ETV Bharat / sports

ಟ್ರೈಲ್​ಬ್ಲೇಜರ್ಸ್​ ಬೌಲರ್​ಗಳ ದಾಳಿಗೆ ತತ್ತರಿಸಿ 47ಕ್ಕೆ ಸರ್ವಪತನ ಕಂಡ ಮಿಥಾಲಿ ಪಡೆ - ರಾಜೇಶ್ವರಿ ಗಾಯಕ್ವಾಡ್​

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಲಾಸಿಟಿ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ನಿರಂತರ ವಿಕೆಟ್ ಕಳೆದುಕೊಂಡರಲ್ಲದೆ 15.1 ಓವರ್​ಗಳಲ್ಲಿ ಕೇವಲ 47 ರನ್​ಗಳಿಗೆ ಆಲೌಟ್​ ಆಗಿದೆ.

ವುಮೆನ್ಸ  ಟಿ20 ಚಾಲೆಂಜ್
ವುಮೆನ್ಸ ಟಿ20 ಚಾಲೆಂಜ್
author img

By

Published : Nov 5, 2020, 4:55 PM IST

ಶಾರ್ಜಾ: ವುಮೆನ್ಸ್​ ಟಿ20 ಚಾಲೆಂಜ್​ನ 2ನೇ ಪಂದ್ಯದಲ್ಲಿ ಟ್ರೈಲ್​ಬ್ಲೇಜರ್ಸ್​ ತಂಡದ ಬಿರುಗಾಳಿ ಬೌಲಿಂಗ್​ ದಾಳಿಗೆ ತತ್ತರಿಸಿದ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ ಕೇವಲ 47 ರನ್​ಗಳಿಗೆ ಸರ್ವಫತನ ಕಂಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಲಾಸಿಟಿ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ನಿರಂತರ ವಿಕೆಟ್ ಕಳೆದುಕೊಂಡರಲ್ಲದೆ 15.1 ಓವರ್​ಗಳಲ್ಲಿ ಕೇವಲ 47 ರನ್​ಗಳಿಗೆ ಆಲೌಟ್​ ಆಗಿದೆ.

ಆರಂಭಿಕ ಬ್ಯಾಟರ್​ ಶೆಫಾಲಿ ವರ್ಮಾ 13 ರನ್​ಗಳಿಸಿದ್ದೇ ವೆಲಾಸಿಟಿ ತಂಡದ ಗರಿಷ್ಠ ಸ್ಕೋರ್ ಆಯಿತು. ಇವರನ್ನು ಬಿಟ್ಟರೆ ಲೀ ಕಾಸ್ಪೆರಕ್​ 11, ಶಿಖಾ ಪಾಂಡೆ 10 ರನ್​ಗಳಿಸಿ ಎರಡಂಕಿ ಮೊತ್ತ ದಾಟಿದ ಬ್ಯಾಟರ್​ಗಳಾದರು. ಉಳಿದಂತೆ ನಾಯಕಿ ಮಿಥಾಲಿ, 1, ಡೇನಿಯಲ್ ವ್ಯಾಟ್​ 3, ವೇದಾ 1, ಸುನೆ ಲೂಸ್​ 4, ದಿಬ್ಯಾದರ್ಶಿನಿ 0, ಏಕ್ತಾ ಬಿಷ್ತ್​ 0 ಹಾಗೂ ಜಹನಾರ ಆಲಮ್ 1 ರನ್​ಗೆ ವಿಕೆಟ್ ಒಪ್ಪಿಸಿದರು.

ಅದ್ಭುತ ಬೌಲಂಗ್ ಪ್ರದರ್ಶನ ತೋರಿದ ಸೋಫಿ ಎಕ್ಲೆಸ್ಟೋನ್ 9 ರನ್​ ನೀಡಿ 4 ವಿಕೆಟ್ ಹುರುಳಿಸಿದರು. ಇವರಿಗೆ ಸೂಕ್ತ ಬೆಂಬಲ ನೀಡಿದ ಗೋಸ್ವಾಮಿ 13ಕ್ಕೆ 2, ಗಾಯಕ್ವಾಡ್​ 13ಕ್ಕೆ 2 ಹಾಗೂ ದೀಪ್ತಿ ಶರ್ಮಾ 8ಕ್ಕೆ 1 ವಿಕೆಟ್​ ಪಡೆದು ಮಿಂಚಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.