ಸಿಡ್ನಿ: ನ್ಯೂಜಿಲ್ಯಾಂಡ್ ತಂಡದ ಆಲ್ರೌಂಡರ್ ಸೊಫೀ ಡಿವೈನ್ ವುಮೆನ್ಸ್ ಬಿಗ್ಬ್ಯಾಶ್ನಲ್ಲಿ 100 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಶನಿವಾರ ಸ್ಪಾಟ್ಲೆಸ್ ಸ್ಟೇಡಿಯಂನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡಿವೈನ್ ಈ ದಾಖಲೆಗೆ ಪಾತ್ರರಾದರು. ಪರ್ತ್ ಸ್ಕಾರ್ಚರ್ಸ್ ತಂಡದ ಪರ ಆಡುವ ಡಿವೈನ್ ಅಜೇಯ 77 ರನ್ ಗಳಿಸಿ ತಮ್ಮ ತಂಡಕ್ಕೆ 9 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
-
Sophie Devine added some more #BrightLights to the festivities 💥
— ICC (@ICC) November 14, 2020 " class="align-text-top noRightClick twitterSection" data="
The New Zealand star became the first player in WBBL history to hit 💯 sixes!pic.twitter.com/QRIP6AL3BD
">Sophie Devine added some more #BrightLights to the festivities 💥
— ICC (@ICC) November 14, 2020
The New Zealand star became the first player in WBBL history to hit 💯 sixes!pic.twitter.com/QRIP6AL3BDSophie Devine added some more #BrightLights to the festivities 💥
— ICC (@ICC) November 14, 2020
The New Zealand star became the first player in WBBL history to hit 💯 sixes!pic.twitter.com/QRIP6AL3BD
ಈ ಇನ್ನಿಂಗ್ಸ್ನಲ್ಲಿ ಅವರು 54 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 77 ರನ್ ಗಳಿಸಿದರು. ಬಲಗೈ ಬ್ಯಾಟರ್ ಆಗಿರುವ ಡಿವೈನ್ ವುಮೆನ್ಸ್ ಬಿಬಿಎಲ್ನಲ್ಲಿ 74 ಪಂದ್ಯಗಳನ್ನಾಡಿದ್ದು, ಒಂದು ಶತಕದ ಸಹಿತ 2433 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಮೊತ್ತ 102 ಆಗಿದೆ. ಅವರು ಟೂರ್ನಿಯಲ್ಲಿ 15 ಅರ್ಧಶತಕ ಹಾಗೂ 2 ಶತಕ ಬಾರಿಸಿದ್ದಾರೆ.
ವುಮೆನ್ಸ್ ಬಿಎಲ್ನಲ್ಲಿ ಡಿವೈನ್ 101 ಸಿಕ್ಸ್ ಸಿಡಿಸಿದ್ದರೆ, 2ನೇ ಸ್ಥಾನದಲ್ಲಿರುವ ಆಶ್ಲೀ ಗಾರ್ಡ್ನರ್ 63 ಸಿಕ್ಸ್ ಸಿಡಿಸಿದ್ದಾರೆ. ಸಿಡ್ನಿ ಸಿಕ್ಸರ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ 48 ಸಿಕ್ಸರ್ಗಳೊಡನೆ 3ನೇ ಸ್ಥಾನದಲ್ಲಿದ್ದಾರೆ.