ಜೊಹಾನ್ಸ್ಬರ್ಗ್: ಕ್ರಿಕೆಟ್ ದಕ್ಷಿಣ ಆಫ್ರಿಕಾ ಬುಧವಾರ 3ಟಿ ಕ್ರಿಕೆಟ್ ಪಂದ್ಯವನ್ನು ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನದಂದು ನಡೆಸುವುದಾಗಿ ಘೋಷಣೆ ಮಾಡಿದ್ದು, ಈ ಪಂದ್ಯದಲ್ಲಿ ತಲಾ 8 ಆಟಗಾರರುಳ್ಳ ಮೂರು ತಂಡಗಳು ಒಂದೇ ಪಂದ್ಯದಲ್ಲಿ ಜುಲೈ 18 ರಂದು ಸಾಲಿಡಾರಿಟಿ ಕಪ್ನ ಉದ್ಘಾಟನಾ ಪಂದ್ಯದಲ್ಲಿ ಸ್ಪರ್ಧಿಸಲಿವೆ ಎಂದು ತಿಳಿಸಿದೆ.
ಸೆಂಚುರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮೂರು ತಂಡಗಳು ಸ್ಪರ್ಧಿಸುವುದನ್ನು ಕಾಣಬಹುದಾಗಿದೆ. ವಿಲಿಯರ್ಸ್ ನೇತೃತ್ವದ ಈಗಲ್ಸ್, ಕಗಿಸೊ ರಬಾಡ ನೇತೃತ್ವದ ಕಿಂಗ್ಫಿಶರ್ ಹಾಗೂ ಕ್ವಿಂಟನ್ ಡಿಕಾಕ್ ನೇತೃತ್ವದ ಕೈಟ್ಸ್ ತಂಡಗಳು ಸಾಲಿಡಾರಿಟಿ ಕಪ್ನಲ್ಲಿ ಪಾಲ್ಗೊಳ್ಳಲಿವೆ.
ಒಂದು ತಂಡಕ್ಕೆ 12 ಓವರ್ಗಳು ಮೀಸಲಿರುತ್ತದೆ. ಒಂದು ಇನ್ನಿಂಗ್ಸ್ನಲ್ಲಿ 6 ಓವರ್ಗಳ ಆಟ ನಡಯಲಿದ್ದು, ಬ್ಯಾಟಿಂಗ್ ಮಾಡುವ ತಂಡ ಎರಡು ತಂಡಗಳ ವಿರುದ್ಧಸ್ಪರ್ಧಿಸಲಿದೆ. 8 ಆಟಗಾರರಿರುವ ತಂಡದಲ್ಲಿ 7 ಆಟಗಾರರು ಔಟಾದರೂ ಉಳಿದ ಒಬ್ಬ ಬ್ಯಾಟ್ಸ್ಮನ್ ಆಟ ಏಕಾಂಗಿಯಾಗಿ ಬ್ಯಾಟಿಂಗ್ ನಡೆಸಬಹುದಾಗಿದೆ. ಈ ಪಂದ್ಯದಲ್ಲಿ ಕೇವಲ 2 ರನ್ ಹಾಗೂ ಬೌಂಡರಿ ಸಿಕ್ಸರ್ಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಎರಡು ಇನ್ನಿಂಗ್ಸ್ಗಳಲ್ಲಿ ಹೆಚ್ಚು ರನ್ ಬಾರಿಸಿದ ತಂಡವನ್ನು ವಿಜೇತರು ಎಂದು ಘೋಷಣೆ ಮಾಡಲಾಗುತ್ತದೆ.
"ಟಾಪ್ ಆಟಗಾರರನ್ನು ಒಳಗೊಂಡಿರುವ ಈ ಲೈವ್ ಪಂದ್ಯವನ್ನು ಟಿವಿ ಪರದೆಯ ಮೇಲೆ ವೀಕ್ಷಿಸಲು ರೋಮಾಂಚನಕಾರಿಯಾಗಿರುತ್ತದೆ ಎಂದು ಸಿಎಸ್ಎ ಮುಖ್ಯ ಕಾರ್ಯ ನಿರ್ವಾಹಕ(ಆ್ಯಕ್ಟಿಂಗ್) ಡಾ.ಜಾಕ್ಸ್ ಫಾಲ್ ಹೇಳಿದ್ದಾರೆ. ಈ ಪಂದ್ಯವನ್ನು ಆಯೋಜಿಸಲು ನೆಲ್ಸನ್ ಮಂಡೇಲಾ ದಿನಕ್ಕಿಂತ ಸೂಕ್ತವಾದ ದಿನದ ಬಗ್ಗೆ ಆಲೋಚಿಸಲು ನನಗೆ ಸಾಧ್ಯವಿಲ್ಲ. ಅದರ ಮುಖ್ಯ ಉದ್ದೇಶ ಎಂದರೆ ಕೊರೊನಾ ವೈರಸ್ನಿಂದ ಸೋಂಕಿಗೆ ಒಳಗಾಗಿರುವವರಿಗೆ ಹಣ ಸಂಗ್ರಹ ಮಾಡುವುದಾಗಿದೆ" ಎಂದು ಅವರು ತಿಳಿಸಿದ್ದಾರೆ.