ETV Bharat / sports

ಕ್ರಿಕೆಟ್​ ದಕ್ಷಿಣ ಆಫ್ರಿಕಾ ಬ್ಲಾಕ್​ ಲೈವ್ಸ್​ ಮ್ಯಾಟರ್​ ಆಂದೋಲನವನ್ನು ಬೆಂಬಲಿಸುತ್ತದೆ: ಗ್ರೇಮ್​ ಸ್ಮಿತ್​

author img

By

Published : Jul 9, 2020, 7:10 PM IST

ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡವು ಕ್ರಿಕೆಟಿಗರ ನ್ಯಾಯಯುತ ಪ್ರಾತಿನಿಧ್ಯವನ್ನು ನೀಡಿದೆ. ಕ್ರಿಕೆಟ್​ ಮಂಡಳಿಯ ನೀತಿಯ ಪ್ರಕಾರ ತಂಡ ಕಪ್ಪು ಅಥವಾ ಬೇರೆ ಬಣ್ಣದ ಆಟಗಾರರನ್ನು ಹೊಂದಿದೆ. ಆದ್ದರಿಂದ ಸಿಎಸ್​ಎ ಈ ಚಳುವಳಿಯನ್ನು ಇನ್ನಷ್ಟು ಮಹತ್ವದ್ದಾಗಿ ಮಾಡಲು ಬಯಸುತ್ತದೆ ಎಂದಿದ್ದಾರೆ.

ಗ್ರೇಮ್​ ಸ್ಮಿತ್​
ಗ್ರೇಮ್​ ಸ್ಮಿತ್​

ಜೋಹಾನ್ಸ್‌ಬರ್ಗ್‌: ಸ್ಪರ್ಧಾತ್ಮಕ ಕ್ರಿಕೆಟ್​ಗೆ ದಕ್ಷಿಣ ಆಫ್ರಿಕಾ ಮರಳಿದಾಗ ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಚಳವಳಿಗೆ ಸಿಎಸ್​ಎ ಬೆಂಬಲ ಸೂಚಿಸಲಿದೆ. ಈ ಅಭಿಯಾನಕ್ಕೆ ಎಲ್ಲರೂ ಒಂದಾಗಿ ಕೈಜೋಡಿಸಬೇಕು ಎಂದು ಸಿಎಸ್​ಎ ನಿರ್ದೇಶಕ ಗ್ರೇಮ್​ ಸ್ಮಿತ್​ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡವು ಕ್ರಿಕೆಟಿಗರ ನ್ಯಾಯಯುತ ಪ್ರಾತಿನಿಧ್ಯವನ್ನು ನೀಡಿದೆ. ಕ್ರಿಕೆಟ್​ ಮಂಡಳಿಯ ನೀತಿಯ ಪ್ರಕಾರ ತಂಡ ಕಪ್ಪು ಅಥವಾ ಬೇರೆ ಬಣ್ಣದ ಆಟಗಾರರನ್ನು ಹೊಂದಿದೆ. ಆದ್ದರಿಂದ ಸಿಎಸ್​ಎ ಈ ಚಳುವಳಿಯನ್ನು ಇನ್ನಷ್ಟು ಮಹತ್ವದ್ದಾಗಿ ಮಾಡಲು ಬಯಸುತ್ತದೆ ಎಂದಿದ್ದಾರೆ.

ಈಗಾಗಲೆ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್​ ಲುಂಗಿ ಎಂಗಿಡಿ ಬ್ಲಾಕ್​ಲೈವ್​ ಮ್ಯಾಟರ್ಸ್​ ಆಂದೋಲನಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಆಟಗಾರರಂತೆ 'ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌' ಲೋಗೊ ಧರಿಸಿ , ಮೈದಾನದಲ್ಲಿ ಕ್ರಿಕೆಟಿಗರು ಒಂದು ಮಂಡಿಯೂರಿ ಜಾರ್ಜ್ ಫ್ಲಾಯ್ಡ್ ಸಾವಿಗೆ ಸಂತಾಪ ಸೂಚಿಸುವ ಅಭಿಯಾನಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಹೇಳಿಕೊಂಡಿದ್ದರು.

ಪ್ರಪಂಚದಾದ್ಯಂತ ಏನು ನಡೆಯುತ್ತಿರುವುದರ ಬಗ್ಗೆ ಸಿಎಸ್ಎ [ಕ್ರಿಕೆಟ್ ದಕ್ಷಿಣ ಆಫ್ರಿಕಾ]ಗೆ ಅರಿವಿದೆ. ಇದರಲ್ಲಿ ನಮ್ಮ ಪಾತ್ರದ ಬಗ್ಗೆಯೂ ನಮಗೆ ಬಹಳ ತಿಳಿದಿದೆ ಎಂದು ಸ್ಮಿತ್​ ಹೇಳಿದ್ದಾರೆ.

ಇನ್ನು ಎಂಗಿಡಿ ಹೇಳಿಕೆಯನ್ನು ಸಮರ್ಥಿಸಿರುವ ಸ್ಮಿತ್, 'ನಾವೆಲ್ಲ ನಮ್ಮದೇ ಆದ ಪುಟ್ಟ ಪ್ರಪಂಚದಲ್ಲಿದ್ದೇವೆ. ಆದರೆ ಭವಿಷ್ಯದಲ್ಲಿ ನಾವೆಲ್ಲರೂ ಒಂದೆಡೆ ಸೇರಿ ಕ್ಕೆ ಬ್ಯಾಕ್​ಲೈವ್​ ಮ್ಯಾಟರ್​ ಆಂದೋಲನಕ್ಕೆ ಕೈ ಜೋಡಿಸಬೇಕಿದೆ. ಈ ವಿಷಯದಲ್ಲಿ ಲುಂಗಿ ಎಂಗಿಡಿ ನಿಲುವಿಗೆ ನಾವು ಬದ್ದರಾಗಿದ್ದೇವೆ' ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.