ETV Bharat / sports

ಧೋನಿ ಭವಿಷ್ಯ ಇನ್ನು 3 ತಿಂಗಳಲ್ಲಿ ನಿರ್ಧಾರವಾಗಲಿದೆ: ಗಂಗೂಲಿ

ಎಂ.ಎಸ್.ಧೋನಿ ನಿವೃತ್ತಿ ವಿಚಾರದ ಬಗ್ಗೆ ಓಗಾಗಲೇ ಸ್ಪಷ್ಟತೆ ಇದ್ದು, ಮುಂದಿನ ಮೂರು ತಿಂಗಳಲ್ಲಿ ಎಲ್ಲರಿಗೂ ತಿಳಿಯಲಿದೆ ಎಂದು ಬಿಸಿಸಿಐ ಅಧ್ಯಕ್ಷರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Sourav Ganguly dhoni
Sourav Ganguly dhoni
author img

By

Published : Nov 30, 2019, 4:39 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ಲೆಜೆಂಡ್​ ಕ್ರಿಕೆಟರ್​ ಧೋನಿ ನಿವೃತ್ತಿ ಬಗ್ಗೆ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಧೋನಿ ಜನವರಿಯವರೆಗೆ ನಿವೃತ್ತಿ ಬಗ್ಗೆ ಕೇಳಬೇಡಿ ಎಂದರೆ, ಗಂಗೂಲಿ ಕೂಡ ಅದೇ ಉತ್ತರ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಧೋನಿ ಭವಿಷ್ಯ 2020ರ ಐಪಿಎಲ್​ ನಂತರ ನಿರ್ಧಾರವಾಗಲಿದೆ ಎಂದು ರವಿ ಶಾಸ್ತ್ರಿ ಹೇಳಿಕೆಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ಕೇಳಿದಾಗ ಗಂಗೂಲಿ, ಎಂ.ಎಸ್.ಧೋನಿ ಭವಿಷ್ಯ ಈಗಾಗಲೇ ನಿರ್ಧಾರವಾಗಿದೆ. ನಮಗೆ ಸಂಪೂರ್ಣ ಸ್ಪಷ್ಟತೆ ಇದೆ. ಆದರೆ, ಅದನ್ನು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆ ನಡೆಸಲು ಸಾಧ್ಯವಿಲ್ಲ. ಮೂರು ತಿಂಗಳ ನಂತರ ನಿಮಗೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಧೋನಿ ಕೂಡ ಕ್ರಿಕೆಟ್​​ಗೆ​ ಮರಳುವುದು ಯಾವಾಗ ಎಂಬ ಪ್ರಶ್ನೆಗೆ, "ಜನವರಿವರೆಗೆ ಏನನ್ನೂ ಕೇಳಬೇಡಿ" ಎಂದು ಹೇಳಿದ್ದರು.

ಇದೀಗ ಬಿಸಿಸಿಐ ಅಧ್ಯಕ್ಷ ಗಂಗೂಲಿ ಕೂಡ ಧೋನಿ ಭವಿಷ್ಯದ ಬಗ್ಗೆ ಬೋರ್ಡ್​, ಎಂ.ಎಸ್.ಧೋನಿ ಹಾಗೂ ಆಯ್ಕೆ ಸಮಿತಿಗೆ ಸ್ಪಷ್ಟತೆ ಇದೆ. ಆದರೆ ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ. ಇದೆಲ್ಲಾ ನೋಡಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕು ಅಂತ್ಯಗೊಳ್ಳುವ ಸಮಯ ಸಮೀಪಿಸುತ್ತಿದೆ ಎಂಬ ಮಾತು ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.