ಆಂಟಿಗುವಾ: ಗಾಯದಿಂದ ಚೇತರಿಸಿಕೊಂಡು ಮರಳಿದ ಪಂದ್ಯದಲ್ಲೇ ವಿಂಡೀಸ್ ಮಹಿಳಾ ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ ಆರಂಭಿಕ ಆಟಗಾರ್ತಿ ಮಂಧಾನ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 2000 ಸಾವಿರ ರನ್ ಪೂರೈಸಿ ಭಾರತದ 2ನೇ ಕ್ರಿಕೆಟರ್ ಹಾಗೂ ವಿಶ್ವದ 3ನೇ ಮಹಿಳಾ ಕ್ರಿಕೆಟರ್ ಎಂಬ ದಾಖಲೆಗೆ ಪಾತ್ರರಾದರು.
ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಮಂಧಾನ ಪಾಲಿಗೆ ಈ ದಾಖಲೆ ಸೇರಿಕೊಂಡಿತು. ಈ ಪಂದ್ಯದಲ್ಲಿ ಮಂಧಾನ ಮಂಧಾನಾ 74 ರನ್ಗಳಿಸಿ ಮಿಂಚಿದರೆ, ಭಾರತ ವೆಸ್ಟ್ ಇಂಡೀಸ್ ವಿರುದ್ಧ ಆರು ವಿಕೆಟ್ಗಳಿಂದ ಜಯಗಳಿಸಿ ಸರಣಿಯನ್ನು 2-1ರಲ್ಲಿ ವಶಪಡಿಸಿಕೊಂಡಿತು.
ಮಂಧಾನಾ ಏಕದಿನ ಕ್ರಿಕೆಟ್ನಲ್ಲಿ 51 ಇನ್ನಿಂಗ್ಸ್ಗಳಲ್ಲಿ 2000 ರನ್ ಪೂರೈಸಿದರು. ಮಹಿಳಾ ಕ್ರಿಕೆಟ್ನಲ್ಲಿ ಈ ಬೆಲಿಂಡಾ ಕ್ಲಾರ್ಕ್ 41 ಮತ್ತು ಮೆಗ್ ಲ್ಯಾನಿಂಗ್ 45 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿ ಮೊದಲೆರಡು ಸ್ಥಾನದಲ್ಲಿದ್ದಾರೆ.
ಭಾರತದ ಶಿಖರ್ ಧವನ್ 48 ಇನ್ನಿಂಗ್ಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ 53, ಗಂಗೂಲಿ 52 ಇನಿಂಗ್ಸ್ಳಲ್ಲಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ 40 ಇನ್ನಿಂಗ್ಸ್ಗಳಲ್ಲಿ 2000 ರನ್ ಪೂರೈಸಿರುವ ಏಕೈಕ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
ವೇಗದ 2000 ರನ್... ಕೊಹ್ಲಿ, ಗಂಗೂಲಿಗಿಂತಲೂ ಫಾಸ್ಟ್ ಸ್ಮೃತಿ ಮಂಧಾನ! - ಭಾರತ ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್
ಕೇವಲ 51 ಇನ್ನಿಂಗಸ್ಗಳಲ್ಲಿ 2000 ರನ್ ಪೂರೈಸುವ ಮೂಲಕ ಮಂಧಾನ ಕೊಹ್ಲಿ ಹಾಗೂ ಗಂಗೂಲಿಗಿಂತಲೂ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.