ETV Bharat / sports

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಲಭ್ಯರಾಗಿದ್ದ​​​ ಸ್ಮೃತಿ ಮತ್ತೆ ಎಂಟ್ರಿ: ಶೆಫಾಲಿ ಗುಣಗಾನ

ಮಹಿಳಾ ಕ್ರಿಕೆಟ್​​ನಲ್ಲಿ ಹಾಲಿ ಚಾಂಪಿಯನ್​ ಆಗಿರೋ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶದ ವಿರುದ್ಧ ಗೆದ್ದು ತಮ್ಮ ಸಾಮರ್ಥ್ಯ ತೋರಿರುವ ಭಾರತೀಯ ನಾರಿಮಣಿಯರು ನಾಳೆ ಮಹಿಳಾ ಕಿವೀಸ್​​ ಪಡೆಯನ್ನು ಮೆಲ್ಬೋರ್ನ್​​ನಲ್ಲಿ ಎದುರುಗೊಳ್ಳಲಿದ್ದಾರೆ.

Smriti Mandhana re-entry  to women  team India
ಮಹಿಳಾ ಕ್ರಿಕೆಟ್​ ಟೀಂನ ಸ್ಟಾರ್​ ಓಪನರ್ ಸ್ಮೃತಿ ಮಂದಾನಾ ರಿ ಎಂಟ್ರಿ
author img

By

Published : Feb 26, 2020, 6:22 PM IST

Updated : Feb 26, 2020, 7:41 PM IST

ಮೆಲ್ಬೋರ್ನ್( ಆಸ್ಟ್ರೇಲಿಯಾ): ಮಹಿಳಾ ಕ್ರಿಕೆಟ್​​ನಲ್ಲಿ ಹಾಲಿ ಚಾಂಪಿಯನ್​ ಆಗಿರೋ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶದ ವಿರುದ್ಧ ಗೆದ್ದು ತಮ್ಮ ಸಾಮರ್ಥ್ಯ ತೋರಿರುವ ಭಾರತೀಯ ನಾರಿಮಣಿಯರು ನಾಳೆ ಮಹಿಳಾ ಕಿವೀಸ್​​ ಪಡೆಯನ್ನು ಮೆಲ್ಬೋರ್ನ್​ನಲ್ಲಿ ಎದುರುಗೊಳ್ಳಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೇ ಸೆಮೀಸ್​ಗೆ ಹತ್ತಿರವಾಗಲಿದೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಜ್ವರದ ಕಾರಣದಿಂದ ಭಾಗವಹಿಸಲಾಗದ ಸ್ಟಾರ್​ ಓಪನರ್​ ಸ್ಮೃತಿ ಮಂಧಾನ ನ್ಯೂಜಿಲ್ಯಾಂಡ್​​​ ವಿರುದ್ಧದ ಪಂದ್ಯದಲ್ಲಿ ಲಭ್ಯವಿದ್ದು ಭಾರತೀಯ ತಂಡ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್​ ಎರಡರಲ್ಲೂ ಕೂಡಾ ಉತ್ತಮ ಸಾಮರ್ಥ್ಯ ತೋರುವ ಸಾಧ್ಯತೆಯಿದೆ.

ಈ ಕುರಿತು ಮೆಲ್ಬರ್ನ್​ನಲ್ಲಿ ಮಾತನಾಡಿದ ಸ್ಮೃತಿ ಮಂಧಾನ '' ಪ್ರತಿ ಪಂದ್ಯವೂ ನನಗೆ ಹೊಸದು. ಹಿಂದಿನ ಎರಡು ವಿಶ್ವಕಪ್​​ಗಳಲ್ಲಿ ಏನಾಗಿದೆ ಎಂಬುದು ನನಗೆ ಮುಖ್ಯವಲ್ಲ. ನಾಳೆ ಮೂರನೇ ಪಂದ್ಯ ನಡೆಯಲಿದ್ದು ನ್ಯೂಜಿಲ್ಯಾಂಡ್​​​ ಅನ್ನು ಸೋಲಿಸುವ ವಿಶ್ವಾಸವಿದೆ'' ಎಂದಿದ್ದಾರೆ. ಇದರ ಜೊತೆಗೆ ಮಾತನಾಡಿದ ಅವರು, ಶೆಫಾಲಿ ವರ್ಮಾ ಬಗ್ಗೆ ಮಾತನಾಡಿ '' ಶೆಫಾಲಿ ತಂಡವನ್ನು ಬ್ಯಾಲೆನ್ಸ್​ ಮಾಡುವ ಸಾಮರ್ಥ್ಯವಿದ್ದು ಇಬ್ಬರೂ ಉತ್ತಮ ಜೊತೆಯಾಟ ಆಡುತ್ತೇವೆ'' ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಮಹಿಳಾ ಕ್ರಿಕೆಟ್​ ಟೀಂನ ಸ್ಟಾರ್​ ಓಪನರ್ ಸ್ಮೃತಿ ಮಂದಾನಾ ರಿ ಎಂಟ್ರಿ

ಇದೇ ವೇಳೆ ಮಾತನಾಡಿದ ನ್ಯೂಜಿಲ್ಯಾಂಡ್​​ ಆಟಗಾರ್ತಿ, ಬಲಗೈ ವೇಗಿ ಲಿಯಾ ತಹುಹು ''ಭಾರತದೊಂದಿಗೆ ಪಂದ್ಯವಾಡಲು ತುಂಬಾ ಉತ್ಸುಕತೆಯಿದೆ. ಒಂದು ವರ್ಷದ ನಂತರ ಚುಟುಕು ಪಂದ್ಯದಲ್ಲಿ ಸೆಣಸಾಡುತ್ತಿದ್ದೇವೆ'' ಎಂದರು. ಶೆಫಾಲಿ ವರ್ಮಾ ಬಗ್ಗೆ ಮಾತನಾಡಿದ ಅವರು ''ಒಂದು ವರ್ಷದ ಹಿಂದೆ ಶೆಫಾಲಿ ಐಪಿಎಲ್​​​ನಲ್ಲಿ ಆಡಿರುವುದನ್ನು ನೋಡಿದ್ದೇನೆ. ಅವರ ಆಟದ ಬಗ್ಗೆಯೂ ಕುತೂಹಲವಿದೆ. ನಾಳಿನ ಪಂದ್ಯಕ್ಕೆ ಎದುರು ನೋಡುತ್ತಿದ್ದೇವೆ. ಭಾರತವನ್ನು ಎದುರಿಸುವ ಬಗ್ಗೆ ಈಗಾಗಲೇ ಆಟಗಾರರು ಸಮಾಲೋಚನೆ ನಡೆಸಿದ್ದೇವೆ'' ಎಂದಿದ್ದಾರೆ.

ಇನ್ನು ಭಾರತ ಬೌಲಿಂಗ್​ ಹಾಗೂ ಬ್ಯಾಟಿಂಗ್​ ಎರಡರಲ್ಲೂ ಕೂಡಾ ಪ್ರಭಾವಶಾಲಿಯಾಗಿದ್ದು ನಾಳೆ ಬೆಳಗ್ಗೆ ನ್ಯೂಜಿಲ್ಯಾಂಡ್​​ ಅನ್ನು ಹೇಗೆ ಎದುರಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Last Updated : Feb 26, 2020, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.