಉಳಿದರು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಲುಂಗಿ ಎಂಗಿಡಿ 3 ವಿಕೆಟ್, ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಆ್ಯನ್ರಿಚ್ ನಾರ್ಟ್ಜ್ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
3 ಪಂದ್ಯಗಳ ಟಿ20 ಸರಣಿ 1-1ರಲ್ಲಿ ಸಮಬಲವಾಗಿದ್ದು ಫೆ.26ರಂದು ನಡೆಯಲಿರುವ ಕೊನೆಯ ಪಂದ್ಯ ರೋಚಕತೆಯಿಂದ ಕೂಡಿರಲಿದೆ.