ಶಾರ್ಜಾ: ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಸ್ಮೃತಿ ಮಂಧಾನ ನೇತೃತ್ವದ ಟ್ರೈಲ್ಬ್ಲೇಜರ್ಸ್ ತಂಡ ವೆಲಾಸಿಟಿ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ 15.1 ಓವರ್ಗಳಲ್ಲಿ ಕೇವಲ 47 ರನ್ಗಳಿಗೆ ಆಲೌಟ್ ಅಗಿತ್ತು. ಈ ಸಣ್ಣ ಮೊತ್ತವನ್ನು ಟ್ರೈಲ್ಬ್ಲೇಜರ್ಸ್ ತಂಡ ಕೇವಲ 7.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ತಲುಪಿತು.
-
#Trailblazers start their #JioWomensT20Challenge campaign in style as they thump #Velocity by 9 wickets. 👌🔝🔥#VELvTBL #JioWomensT20Challenge
— IndianPremierLeague (@IPL) November 5, 2020 " class="align-text-top noRightClick twitterSection" data="
LIVE: https://t.co/tecCY5u0vl pic.twitter.com/2lCuQH0flN
">#Trailblazers start their #JioWomensT20Challenge campaign in style as they thump #Velocity by 9 wickets. 👌🔝🔥#VELvTBL #JioWomensT20Challenge
— IndianPremierLeague (@IPL) November 5, 2020
LIVE: https://t.co/tecCY5u0vl pic.twitter.com/2lCuQH0flN#Trailblazers start their #JioWomensT20Challenge campaign in style as they thump #Velocity by 9 wickets. 👌🔝🔥#VELvTBL #JioWomensT20Challenge
— IndianPremierLeague (@IPL) November 5, 2020
LIVE: https://t.co/tecCY5u0vl pic.twitter.com/2lCuQH0flN
ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ (6) ವಿಕೆಟ್ ಬೇಗ ಕಳೆದುಕೊಂಡರು. ವಿಂಡೀಸ್ ಸ್ಟಾರ್ ದಿಯಾಂಡ್ರ ದೊಟ್ಟಿನ್ ಔಟಾಗದೆ 29 ಮತ್ತು ರಿಚಾ ಘೋಷ್ ಔಟಾಗದೆ13 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಇದಕ್ಕು ಮೊದಲು ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಟ್ರೈಲ್ ಬ್ಲೇಜರ್ಸ್ ತಂಡ ವೆಲಾಸಿಟಿಯನ್ನು ಕೇವಲ 47 ರನ್ಗಳಿಗೆ ಕಟ್ಟಿಹಾಕಿತ್ತು. ಅನುಭವಿ ಜೂಲನ್ ಗೋಸ್ವಾಮಿ 2 ವಿಕೆಟ್, ಸ್ಪಿನ್ನರ್ಗಳಾದ ಸಫೀ ಎಕ್ಲೆಸ್ಟೋನ್ 9ಕ್ಕೆ 4 ಹಾಗೂ ಗಾಯಕ್ವಾಡ್ 13ಕ್ಕೆ 2 ವಿಕೆಟ್ ಪಡೆದು ಮಿಂಚಿದ್ದರು.