ETV Bharat / sports

ಭಜ್ಜಿ ಸಹಾಯ ಕೇಳಿದ ಬಿಸಿಸಿಐ ಭಾವಿ ಅಧ್ಯಕ್ಷ ದಾದಾ! - ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಗೆ ಶುಭಕೋರಿದ ಭಜ್ಜಿ

ಬೆಂಗಾಲ್​ ಟೈಗರ್​ ಬಿಸಿಸಿಐ ಚುಕ್ಕಾಣಿ ಹಿಡಿಯುತ್ತಿರುವುದಕ್ಕೆ ಖುಷಿಯಾಗಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್ ಗಂಗೂಲಿಗೆ ವಿಶ್​ ಮಾಡಿದ್ದು,​ ಟ್ವಿಟರ್​ನಲ್ಲಿ "ನೀವೊಬ್ಬ ನಾಯಕರಾಗಿ ಮತ್ತೊಬ್ಬರನ್ನು ನಾಯಕನನ್ನಾಗಿ ಬೆಳೆಸುವವರರು, ಬಿಸಿಸಿಐ ಅಧ್ಯಕ್ಷನಾಗುತ್ತಿರುವುದಕ್ಕೆ ಅಭಿನಂದನೆಗಳು, ನಿಮಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ" ಎಂದು ಬರೆದು ದಾದಾಗೆ ಶುಭಕೋರಿದ್ದಾರೆ.

Sourav Ganguly
author img

By

Published : Oct 16, 2019, 6:26 PM IST

Updated : Oct 16, 2019, 6:50 PM IST

ಮುಂಬೈ: ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಇದೇ ತಿಂಗಳು 23ಕ್ಕೆ ಬಿಸಿಸಿಐ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಿರುವುದರಿಂದ ಹಲವಾರು ಕ್ರಿಕೆಟಿಗರು ದಾದಾಗೆ ಶುಭ ಕೋರಿದ್ದಾರೆ.

ದಾದಾ ಕೇವಲ ಒಬ್ಬ ಕ್ರಿಕೆಟಿಗನಾಗಿ ಮಾತ್ರವಲ್ಲದೇ, ನಾಯಕನಾಗಿ ತಮ್ಮ ಕ್ರಿಕೆಟ್​ ಜೀವನವನ್ನೇ ಕೆಲವು ಆಟಗಾರರ ಬೆಳವಣಿಗೆಗಾಗಿ ತ್ಯಾಗಮಾಡಿದ್ದರು. ಪ್ರತಿಭೆಯುಳ್ಳ ಆಟಗಾರರಿಗೆ ಅನ್ಯಾಯವಾಗಲು ಬಿಡದ ಗಂಗೂಲಿ ಯಾರನ್ನು ಬೇಕಾದರೂ ಎದುರಿಸಲು ಸಿದ್ದವಾಗುತ್ತಿದ್ದರು. ಅದರಲ್ಲೂ ಸೆಹ್ವಾಗ್​, ಯುವರಾಜ್​, ಜಹೀರ್​ ಖಾನ್​, ದ್ರಾವಿಡ್​, ಅನಿಲ್ ​ಕುಂಬ್ಳೆ, ಮೊಹಮ್ಮದ್​ ಕೈಫ್​ ಎಂಸ್​ ಧೋನಿ ಅಂತಹ ಮಹಾನ್​ ಕ್ರಿಕೆಟಿಗರ ಸಾಧನೆಯ ಹಿಂದೆ ದಾದಾ ಇದ್ದರೆಂದರೆ ಅತಿಶಯೋಕ್ತಿಯಲ್ಲ.

ಹೀಗಿರುವಾಗ ಅಂತಹ ಬೆಂಗಾಲ್​ ಟೈಗರ್​ ಬಿಸಿಸಿಐ ಚುಕ್ಕಾಣಿ ಹಿಡಿಯುತ್ತಿರುವುದಕ್ಕೆ ಖುಷಿಯಾಗಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್ ಗಂಗೂಲಿಗೆ ವಿಶ್​ ಮಾಡಿದ್ದು,​ ಟ್ವಿಟರ್​ನಲ್ಲಿ "ನೀವೊಬ್ಬ ನಾಯಕರಾಗಿ ಮತ್ತೊಬ್ಬರನ್ನು ನಾಯಕನನ್ನಾಗಿ ಬೆಳೆಸುವವರರು, ಬಿಸಿಸಿಐ ಅಧ್ಯಕ್ಷನಾಗುತ್ತಿರುವುದಕ್ಕೆ ಅಭಿನಂದನೆಗಳು, ನಿಮಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ" ಎಂದು ಬರೆದು ದಾದಾಗೆ ಶುಭಕೋರಿದ್ದಾರೆ.

ಈ ಟ್ವೀಟ್​ಗೆ ಉತ್ತರಿಸಿರುವ ಗಂಗೂಲಿ" ಧನ್ಯವಾದ ಭಜ್ಜು, ನಿಮ್ಮ ಬೌಲಿಂಗ್​ ನೆರವಿನಿಂದ ಭಾರತ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ನಿಮ್ಮ ನೆರವು ಹೇಗಿತ್ತು ಈಗಲೂ ಅದು ನನಗೆ ಬೇಕಾಗಿದೆ" ಎಂದು ಟ್ವೀಟ್​ ಮಾಡುವ ಮೂಲಕ ಉನ್ನತ ಹುದ್ದೆಗೇರಿದರೂ ತಮ್ಮಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

  • Thank u bhajju ...need your support in the same manner as u bowled from one end for india to win matches ..

    — Sourav Ganguly (@SGanguly99) October 16, 2019 " class="align-text-top noRightClick twitterSection" data=" ">

Intro:Body:Conclusion:
Last Updated : Oct 16, 2019, 6:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.